ETV Bharat / sports

ಚಿನ್ನದ ಪದಕ ವಿಜೇತ ಮಾಜಿ ಬಾಕ್ಸರ್‌ ಡಿಂಗ್​ಕೋ ಸಿಂಗ್ ವಿಧಿವಶ

author img

By

Published : Jun 10, 2021, 11:08 AM IST

ದೇಶದ ಅತ್ಯತ್ತಮ ಬಾಕ್ಸರ್​​ಗಳಲ್ಲಿ ಒಬ್ಬರಾಗಿದ್ದು, ಏಷ್ಯನ್​ ಗೇಮ್ಸ್​​ನಲ್ಲಿ ಚಿನ್ನದ ಪದಕ ವಿಜೇತರಾದ ಡಿಂಗ್​​ಕೋ ಸಿಂಗ್ ನಿಧರಾಗಿದ್ದಾರೆ.

Former boxer Dingko Singh passes away
ಡಿಂಗ್​ಕೋ ಸಿಂಗ್ ವಿಧಿವಶ

ನವದೆಹಲಿ: ಲಿವರ್​ ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಾಜಿ ಬಾಕ್ಸರ್ ಡಿಂಗ್​​ಕೋ ಸಿಂಗ್ ನಿಧನರಾಗಿದ್ದಾರೆ. 1998ರಲ್ಲಿ ಬ್ಯಾಂಕಾಕ್​ನಲ್ಲಿ ನಡೆದ ಏಷ್ಯನ್ ಗೇಮ್ಸ್​​ನಲ್ಲಿ ಚಿನ್ನದ ಸಾಧನೆ ಮಾಡಿದ್ದ ಇವರು, 2017 ರಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ದೇಶದ ಅತ್ಯುತ್ತಮ ಬಾಕ್ಸರ್​ ಎಂಬ ಖ್ಯಾತಿಯನ್ನೂ ಪಡೆದಿದ್ದ ಸಿಂಗ್‌ ಅವರ ಅಗಲಿಕೆಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ. ​

"ಡಿಂಗ್​​ಕೋ ಸಿಂಗ್ ಅವರ ಅಗಲಿಕೆ ನನಗೆ ತೀವ್ರ ದು:ಖ ಉಂಟು ಮಾಡಿದೆ. ಭಾರತದ ಅತ್ಯುತ್ತಮ ಬಾಕ್ಸರ್​ಗಳಲ್ಲಿ ಒಬ್ಬರಾಗಿದ್ದು 1998 ರಲ್ಲಿ ಬ್ಯಾಂಕಾಕ್​ನಲ್ಲಿ ನಡೆದ ಏಷ್ಯನ್​ ಗೇಮ್ಸ್​​ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ದೇಶದ ಬಾಕ್ಸಿಂಗ್ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದರು"

- ಸಚಿವ ಕಿರಣ್​ ರಿಜಿಜು ಟ್ವೀಟ್​

  • I’m deeply saddened by the demise of Shri Dingko Singh. One of the finest boxers India has ever produced, Dinko's gold medal at 1998 Bangkok Asian Games sparked the Boxing chain reaction in India. I extend my sincere condolences to the bereaved family. RIP Dinko🙏 pic.twitter.com/MCcuMbZOHM

    — Kiren Rijiju (@KirenRijiju) June 10, 2021 " class="align-text-top noRightClick twitterSection" data=" ">

ಡಿಂಗ್​ಕೋ ಅಗಲಿಕೆಗೆ ವೃತ್ತಿಪರ ಬಾಕ್ಸಿಂಗ್ ತಾರೆ ವಿಜೇಂದರ್​ ಸಿಂಗ್ ಸಂತಾಪ ಸೂಚಿಸಿದ್ದು, ಡಿಂಗ್​ಕೋ ಅವರ ಜೀವನ ಮತ್ತು ಹೋರಾಟ ಮುಂಬರುವ ಪೀಳಿಗೆಗೆ ಸ್ಫೂರ್ತಿ ಎಂದಿದ್ದಾರೆ.

  • My sincerest condolences on this loss May his life's journey & struggle forever remain a source inspiration for the upcoming generations. I pray that the bereaved family finds the strength to overcome this period of grief & mourning 🙏🏽 #dinkosingh

    — Vijender Singh (@boxervijender) June 10, 2021 " class="align-text-top noRightClick twitterSection" data=" ">

ಕಳೆದ ಮೇ ತಿಂಗಳಲ್ಲಿ ಕೋವಿಡ್​ ವೈರಸ್​​ಗೆ ತುತ್ತಾಗಿದ್ದ ಡಿಂಗ್​ಕೋ ಶೀಘ್ರದಲ್ಲೇ ಚೇತರಿಸಿಕೊಂಡಿದ್ದರು. ಲಿವರ್​ ಕ್ಯಾನ್ಸರ್​​​ನಿಂದ ಬಳಲುತ್ತಿದ್ದ ಅವರನ್ನು ಕಳೆದ ವರ್ಷ ಏಪ್ರಿಲ್​​ನಲ್ಲಿ ಚಿಕಿತ್ಸೆಗಾಗಿ ಮಣಿಪುರದ ಇಂಫಾಲದಿಂದ ದೆಹಲಿಗೆ ಏರ್​​ಲಿಫ್ಟ್​ ಮಾಡಲಾಗಿತ್ತು.

ಇದನ್ನೂ ಓದಿ: French Open 2021: ಸೆಮಿಫೈನಲ್​ನಲ್ಲಿ ನಡಾಲ್​-ಜೋಕೊವಿಕ್ ಮುಖಾಮುಖಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.