ಬೊಗೋಟ(ಕೊಲಂಬಿಯಾ): 3 ವಿಶ್ವಕಪ್ಗಳಲ್ಲಿ ಭಾಗಿಯಾಗಿದ್ದ ಕೊಲಂಬಿಯಾ ರಾಷ್ಟ್ರೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಫ್ರೆಡ್ಡಿ ರಿಂಕನ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಸೋಮವಾರ 55 ವರ್ಷದ ಫುಟ್ಬಾಲ್ ಪ್ಲೇಯರ್ ಚಲಿಸುತ್ತಿದ್ದ ಕಾರು ಕಲಿ ಎಂಬ ಸ್ಥಳದಲ್ಲಿ ಬಸ್ಗೆ ಡಿಕ್ಕಿ ಹೊಡೆದಿದ್ದರಿಂದ ರಿಂಕನ್ ಗಂಭೀರವಾಗಿ ಗಾಯಗೊಂಡಿದ್ದರು. ಬುಧವಾರ ಕೊಲಂಬಿಯನ್ ಫುಟ್ಬಾಲ್ ಫೆಡರೇಷನ್ ರಿಂಕಿನ್ ನಿಧನರಾಗಿರುವ ಸುದ್ದಿ ಹಂಚಿಕೊಂಡಿದೆ.
ರಿಂಕಿನ್ ಅವರ ನಿಧನಕ್ಕೆ ಫೆಡರೇಷನ್ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ. ಈ ಕಷ್ಟದ ಸಂದರ್ಭದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಸಂಬಂಧಿಕರಿಗೆ ಧೈರ್ಯದಿಂದಿರುವಂತೆ ಪ್ರೋತ್ಸಾಹದ ಸಂದೇಶವನ್ನು ಕಳುಹಿಸುತ್ತದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
-
Many of you are sharing your personal memories.
— FIFA.com (@FIFAcom) April 14, 2022 " class="align-text-top noRightClick twitterSection" data="
For millions, it is this 1990 World Cup goal.
Into injury time, @FCFSeleccionCol needed a goal to draw the game and avoid elimination from the group stage. Then this happened... 🇨🇴💔pic.twitter.com/Mz8syMxLZ5
">Many of you are sharing your personal memories.
— FIFA.com (@FIFAcom) April 14, 2022
For millions, it is this 1990 World Cup goal.
Into injury time, @FCFSeleccionCol needed a goal to draw the game and avoid elimination from the group stage. Then this happened... 🇨🇴💔pic.twitter.com/Mz8syMxLZ5Many of you are sharing your personal memories.
— FIFA.com (@FIFAcom) April 14, 2022
For millions, it is this 1990 World Cup goal.
Into injury time, @FCFSeleccionCol needed a goal to draw the game and avoid elimination from the group stage. Then this happened... 🇨🇴💔pic.twitter.com/Mz8syMxLZ5
ರಿಂಕನ್ 1990, 1994 ಮತ್ತು 1998ರ ಫಿಫಾ ವಿಶ್ವಕಪ್ಗಳಲ್ಲಿ ಕೊಲಂಬಿಯಾ ತಂಡದ ಪರ ಆಡಿದ್ದರು. ಇದರ ಜೊತೆಗೆ ಅವರ ವೃತ್ತಿ ಜೀವನದಲ್ಲಿ ಕೊಲಂಬಿಯನ್ ಮತ್ತು ಬ್ರೆಜಿಲಿಯನ್ ಕ್ಲಬ್ಗಳ ಜೊತೆಗೆ ಮಿಡ್ ಫೀಲ್ಡರ್ ಪ್ರಸಿದ್ಧ ರಿಯಲ್ ಮ್ಯಾಡ್ರಿಡ್, ಪಾರ್ಮ ಮತ್ತು ನ್ಯಾಪೋಲಿ ಕ್ಲಬ್ಗಳಲ್ಲೂ ಆಡಿದ್ದರು. ರಿಂಕನ್ ಸಾವಿಗೆ ಸಂತಾಪ ಸೂಚಿಸಿರುವ ಫಿಫಾ, 1990ರ ಇಟಲಿಯ ವಿಶ್ವಕಪ್ ವೇಳೆ ರಿಂಕನ್ ಸಿಡಿಸಿದ್ದ ಸ್ಮರಣೀಯ ಗೋಲುಗಳ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್ಗೆ ಭುವನೇಶ್ವರ್ಗಿಂತ ಪಂಜಾಬ್ ತಂಡದ ಈ ಬೌಲರ್ ಸೂಕ್ತ: ಮಂಜ್ರೇಕರ್