ETV Bharat / sports

ಹೊಸ ವರ್ಷದ ನೈಟ್​ಹುಡ್ ಪ್ರಶಸ್ತಿ ಲಿಸ್ಟ್​ನಲ್ಲಿ ಫಾರ್ಮುಲಾ 1 ರೇಸರ್​ ಹ್ಯಾಮಿಲ್ಟನ್​ ಹೆಸರು

ಈ ವರ್ಷ ಅವರು ಅತಿ ಹೆಚ್ಚು ವಿಶ್ವಚಾಂಪಿಯನ್​ಶಿಪ್​ ಗೆಲ್ಲುವ ಮೂಲಕ ಫಾರ್ಮುಲಾ ಒನ್ ದಂತಕತೆ ಮೈಕಲ್​ ಸುಮೇಕರ್​ ಅವರ ​ವಿಶ್ವದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಮೊಟ್ಟ ಮೊದಲ ಸಕ್ರಿಯ ಚಾಲಕರಾಗಿ ನೈಟ್​ಹುಡ್​ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ.

ಫಾರ್ಮುಲಾ 1 ವಿಶ್ವಚಾಂಪಿಯನ್​ ಲೂಯಿಸ್​ ಹ್ಯಾಮಿಲ್ಟನ್​

author img

By

Published : Dec 31, 2020, 9:59 PM IST

Updated : Mar 31, 2021, 2:48 PM IST

ಲಂಡನ್​: ಫಾರ್ಮುಲಾ 1 ವಿಶ್ವಚಾಂಪಿಯನ್​ ಲೂಯಿಸ್​ ಹ್ಯಾಮಿಲ್ಟನ್​ ನೈಟ್​ಹುಡ್​ ಅವಾರ್ಡ್​ ಪಡೆಯುವ ಮೂಲಕ ಯುಕೆಯ ಸಾಂಪ್ರದಾಯಿಕ ಗೌರವ ಪಟ್ಟಿಯಲ್ಲಿ ಸೇರಿಕೊಳ್ಳಲಿದ್ದಾರೆ.

ಈ ವರ್ಷ ಅವರು ಅತಿ ಹೆಚ್ಚು ವಿಶ್ವಚಾಂಪಿಯನ್​ಶಿಪ್​ ಗೆಲ್ಲುವ ಮೂಲಕ ಫಾರ್ಮುಲಾ ಒನ್ ದಂತಕತೆ ಮೈಕಲ್​ ಶುಮಾಕರ್​ ಅವರ ​ವಿಶ್ವದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಮೊಟ್ಟ ಮೊದಲ ಸಕ್ರಿಯ ಚಾಲಕರಾಗಿ ನೈಟ್​ಹುಡ್​ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ.

35 ವರ್ಷದ ಹ್ಯಾಮಿಲ್ಟನ್ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗುತ್ತಿರುವ 4ನೇ ಕಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಎರಡು ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಪಡೆದಿದ್ದ ಬ್ರಿಟನ್​ ಟೆನ್ನಿಸ್​ ತಾರೆ 29ನೇ ವಯಸ್ಸಿನಲ್ಲಿ ನೈಟ್​ಹುಡ್​ ಗೌರವಕ್ಕೆ ಪಾತ್ರರಾಗಿದ್ದರು. ಸೈಕ್ಲಿಸ್ಟ್ಗಳಾದ​ ಬ್ರ್ಯಾಡ್ಲೀ ವಿಗ್ಗಿನ್ಸ್​ ಮತ್ತು ಕ್ರಿಸ್​​ ಹೋಯ್​ 32ನೇ ವಯಸ್ಸಿನಲ್ಲಿ ಈ ಪ್ರತಿಷ್ಠಿತ ಗೌರವ ಪಡೆದಿದ್ದರು.

ಜ್ಯಾಕ್ ಬ್ರಾಭಮ್ (1978), ಸ್ಟಿರ್ಲಿಂಗ್ ಮಾಸ್ (2000), ಜಾಕಿ ಸ್ಟೀವರ್ಟ್ (2001) ನಂತರ ನೈಟ್​ಹುಡ್​ ಪ್ರಶಸ್ತಿಗೆ ಭಾಜನರಾಗುತ್ತಿರುವ 4ನೇ ಫಾರ್ಮುಲಾ 1ಚಾಲಕರಾಗಿದ್ದಾರೆ. ಹಾಗೂ 6ನೇ ಫಾರ್ಮುಲಾ ಒನ್​ ಕ್ರೀಡಾಪಟುವಾಗಿದ್ದಾರೆ. ಎಫ್ 1 ವಿಲಿಯಮ್ಸ್ ತಂಡದ ಸಹ-ಸಂಸ್ಥಾಪಕರಾದ ಫ್ರಾಂಕ್ ವಿಲಿಯಮ್ಸ್ ಮತ್ತು ಪ್ಯಾಟ್ರಿಕ್ ಹೆಡ್ ಕ್ರಮವಾಗಿ 1999 ಮತ್ತು 2015 ರಲ್ಲಿ ನೈಟ್​ಹುಟ್​ ಆಗಿದ್ದಾರೆ.

Last Updated : Mar 31, 2021, 2:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.