ನವದೆಹಲಿ: ಮುಂಬೈ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ದೇಶಿಯ ಕ್ರಿಕೆಟ್ನ ದಿಗ್ಗಜ ಅಮೋಲ್ ಮುಜುಂದಾರ್ ಅವರು ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರ ಣ ಮಂಡಳಿ (ಬಿಸಿಸಿಐ) ಬುಧವಾರ (ಅಕ್ಟೋಬರ್ 25) ಪತ್ರಿಕಾ ಪ್ರಕಟಣೆ ಮೂಲಕ ಖಚಿತಪಡಿಸಿದೆ. ಸುಲಕ್ಷಣ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಮುಜುಂದಾರ್ ಅವರನ್ನು ಸರ್ವಾನುಮತದಿಂದ ಶಿಫಾರಸು ಮಾಡಿತ್ತು.
-
🚨 NEWS 🚨
— BCCI Women (@BCCIWomen) October 25, 2023 " class="align-text-top noRightClick twitterSection" data="
Mr Amol Muzumdar Appointed as Head Coach - Team India (Senior Women).
Details 🔽https://t.co/6y0TiQ2prF
">🚨 NEWS 🚨
— BCCI Women (@BCCIWomen) October 25, 2023
Mr Amol Muzumdar Appointed as Head Coach - Team India (Senior Women).
Details 🔽https://t.co/6y0TiQ2prF🚨 NEWS 🚨
— BCCI Women (@BCCIWomen) October 25, 2023
Mr Amol Muzumdar Appointed as Head Coach - Team India (Senior Women).
Details 🔽https://t.co/6y0TiQ2prF
ದೇಶೀಯ ಕ್ರಿಕೆಟ್ನಲ್ಲಿ ದೊಡ್ಡ ಹೆಸರು ಮಾಡಿರುವ ಮುಜುಂದಾರ್ ತಮ್ಮ 21 ವರ್ಷಗಳ ವೃತ್ತಿಜೀವನದಲ್ಲಿ 30 ಶತಕಗಳು ಒಳಗೊಂಡಂತೆ 171 ಪಂದ್ಯಗಳಲ್ಲಿ 11,000 ಪ್ರಥಮ ದರ್ಜೆ ರನ್ ಗಳಿಸಿದ್ದಾರೆ. ಮುಜುಂದಾರ್ 100ಕ್ಕೂ ಹೆಚ್ಚು ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. 14 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೇಶೀಯ ಮಹತ್ವದ ರಣಜಿ ಟ್ರೋಫಿಯಲ್ಲಿ ಮುಂಬೈ ಪ್ರತಿನಿಧಿಸಿದ್ದಲ್ಲದೇ ಹಲವು ಬಾರಿ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು. ನಂತರ ಅಸ್ಸಾಂ ಮತ್ತು ಆಂಧ್ರಪ್ರದೇಶಕ್ಕೂ ಆಡಿದ್ದರು.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಅಮೋಲ್ ಮುಜುಂದಾರ್ ನೇಮಕವನ್ನು ನಾನು ಸ್ವಾಗತಿಸುತ್ತೇನೆ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ. ಭಾರತದ ಮಾಜಿ ಆಟಗಾರ ಬಿನ್ನಿ ಅವರು ಅಮೋಲ್ ಅವರ ಅಧಿಕಾರವಧಿಯಲ್ಲಿ ತಂಡವು ವಿವಿಧ ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
"ತಂಡವು ದ್ವಿಪಕ್ಷೀಯ ಮತ್ತು ಬಹುರಾಷ್ಟ್ರಗಳ ಈವೆಂಟ್‌ಗಳಲ್ಲಿ ಸತತವಾಗಿ ಪ್ರಭಾವಶಾಲಿ ಪ್ರದರ್ಶನಗಳನ್ನು ನೀಡಿದೆ. ಮುಜುಂದಾರ್ ಮಾರ್ಗದರ್ಶನದಲ್ಲಿ ನಮ್ಮ ಆಟಗಾರ್ತಿಯರು ಇನ್ನಷ್ಟೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ಬಿನ್ನಿ ಹೇಳಿದರು.
ಮುಜುಂದಾರ್ ಜ್ಞಾನ ಮತ್ತು ಪರಿಣತಿಯು ತಂಡಕ್ಕೆ ನೆರವಾಗಲಿದೆ. ಆಧುನಿಕ ಆಟದ ಬಗ್ಗೆ ಆಳವಾದ ತಿಳುವಳಿಕೆ ಹೊಂದಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. "ಬಿಸಿಸಿಐ ಮಹಿಳಾ ಕ್ರಿಕೆಟ್‌ಗೆ ಮೈದಾನದ ಒಳಗೆ ಮತ್ತು ಹೊರಗೆ ತಂಡಕ್ಕೆ ಉತ್ತಮ ವಾತಾವರಣವನ್ನು ಒದಗಿಸುವುದನ್ನು ಮುಂದುವರಿಸುತ್ತದೆ. ಮಂಡಳಿಯು ಮುಜುಂದಾರ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಮ್ಮ ಆಟಗಾರರು ತಮ್ಮ ಸಂಪೂರ್ಣ ಸಾಮರ್ಥ್ಯ ತಲುಪಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ" ಶಾ ತಿಳಿಸಿದ್ದಾರೆ.
ಮುಜುಂದಾರ್ ಪ್ರತಿಕ್ರಿಯಿಸಿ, "ಈ ಹುದ್ದೆಗೆ ನನ್ನ ದೃಷ್ಟಿಕೋನ ಮತ್ತು ಮಾರ್ಗಸೂಚಿಯನ್ನು ಒಪ್ಪಿಕೊಂಡು ನೇಮಕ ಮಾಡಿದ ಸಿಎಸಿ ಮತ್ತು ಬಿಸಿಸಿಐಗೆ ಧನ್ಯವಾದಗಳು. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದಕ್ಕೆ ನನಗೆ ಸಂತಸವಾಗಿದೆ. ಪ್ರತಿಭಾವಂತ ಆಟಗಾರರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.
ಇದನ್ನೂ ಓದಿ: ಶ್ರೇಷ್ಠತೆ ಎಂಬುದಿಲ್ಲ, ಉತ್ತಮವಾಗಿ ಕಾರ್ಯನಿರ್ವಹಿಸುವುದು ಗುರಿ ಆಗಿರಬೇಕು: ವಿರಾಟ್ ಕೊಹ್ಲಿ