ETV Bharat / sports

FIH ಸೀರಿಸ್ ಫೈನಲ್​​ ​: ಜಪಾನ್​ ವಿರುದ್ಧ 3-1 ಗೋಲುಗಳಿಂದ ಗೆಲುವು ಪಡೆದ ಭಾರತ ನಾರಿಯರು

ಭಾರತೀಯ ಮಹಿಳೆಯರು ಎಫ್​ಐಎಚ್​ ಸೀರಿಸ್​ ಹಾಕಿ ಟೂರ್ನಿಯ ಫೈನಲ್​ನಲ್ಲಿ ಜಪಾನ್​ ವಿರುದ್ಧ 3-1 ಗೋಲುಗಳಲ್ಲಿ ಗೆಲ್ಲುವ ಮೂಲಕ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

FIH Series Finals
author img

By

Published : Jun 23, 2019, 10:14 PM IST

ಹಿರೋಶಿಮಾ: ಭಾರತೀಯ ಮಹಿಳೆಯರು ಎಫ್​ಐಎಚ್​ ಸೀರಿಸ್​ ಹಾಕಿ ಟೂರ್ನಿಯ ಫೈನಲ್​ನಲ್ಲಿ ಜಪಾನ್​ ವಿರುದ್ಧ 3-1 ಗೋಲುಗಳಲ್ಲಿ ಗೆಲ್ಲುವ ಮೂಲಕ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

ಚಿಲಿಗೆ ಸೋಲುಣಿಸಿ ಫೈನಲ್​ ಪ್ರವೇಶಿಸಿದ್ದ ಭಾರತದ ವನಿತೆಯರು ತಂಡ ಬಲಿಷ್ಠ ಜಪಾನ್​ಗೆ ಸೋಲುಣಿಸುವ ಮೂಲಕ ಚಾಂಪಿಯನ್​ ಪಟ್ಟ ಪಡೆದಿದೆ.

ಭಾರತದ ಪರ ನಾಯಕಿ ರಾಣಿ ಪಂದ್ಯ ಆರಂಭವಾದ 3ನೇ ನಿಮಿಷದಲ್ಲೇ ಗೋಲುಗಳಿಸಿ ಮುನ್ನಡೆ ಒದಗಿಸಿದರು. ಆದರೆ ಎದುರಾಳಿ ತಂಡದ ಕನೋನ್​ ಮೊರಿ 11 ನೇ ನಿಮಿಷದಲ್ಲಿ ಗೋಲುಗಳಿಸಿ ಸಮಬಲಕ್ಕೆ ತಂದರು.

ಆದರೆ 45 ಮತ್ತು 60 ನೇ ನಿಮಿಷದಲ್ಲಿ ಗುರ್ಜಿತ್​ ಕೌರ್​ ಗೋಲುಗಳಿಸಿ ಭಾರತ ತಂಡಕ್ಕೆ ಜಯ ದೊರಕಿಸಿಕೊಟ್ಟರು. ನಾಯಕಿ ರಾಣಿ ಅತ್ಯುತ್ತಮ ಆಟಗಾರ್ತಿ ಹಾಗೂ ಗುರ್ಜಿತ್​ ಕೌರ್​ ಹೆಚ್ಚು ಗೋಲುಗಳಿಸಿದ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು. ಇದೇ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಿ ಒಲಿಂಪಿಕ್​ಗೂ ಸಹಾ ಅರ್ಹತೆಗಿಟ್ಟಿಸಿಕೊಂಡಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.