ETV Bharat / sports

ಫಿಫಾ ವಿಶ್ವ​ಕಪ್​: ಇರಾನ್ ಮಣಿಸಿದ ಇಂಗ್ಲೆಂಡ್ ಶುಭಾರಂಭ - ETv Bharat kannada news

ಫಿಫಾ ವಿಶ್ವಕಪ್‌: ಇರಾನ್ ವಿರುದ್ಧ 6-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿರುವ ಇಂಗ್ಲೆಂಡ್ ಜಾಗತಿಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

Good start for England in FIFA World Cup
ಫಿಫಾ ವಿಶ್ವ​ಕಪ್​ನಲ್ಲಿ ಇಂಗ್ಲೆಂಡ್​ಗೆ ಶುಭಾರಂಭ
author img

By

Published : Nov 22, 2022, 8:25 AM IST

ದೋಹಾ(ಕತಾರ್):​​ ಇರಾನ್ ವಿರುದ್ಧ 6-2 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದ ಇಂಗ್ಲೆಂಡ್‌ ತಂಡ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಇಂಗ್ಲಿಷರ​ ಗೆಲುವಿಗೆ ಬುಕಾಯೊ ಸಾಕಾ ಮತ್ತು ಮಾರ್ಕಸ್ ರಾಶ್‌ಫೋರ್ಡ್ ಮಿಂಚಿನ ಆಟ ನೆರವಾಯಿತು. ಮೊದಲ ಪಂದ್ಯದಲ್ಲೇ ಎದುರಾದ ಪ್ರಬಲ ದಾಳಿ ಹಿಮ್ಮೆಟ್ಟಿಸುವಲ್ಲಿ ಇರಾನ್​ ವಿಫಲವಾಗಿ ಸೋತು ನಿರಾಶೆ ಅನುಭವಿಸಿತು.

ಇಂಗ್ಲೆಂಡ್ ಪರ ಜೂಡ್ ಬೆಲ್ಲಿಂಗ್ಹ್ಯಾಮ್ ಪಂದ್ಯದ 35ನೇ ನಿಮಿಷದಲ್ಲಿ ಮೊದಲ ಗೋಲ್​ಗಳಿಸಿ ಖಾತೆ ತೆರೆದರು. ಸಾಕಾ 43 ನೇ ನಿಮಿಷದಲ್ಲಿ ಮತ್ತೊಂದು ಗೋಲ್​ ಹೊಡೆದು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದರು. ಇದಾದ ಬಳಿಕ ರಹೀಮ್ ಸ್ಟರ್ಲಿಂಗ್ ಮತ್ತೊಂದು ಗೋಲ್​ ಗಳಿಸಿ 3-0 ರಲ್ಲಿ ಆಂಗ್ಲರಿಗೆ ಮೇಲುಗೈ ತಂದುಕೊಟ್ಟರು.

ಇನ್ನು ಪಂದ್ಯದ ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್​ ತಂಡವು ಇರಾನ್​ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಹಲವು ಬಾರಿ ಗೋಲ್​ ಹೊಡೆಯಲು ವಿಫಲವಾಗಿಯೂ 62 ನೇ ನಿಮಿಷದಲ್ಲಿ ಸಾಕಾ 2ನೇ ಗೋಲ್​​ ಗಳಿಸಿದರು. ಇದರಿಂದ ಇರಾನ್​​ ಮತ್ತಷ್ಟು ಒತ್ತಡಕ್ಕೆ ಸಿಲುಕಿತು. ಕೊನೆಯ 71ನೇ ನಿಮಿಷ, 89 ನೇ ನಿಮಿಷದಲ್ಲಿ ರಾಶ್‌ಫೋರ್ಡ್ ಮತ್ತು ಜಾಕ್ ಗ್ರೀಲಿಶ್ ತಲಾ ಒಂದೊಂದು​ ಗೋಲ್‌ಗಳ ಮೂಲಕ ಇಂಗ್ಲೆಂಡ್​ 6 ಗೋಲು ಗಳಿಸಲು ಸಹಕರಿಸಿದರು. ಇದರೊಂದಿಗೆ ಇಂಗ್ಲೆಂಡ್‌ಗೆ ಪ್ರಚಂಡ ಗೆಲುವು ಖಚಿತವಾಯಿತು.

ಇರಾನ್ ಪರ ಮಹ್ದಿ ತೆರಮಿ 65ನೇ ನಿಮಿಷದಲ್ಲಿ ಮತ್ತು 90 ನೇ ನಿಮಿಷದಲ್ಲಿ 2 ಗೋಲ್​​ ಗಳಿಸಿ ಸೋಲಿನ ಅಂತರ ಕಡಿಮೆ ಮಾಡಲು ಸಹಕರಿಸಿದರು. ತೆರಮಿ ಹೊರತುಪಡಿಸಿ ತಂಡದ ಯಾರೊಬ್ಬ ಆಟಗಾರನೂ ಒಂದು ಗೋಲ್ ಕೂಡಾ​​ ಗಳಿಸಲಿಲ್ಲ.

ಇದನ್ನೂ ಓದಿ: ಫಿಫಾ ವಿಶ್ವಕಪ್‌: ನಾಯಕನ ಮಿಂಚಿನಾಟ, ಆತಿಥೇಯ ಕತಾರ್​ ಸೋಲಿಸಿ ಇತಿಹಾಸ ಬರೆದ ಈಕ್ವೆಡಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.