ETV Bharat / sports

ಫ್ರೆಂಚ್​​ ಓಪನ್‌ನಲ್ಲಿ ಬಾಲ್​ ಗರ್ಲ್​ಗೆ ಬಡಿದ ಚೆಂಡು: ಮಹಿಳಾ ಡಬಲ್ಸ್‌ ಆಟಗಾರ್ತಿಯರು ಅನರ್ಹ - ಟೆನಿಸ್​ ಆಟಗಾರ್ತಿ ಮಿಯು ಕಾಟೊ

ಬಾಲ್​ ಗರ್ಲ್​ಗೆ ಅಚಾನಕ್ಕಾಗಿ ಚೆಂಡು ಹೊಡೆದಿದ್ದರಿಂದ ಜಪಾನ್​ನ ಡಬಲ್ಸ್​ ಆಟಗಾರ್ತಿ ಮಿಯು ಕಾಟೊ ಅವರನ್ನು ಫ್ರೆಂಚ್​ ಓಪನ್​ನಿಂದಲೇ ಅನರ್ಹಗೊಳಿಸಲಾಗಿದೆ. ಭಾನುವಾರದ ಪಂದ್ಯದಲ್ಲಿ ಘಟನೆ ನಡೆಯಿತು.

ಡಬಲ್ಸ್​ ಆಟಗಾರ್ತಿ ಮಿಯು ಕಾಟೊ ಫ್ರೆಂಚ್​​ ಓಪನ್​ನಿಂದ ಅನರ್ಹ

author img

By

Published : Jun 5, 2023, 7:13 PM IST

ಪ್ಯಾರೀಸ್: ಆಕಸ್ಮಿಕವಾಗಿ ಬಾಲ್​ ಗರ್ಲ್​ಗೆ ಚೆಂಡು ಹೊಡೆದಿದ್ದರಿಂದ ಜಪಾನ್​ನ ಡಬಲ್ಸ್​ ಆಟಗಾರ್ತಿ ಮಿಯು ಕಾಟೊ ಮತ್ತು ಆಕೆಯ ಜೊತೆಗಾತಿ ಇಂಡೋನೇಷ್ಯಾದ ಅಲ್ಡಿಲಾ ಸುಟ್ಜಿಯಾಡಿ ಅವರನ್ನು ಫ್ರೆಂಚ್​​ ಓಪನ್​ನಿಂದ ಅನರ್ಹಗೊಳಿಸಲಾಗಿದೆ. ಟೆನಿಸ್​ ನಿಯಮಗಳ ಅನ್ವಯ ಕ್ರಮ ಕೈಗೊಳ್ಳಲಾಗಿದೆ.

ಭಾನುವಾರ ರೋಲ್ಯಾಂಡ್​ ಗ್ಯಾರೋಸ್​ನ 14ನೇ ಕೋರ್ಟ್​ನಲ್ಲಿ ಪಂದ್ಯ ನಡೆಯುತ್ತಿದ್ದಾಗ ಘಟನೆ ಸಂಭವಿಸಿತು. ಜೆಕ್ ಗಣರಾಜ್ಯದ ಮೇರಿ ಬೌಜ್ಕೋವಾ, ಸ್ಪೇನ್‌ನ ಸಾರಾ ಸೊರಿಬ್ಸ್ ಟೊರ್ಮೊ ಮತ್ತು ಮಿಯು ಕಾಟೊ, ಅಲ್ಡಿಲಾ ಸುಟ್ಜಿಯಾಡಿ ಜೋಡಿ ಅಂಕಣದಲ್ಲಿ ಸೆಣಸಾಡುತ್ತಿದ್ದರು. ಮೊದಲ ಸೆಟ್​ 7-6 ರಲ್ಲಿ ಕೊನೆಗೊಂಡು ಒಂದು ಸೆಟ್​ ಹಿನ್ನಡೆ ಅನುಭವಿಸಿದ್ದರು. 2 ನೇ ಸೆಟ್​ನಲ್ಲಿ ಮಿಯು ಕಾಟೊ, ಅಲ್ಡಿಲಾ ಸುಟ್ಜಿಯಾಡಿ ಜೋಡಿ ತಿರುಗೇಟು ನೀಡಿದರು. 3-1 ರಲ್ಲಿ ಸಾಗುತ್ತಿದ್ದರು.

  • Kronologi didiskualifikasinya pasangan Miyu KATO/Aldila SUTJIADI di babak ke 3 Grandslam Perancis Terbuka saat melawan pasangan M. Bouzkova/S. Sorribes Tormo pada kedudukan 6-7, 3-1.
    Hakim garis menyatakan pukulan lawan out,akan tetapi Miyu Kato masih bisa mengembalikan bola tsb pic.twitter.com/nX9Y92AvGX

    — Dr. Samuel L. Simon SpKK (@DrSLSimonSpKK) June 4, 2023 " class="align-text-top noRightClick twitterSection" data=" ">

ಈ ವೇಳೆ ಬಾಲ್​ ಗರ್ಲ್‌ ಅಂಕಣದಲ್ಲಿ ಬಂದಿರುವುದನ್ನು ನೋಡದೇ ಜಪಾನ್​ನ ಮಿಯು ಕಾಟೊ ಚೆಂಡನ್ನು ಇನ್ನೊಂದು ತುದಿಗೆ ಹೊಡೆದರು. ಚೆಂಡು ಅಲ್ಲಿದ್ದ ಬಾಲ್​ ಗರ್ಲ್​ ಕುತ್ತಿಗೆಗೆ ಬಲವಾಗಿ ಬಡಿಯಿತು. ನೋವಿನಿಂದ ಬಾಲ್​ ಗರ್ಲ್​ ಅಳಲು ಆರಂಭಿಸಿದಳು. ತಕ್ಷಣವೇ ಅಲ್ಲಿಗೆ ಹೋದ ಮಿಯು ಕಾಟೊ ಆಕೆಯ ಬಳಿ ಕ್ಷಮೆ ಕೋರಿದರು. ಬಳಿಕ ಚೇರ್​ ಅಂಪೈರ್​ ಅಲೆಕ್ಸಾಂಡ್ರೆ ಜು ಅವರು ಮಿಯು ಕಾಟೊ ಜೋಡಿಗೆ ಎಚ್ಚರಿಕೆ ನೀಡಿದರು.

ಅಚಾನಕ್ಕಾಗಿ ಚೆಂಡು ಬಡಿದಿದ್ದರಿಂದ ಬಾಲ್​ ಗರ್ಲ್​ 15 ನಿಮಿಷ ಅಳುತ್ತಿದ್ದಳು. ಇದರಿಂದ ಪ್ರೇಕ್ಷಕರು ಕೂಡಾ ಕೂಗಲು ಆರಂಭಿಸಿದ್ದಾರೆ. ಅಂಕಣಕ್ಕೆ ಬಂದ ರೆಫ್ರಿ ರೆಮಿ ಅಜೆಮಾರ್ ಮತ್ತು ಗ್ರ್ಯಾಂಡ್ ಸ್ಲಾಮ್ ಮೇಲ್ವಿಚಾರಕ ವೇಯ್ನ್ ಮೆಕ್ವೆನ್ ಆಟಗಾರ್ತಿಯರನ್ನು ವಿಚಾರಣೆ ನಡೆಸಿದರು. ಅವರಿಂದ ಸ್ಪಷ್ಟನೆ ಪಡೆದ ಬಳಿಕ ಆಟ ನಿಲ್ಲಿಸಿ ಇಬ್ಬರನ್ನೂ ಟೂರ್ನಿಯಿಂದ ಅನರ್ಹಗೊಳಿಸಿ, ಮೇರಿ ಬೌಜ್ಕೋವಾ, ಸಾರಾ ಸೊರಿಬ್ಸ್ ಟೊರ್ಮೊ ಜೋಡಿಯನ್ನು ಪಂದ್ಯದ ವಿಜೇತರನ್ನಾಗಿ ಘೋಷಿಸಲಾಯಿತು.

  • I would like to sincerely apologize to the Ball Girl, my partner Aldila&Team, & my supporters because of today's unfortunate mishap. It was completely unintentional.
    As a result, I am penalized by RG by forfeiting my prize money & points. I appreciate all your continued support!

    — Miyu Kato / 加藤 未唯 (@miyukato1121) June 4, 2023 " class="align-text-top noRightClick twitterSection" data=" ">

ಕ್ಷಮೆ ಕೋರಿದ ಮಿಯು ಕಾಟೊ: ಪಂದ್ಯದ ಬಳಿಕ ಟ್ವೀಟ್​ ಮಾಡಿ ಕ್ಷಮೆ ಕೋರಿರುವ ಆಟಗಾರ್ತಿ ಮಿಯು ಕಾಟೊ, ಇಂದಿನ ದುರದೃಷ್ಟಕರ ಘಟನೆಗೆ ನಾನು ಬಾಲ್ ಗರ್ಲ್, ನನ್ನ ಜೊತಿಗಾತಿ ಅಲ್ದಿಲಾ, ತಂಡ ಮತ್ತು ನನ್ನ ಬೆಂಬಲಿಗರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವೆ. ಇದು ಸಂಪೂರ್ಣ ಉದ್ದೇಶಪೂರ್ವಕವಲ್ಲದ ಘಟನೆ. ಬಹುಮಾನದ ಮೊತ್ತ ಮತ್ತು ಅಂಕಗಳನ್ನು ಕಳೆದುಕೊಂಡು ದಂಡನೆಗೆ ಒಳಗಾಗಿದ್ದೇನೆ. ನಿಮ್ಮೆಲ್ಲರ ನಿರಂತರ ಬೆಂಬಲವನ್ನು ನಾನು ಪ್ರಶಂಸಿಸುವೆ ಎಂದು ಹೇಳಿದ್ದಾರೆ.

ಇದೊಂದು ಕೆಟ್ಟ ಘಳಿಗೆ: ಬಳಿಕ ಘಟನೆಯ ಬಗ್ಗೆ ಮಾತನಾಡಿದ ಮೇರಿ ಬೌಜ್ಕೋವಾ ಮತ್ತು ಸಾರಾ ಸೊರಿಬ್ಸ್ ಟಾರ್ಮೊ, ಇದೊಂದು ಕೆಟ್ಟ ಘಳಿಗೆಯಾಗಿದೆ. ಎದುರಾಳಿ ಆಟಗಾರ್ತಿಯರಿಗೆ ಇದು ದುರದೃಷ್ಟಕರವಾಗಿದೆ. ಆದರೆ, ಟೆನಿಸ್​ ನಿಯಮಗಳಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದು ಭಾವಿಸುತ್ತೇವೆ ಎಂದರು.

ಜೆಕ್​ ಮತ್ತು ಸ್ಪೇನ್​ ಜೋಡಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಆಸ್ಟ್ರೇಲಿಯಾದ ಎಲೆನ್ ಪೆರೆಜ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ನಿಕೋಲ್ ಮೆಲಿಚಾರ್ ಮಾರ್ಟಿನೆಜ್ ಅವರನ್ನು ಮುಂದಿನ ಪಂದ್ಯದಲ್ಲಿ ಎದುರಿಸಲಿದ್ದಾರೆ.

ಇದಕ್ಕೂ ಮೊದಲು ಶನಿವಾರವಷ್ಟೇ 16 ವರ್ಷದ ಮಿರ್ರಾ ಆಂಡ್ರೀವಾ ಅವರು ಕೊಕೊ ಗೌಫ್ ಎದುರಿನ ಸಿಂಗಲ್ಸ್ ಪಂದ್ಯದ ವೇಳೆ ಕೋಪದಿಂದ ಪ್ರೇಕ್ಷಕರತ್ತ ಚೆಂಡನ್ನು ಬಲವಾಗಿ ಹೊಡೆದಿದ್ದರು. ಬಳಿಕ ಚೇರ್​ ಅಂಪೈರ್​ ಎಚ್ಚರಿಕೆ ನೀಡಿದ್ದರು. ಆಟಗಾರ್ತಿ ತನ್ನ ಡೀಫಾಲ್ಟ್ ಒಪ್ಪಿಕೊಂಡಿದ್ದರು. ಕ್ವಾರ್ಟರ್​ಗೆ ಎಂಟ್ರಿ ಕೊಟ್ಟಿರುವ ದಿಗ್ಗಜ ಆಟಗಾರ ನೊವಾಕ್ ಜೊಕೊವಿಕ್ ಯುಎಸ್ ಓಪನ್‌ನಲ್ಲಿ ಲೈನ್​ ಅಂಪೈರ್​ಗೆ ಚೆಂಡು ಹೊಡೆದು ಸುದ್ದಿಯಾಗಿದ್ದರು.

ಇದನ್ನೂ ಓದಿ: ವಿವಾದಕ್ಕೀಡಾದ ಕ್ರಿಕೆಟಿಗ ಯಶ್​ ದಯಾಳ್ ಇನ್‌ಸ್ಟಾ ಸ್ಟೋರಿ, ಕ್ಷಮೆಯಾಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.