ದೋಹ, ಕತಾರ್: ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಅರ್ಜೆಂಟೀನಾ ಫುಟ್ಬಾಲ್ ವಿಶ್ವಕಪ್ಗೆ ಮುತ್ತಿಕ್ಕಿತ್ತು. ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಮತ್ತು ಯುವ ತಾರೆ ಕೈಲಿಯನ್ ಎಂಬಪ್ಪೆ ರೋಚಕ ಆಟ ಪ್ರದರ್ಶಿಸಿದರು. ಆದ್ರೆ ಪಂದ್ಯದುದ್ದಕ್ಕೂ ಮಿಂಚಿದ್ದ ಎಂಬಪ್ಪೆ ಶ್ರಮ ಕೊನೆಗೂ ವ್ಯರ್ಥವಾಯಿತು.
ನಿಗದಿತ 90 ನಿಮಿಷಗಳ ನಂತರ ಸ್ಕೋರ್ 2-2ರಲ್ಲಿ ಸಮನಾದ ನಂತರ ಪಂದ್ಯ ಹೆಚ್ಚುವರಿ ಸಮಯದಲ್ಲೂ ಸಹ ಪಂದ್ಯ 3-3ರಲ್ಲಿ ಸಮಬಲಗೊಂಡಿತ್ತು. ಇದಾದ ಬಳಿಕ ಪಂದ್ಯ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ಸೋಲಿಸಿದ ಅರ್ಜೆಂಟೀನಾ ಪಂದ್ಯವನ್ನು 4-2ರಿಂದ ಗೆದ್ದು 36 ವರ್ಷಗಳ ಬಳಿಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಗೂ ಗೆಲುವಿನ ಆಸೆ ಕಂಡಿದ್ದ ಫ್ರಾನ್ಸ್ ಸೋಲು ಒಪ್ಪಿಕೊಂಡಿತು. ತಂಡದ ಗೆಲುವಿಗಾಗಿ ಹೋರಾಟ ನಡೆಸಿದ್ದ ಎಂಬಪ್ಪೆ ಶ್ರಮ ವ್ಯರ್ಥವಾಯಿತು. ಪಂದ್ಯದ ಸೋಲಿನ ಬಳಿಕ ಎಂಬಪ್ಪೆ ತೀವ್ರ ಬೇಸರಗೊಂಡಿದ್ದರು. ಈ ಸಮಯದಲ್ಲಿ ಎಂಬಪ್ಪೆ ಅವರನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸಂತೈಸಿದರು. ಕೊನೆಯ ಕ್ಷಣದಲ್ಲಿ ಗೆಲುವಿನ ಆಸೆ ಕಂಡಿದ್ದ ಫ್ರಾನ್ಸ್ ಅಭಿಮಾನಿಗಳು ಭಾವುಕರಾದರು.
-
Fiers de vous. pic.twitter.com/9RMjIGMKGU
— Emmanuel Macron (@EmmanuelMacron) December 18, 2022 " class="align-text-top noRightClick twitterSection" data="
">Fiers de vous. pic.twitter.com/9RMjIGMKGU
— Emmanuel Macron (@EmmanuelMacron) December 18, 2022Fiers de vous. pic.twitter.com/9RMjIGMKGU
— Emmanuel Macron (@EmmanuelMacron) December 18, 2022
ಫೈನಲ್ ಬಳಿಕ ಟ್ವೀಟ್ ಮಾಡಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, 'ವಿಶ್ವಕಪ್ ಫೈನಲ್ನಲ್ಲಿ ಹೋರಾಡಿದ ಫ್ರೆಂಚ್ ತಂಡಕ್ಕೆ ಅಭಿನಂದನೆಗಳು. ನೀವು ರಾಷ್ಟ್ರ ಮತ್ತು ಪ್ರಪಂಚದಾದ್ಯಂತ ಬೆಂಬಲಿಗರನ್ನು ರೋಮಾಂಚನಗೊಳಿಸಿದ್ದೀರಿ. ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇನೆ. ಅರ್ಜೆಂಟೀನಾ ಗೆಲುವಿಗಾಗಿ ಅಭಿನಂದನೆಗಳು' ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಫ್ರಾನ್ಸ್ ತಂಡವನ್ನು ಭೇಟಿ ಮಾಡಿರುವ ಫ್ರೆಂಚ್ ಅಧ್ಯಕ್ಷರು, ಆಟಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಓದಿ: FIFA World Cup: ಎಂಬಪ್ಪೆ ಶ್ರಮ ವ್ಯರ್ಥ, 36 ವರ್ಷಗಳ ಬಳಿಕ ಅರ್ಜೆಂಟೀನಾ ವಿಶ್ವ ಚಾಂಪಿಯನ್