ETV Bharat / sports

ರೇಸರ್​ ಹ್ಯಾಮಿಲ್ಟನ್ ವಿರುದ್ಧ ಜನಾಂಗೀಯ ನಿಂದನೆ.. ಒಗ್ಗಟ್ಟು ಪ್ರದರ್ಶಿಸಿದ ಫಾರ್ಮುಲಾ-1 ತಂಡಗಳು

author img

By

Published : Jul 22, 2021, 12:06 PM IST

ಕಳೆದೆರಡು ದಿನದ ಹಿಂದೆ ನಡೆದಿದ್ದ ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್ ರೇಸ್​​ನಲ್ಲಿ ರೇಸರ್​ ಲೆವಿಸ್ ಹ್ಯಾಮಿಲ್ಟನ್‌ ಹಾಗೂ ಮ್ಯಾಕ್ಸ್ ವರ್ಸ್ಟಪ್ಪೆನ್ ಕಾರುಗಳ ನಡುವೆ ಆಕಸ್ಮಿಕ ಅಪಘಾತ ಸಂಭವಿಸಿತ್ತು. ಇದನ್ನೇ ನೆಪವಾಗಿಟ್ಟುಕೊಂಡ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಲೆವಿಸ್ ಹ್ಯಾಮಿಲ್ಟನ್‌ ವಿರುದ್ಧ ಜನಾಂಗೀಯ ನಿಂದನೆ ಜೊತೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಫಾರ್ಮುಲಾ-1 ತಂಡಗಳು ಹ್ಯಾಮಿಲ್ಟನ್​ ಪರ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

formula-1-fraternity-comes-in-support-of-lewis-hamilton
ರೇಸರ್​ ಹ್ಯಾಮಿಲ್ಟನ್ ವಿರುದ್ಧ ಜನಾಂಗೀಯ ನಿಂದನೆ

ಸಿಲ್ವರ್​​​ಸ್ಟೋನ್ (ಇಂಗ್ಲೆಂಡ್​): ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್ ರೇಸ್​​ನಲ್ಲಿ ಉಂಟಾದ ಅಪಘಾತದ ಬಳಿಕ ರೇಸರ್​ ಲೆವಿಸ್ ಹ್ಯಾಮಿಲ್ಟನ್‌ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದ ಜನಾಂಗೀಯ ಟೀಕೆಗಳ ವಿರುದ್ಧ ಫಾರ್ಮುಲಾ-1 ಸಮುದಾಯ ಧ್ವನಿ ಎತ್ತಿದೆ. ಮರ್ಸಿಡಿಸ್-ಎಎಂಜಿ ಪೆಟ್ರೋನಾಸ್ ಹಾಗೂ ಫಾರ್ಮುಲಾ-1 ತಂಡ ಜಂಟಿ ಮಾಧ್ಯಮಗೋಷ್ಟಿ ನಡೆಸಿದ್ದು, ಜನಾಂಗೀಯ ಅವಹೇಳನವು ಸ್ವೀಕಾರಾರ್ಹವಲ್ಲ ಎಂದಿದ್ದಾರೆ.

ರೇಸರ್​ ಲೆವಿಸ್ ಹ್ಯಾಮಿಲ್ಟನ್‌ ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್ ರೇಸ್​​ ಜಯಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದರು. ಆದರೆ ಇದನ್ನು ಫಾರ್ಮುಲಾ -1, ಎಫ್‌ಐಎ ಮತ್ತು ಮರ್ಸಿಡಿಸ್-ಎಎಂಜಿ ಪೆಟ್ರೋನಾಸ್ ಎಫ್-1 ತಂಡಗಳು ಬಲವಾಗಿ ಖಂಡಿಸುತ್ತದೆ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಲೆವಿಸ್ ಹ್ಯಾಮಿಲ್ಟನ್‌ ಜೊತೆ ಇತರೆ ಸ್ಪರ್ಧಿಗಳು ಸಹ ರೇಸ್​ನಲ್ಲಿ ಭಾಗಿಯಾಗಿದ್ದರು, ಅವರೆಲ್ಲರೂ ಹ್ಯಾಮಿಲ್ಟನ್‌ರನ್ನು ಬೆಂಬಲಿಸಿದ್ದಾರೆ. ಈ ಕುರಿತು ಅಪಘಾತಕ್ಕೊಳಗಾದ ಮ್ಯಾಕ್ಸ್ ವರ್ಸ್ಟಪ್ಪೆನ್ ನಿಯೋಜಿತ ಸಂಸ್ಥೆ ರೆಡ್​ ಬುಲ್ ಸಹ ಪ್ರಕಟಣೆ ಹೊರಡಿಸಿದ್ದು, ನಾವು ಟ್ರ್ಯಾಕ್​​ನಲ್ಲಿ ಪ್ರತಿಸ್ಪರ್ಧಿಯಾಗಿರಬಹುದು. ಆದರೆ ಜನಾಂಗೀಯ ಟೀಕೆಗಳ ವಿರುದ್ಧವಾಗಿರುತ್ತೇವೆ. ನಮ್ಮ ತಂಡ ಅಥವಾ ಪ್ರತಿಸ್ಪರ್ಧಿಗಳ ಬಗ್ಗೆ ಯಾವುದೇ ರೀತಿಯ ವರ್ಣಭೇದ ನೀತಿಗೆ ನಾವು ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಹ್ಯಾಮಿಲ್ಟನ್ ವಿರುದ್ಧದ ಟೀಕೆಗಳಿಗೆ ಉತ್ತರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.