ಪ್ಯಾರಿಸ್ : ವಿಶ್ವದ ನಂ.1 ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಫೈನಲ್ ಹಣಾಹಣಿಯಲ್ಲಿ ಸ್ವಿಯಾಟೆಕ್, ಅಮೆರಿಕದ ಕೊಕೊ ಗಾಫ್ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.
ಶನಿವಾರ ರೋಲ್ಯಾಂಡ್ ಗ್ಯಾರೋಸ್ ಫೈನಲ್‌ನಲ್ಲಿ ಇಗಾ ಸ್ವಿಯಾಟೆಕ್ 18ರ ಹರೆಯದ ಕೊಕೊ ಗಾಫ್ ಅವರನ್ನು 6-1, 6-3ರ ನೇರ ಸೆಟ್‌ಗಳಿಂದ ಸೋಲಿಸಿದರು. 2020ರಲ್ಲಿ ಕೂಡ ಫ್ರೆಂಚ್ ಓಪನ್ ಎತ್ತಿ ಹಿಡಿದಿದ್ದ ಸ್ವಿಯಾಟೆಕ್ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಪೋಲೆಂಡ್‌ನ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಗಾ 3 ವರ್ಷಗಳ ಅಂತರದಲ್ಲೇ ಎರಡನೇ ಸಲ ರೋಲ್ಯಾಂಡ್ ಗ್ಯಾರೋಸ್ ಪ್ರೇಕ್ಷಕರೆದುರು ಸಂಭ್ರಮಿಸಿದರು.
ಪ್ಯಾರಿಸ್‌ನಲ್ಲಿ ಕಿಕ್ಕಿರಿದು ತುಂಬಿದ್ದ ಜನಸಮೂಹದ ಎದುರು ಅಮೆರಿಕದ ಯುವ ಆಟಗಾರ್ತಿ ಕೊಕೊ ಗಾಫ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡರು. ಏಕಮುಖವಾದ ಫೈನಲ್‌ನಲ್ಲಿ ಸ್ವಿಯಾಟೆಕ್ ಕೇವಲ ಒಂದು ಗಂಟೆ 8 ನಿಮಿಷಗಳಲ್ಲೇ ಭರ್ಜರಿ ಜಯ ದಾಖಲಿಸಿದರು. 2000ನೇ ಇಸವಿಯಲ್ಲಿ ಯುಎಸ್ನ ವಿಲಿಯಮ್ಸ್ ಸೃಷ್ಟಿಸಿದ್ದ ಸತತ 35 ಗೆಲುವಿನ ದಾಖಲೆಯನ್ನು ಪೋಲೆಂಡ್ ಆಟಗಾರ್ತಿ ಸಮಗೊಳಿಸಿದರು.
-
Together again 🏆#RolandGarros | @iga_swiatek pic.twitter.com/KEgxf2pr45
— Roland-Garros (@rolandgarros) June 4, 2022 " class="align-text-top noRightClick twitterSection" data="
">Together again 🏆#RolandGarros | @iga_swiatek pic.twitter.com/KEgxf2pr45
— Roland-Garros (@rolandgarros) June 4, 2022Together again 🏆#RolandGarros | @iga_swiatek pic.twitter.com/KEgxf2pr45
— Roland-Garros (@rolandgarros) June 4, 2022
ಫೈನಲ್‌ನಲ್ಲಿ ಸ್ವಿಯಾಟೆಕ್ಗೆ ಕಠಿಣ ಸವಾಲೊಡ್ಡಲು ವಿಫಲರಾದ ಗಾಫ್ ಮೊದಲ ಸೆಟ್ನಲ್ಲೇ ವಿಚಲಿತರಾದರು. ಎರಡನೇ ಸೆಟ್‌ನ ಆರಂಭದಲ್ಲಿ 2-0 ಮುನ್ನಡೆ ಸಾಧಿಸಿ ಪುನರಾಗಮನದ ಭರವಸೆ ಮೂಡಿಸಿದರೂ ಕೂಡ ಮತ್ತೆ ಮುಗ್ಗರಿಸಿದರು. ಬಳಿಕ 2-2ರಲ್ಲಿ ಸಮಬಲ ಸಾಧಿಸಿದ ಸ್ವಿಯಾಟೆಕ್, 6-3ರಿಂದ ಸೆಟ್ ಗೆದ್ದು ಗೆಲವಿನ ಸಂಭ್ರಮದಲ್ಲಿ ತೇಲಿದರು.
ಡಬಲ್ಸ್ ಫೈನಲ್ : ಸಿಂಗಲ್ಸ್ ರನ್ನರ್ ಅಪ್ ಆದ ಗಾಫ್, ತಮ್ಮದೇ ದೇಶದ ಜೆಸ್ಸಿಕಾ ಪೆಗುಲಾ ಜೊತೆ ಭಾನುವಾರ ನಡೆಯುವ ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ಟ್ರೋಫಿ ಗೆಲ್ಲುವ ಅವಕಾಶ ಹೊಂದ್ದಾರೆ. 8ನೇ ಶ್ರೇಯಾಂಕದ ಈ ಜೋಡಿ ಕೆಳ ಶ್ರೇಯಾಂಕದ ಫ್ರೆಂಚ್ ಜೋಡಿಯಾದ ಕ್ರಿಸ್ಟಿನಾ ಮ್ಲಾಡೆನೊವಿಕ್ ಮತ್ತು ಕ್ಯಾರೊಲಿನ್ ಗಾರ್ಸಿಯಾ ಅವರನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ: T20 ವಿಶ್ವಕಪ್ ಕ್ವಾಲಿಫೈಯರ್ನಲ್ಲಿ ಕೇವಲ 8 ರನ್ಗಳಿಗೆ ನೇಪಾಳ ತಂಡ ಆಲೌಟ್!