ETV Bharat / sports

ಫೈನಲ್‌ಗೇರುವ ಇಂಗ್ಲೆಂಡ್​ ಕನಸು ಭಗ್ನ: ಸೆಮೀಸ್​ನಲ್ಲಿ ಮೊರಾಕ್ಕೊ-ಫ್ರಾನ್ಸ್ ಪೈಪೋಟಿ

ಫಿಫಾ ವಿಶ್ವಕಪ್: 1966ರ ನಂತರ ವಿಶ್ವಕಪ್​ ಗೆಲ್ಲುವ ಕನಸು ಹೊತ್ತಿದ್ದ ಇಂಗ್ಲೆಂಡ್​ಗೆ ನಿರಾಶೆಯಾಗಿದೆ. ಫ್ರಾನ್ಸ್​ಗೆ ಸೆಮೀಸ್​ಗೆ ಪ್ರವೇಶ ಪಡೆದುಕೊಂಡಿತು.

author img

By

Published : Dec 11, 2022, 8:03 AM IST

Updated : Dec 11, 2022, 8:46 AM IST

France advances to semifinals at World Cup
ಫೈನಲ್​ ಏರುವ ಇಂಗ್ಲೆಂಡ್​ ಕನಸು ಭಗ್ನ

ಅಲ್ ಖೋರ್ (ಕತಾರ್): ಫಿಫಾ ವಿಶ್ವಕಪ್ ಟೂರ್ನಿಯ ಅಂತಿಮ ಸುತ್ತು​ ಪ್ರವೇಶಿಸಲು ಫ್ರಾನ್ಸ್‌ ತಂಡ ಇನ್ನೊಂದು ಅಡಿ ಇಡಬೇಕಿದೆ. ನಿನ್ನೆ ಆಂಗ್ಲರೆದುರಿನ ಪಂದ್ಯದಲ್ಲಿ 2-1 ಗೋಲುಗಳಿಂದ ಗೆದ್ದ ಹಾಲಿ ಚಾಂಪಿಯನ್ನರು ಸೆಮಿಫೈನಲ್ ತಲುಪಿದರು. ಇಲ್ಲಿನ ಅಲ್ ಬೇಟ್ ಸ್ಟೇಡಿಯಂನಲ್ಲಿ ನಡೆದ ರೋಮಾಂಚಕ ಕಾದಾಟದ 78ನೇ ನಿಮಿಷದಲ್ಲಿ ಒಲಿವಿಯರ್ ಗಿರೌಡ್ ಗಳಿಸಿದ ಗೋಲು ಫ್ರಾನ್ಸ್‌ ತಂಡವನ್ನು ವಿಶ್ವಕಪ್‌ ಸನಿಹಕ್ಕೆ ಕೊಂಡೊಯ್ದರೆ, 1966ರ ನಂತರ ಕಪ್​ ಗೆಲ್ಲುವ ಕನಸು ಕಾಣುತ್ತಿದ್ದ ಇಂಗ್ಲೆಂಡ್​ಗೆ ನಿರಾಶೆಯಾಯಿತು.

ಪಂದ್ಯಾರಂಭದ 17 ನಿಮಿಷಗಳ ನಂತರ ಆಂಟೊಯಿನ್ ಗ್ರೀಜ್‌ಮನ್ ಅವರು ಫ್ರಾನ್ಸ್​ ಪರ ಮೊದಲ ಗೋಲು ದಾಖಲಿಸಿದರು. 54 ನಿಮಿಷದವರೆಗೆ ಗೋಲ್​ ಗಳಿಸಲು ಬಬಿಟೀಷ್​ ಪಡೆ ಸಾಕಷ್ಟು ಸೆಣಸಿತು. 54ನೇ ನಿಮಿಷದಲ್ಲಿ ಹ್ಯಾರಿ ಕೇನ್ ಚೆಂಡನ್ನು ಗೋಲ್‌ ಕೀಪರ್ ಲೊರಿಸ್ ಅವರನ್ನು ವಂಚಿಸಿ ಗೋಲ್ ಪೋಸ್ಟ್‌ ಸೇರುವಂತೆ ಮಾಡಿದರು. ಇದರಿಂದ ಇತ್ತಂಡಗಳು ಸಮಬಲ ಸಾಧಿಸಿದವು. ಇದು ಇಂಗ್ಲೆಂಡ್‌ಗೆ​ಪೆನಾಲ್ಟಿ ಕಿಕ್​ನಲ್ಲಿ ದೊರೆತ ಗೋಲ್ ಆಗಿದೆ.

78 ನೇ ನಿಮಿಷದಲ್ಲಿ ಒಲಿವಿಯರ್ ಗಿರೌಡ್ ಗೋಲು ಗಳಿಸಿ ಫ್ರಾನ್ಸ್​ಗೆ ಮುನ್ನಡೆ ತಂದರು. 82ನೇ ನಿಮಿಷದಲ್ಲಿ ಇಂಗ್ಲೆಂಡ್‌ಗೆ ಪೆನಾಲ್ಟಿ ಅವಕಾಶ ಮತ್ತೊಮ್ಮೆ ಒಲಿದುಬಂತು. ಈ ಪೆನಾಲ್ಟಿಯಲ್ಲಿ ತಂಡಕ್ಕೆ ಗೋಲ್​ ಪಡೆಯಲು ಸಾಧ್ಯವಾಗಲಿಲ್ಲ.

ಫ್ರಾನ್ಸ್ ಈ ಗೆಲುವಿನೊಂದಿಗೆ ಪೋರ್ಚುಗಲ್ ಮಣಿಸಿ ಸೆಮೀಸ್​ಗೆ ಬಂದಿರುವ ಮೊರಕ್ಕೊವನ್ನು ಎದುರಿಸ ಬೇಕಿದೆ. ಫ್ರಾನ್ಸ್ ತಂಡಕ್ಕಿದು 7ನೇ ವಿಶ್ವಕಪ್ ಸೆಮಿಫೈನಲ್ ಆಗಿದೆ. 1962ರಲ್ಲಿ ಬ್ರೆಜಿಲ್ ನಂತರ ಸತತ ಆವೃತ್ತಿಗಳಲ್ಲಿ ಫೈನಲ್​ ಹಂತ ತಲುಪಿದ ತಂಡ ಎಂಬ ಖ್ಯಾತಿಗೂ ಗುರಿಯಾಯಿತು. ಇದೇ ವೇಳೆ, ವಿಶ್ವಕಪ್‌ನ ಕ್ವಾರ್ಟರ್-ಫೈನಲ್ ಹಂತದಿಂದ ಇಂಗ್ಲೆಂಡ್ ಏಳನೇ ಬಾರಿ ಹೊರಗುಳಿಯಿತು.

ಇದನ್ನೂ ಓದಿ: ಪೋರ್ಚುಗಲ್​ ಮಣಿಸಿ ಸೆಮೀಸ್​ ತಲುಪಿದ ಮೊರಾಕ್ಕೊ; ವಿಶ್ವಕಪ್​ ಗೆಲ್ಲದೇ ರೊನಾಲ್ಡೊ ನಿವೃತ್ತಿ?

Last Updated : Dec 11, 2022, 8:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.