ಅಲ್ರಯ್ಯಾನ್(ಕತಾರ್): ಯುರೋಪಿಯನ್ ಬಲಿಷ್ಠ ತಂಡವಾದ ಜರ್ಮನಿಯನ್ನು ಸೋಲಿಸಿದ್ದ ಏಷ್ಯಾ ಉಪಖಂಡದ ಜಪಾನ್ ಕೋಸ್ಟರಿಕಾ ವಿರುದ್ಧ ಸೋಲು ಕಂಡಿತು. ಕಳೆದ ಪಂದ್ಯವನ್ನು ಸೋತಿದ್ದ ಕೋಸ್ಟರಿಕಾ ಇಂದು 1-0 ಗೋಲಿನಿಂದ ಜಪಾನ್ ಮಣಿಸಿ ಗ್ರೂಪ್ ಇ ಪಟ್ಟಿಯಲ್ಲಿ 3 ಅಂಕ ಪಡೆದುಕೊಂಡಿತು.
ರೋಚಕ ಪಂದ್ಯದಲ್ಲಿ ಕೊನೆಯವರೆಗೂ ಗೋಲು ಗಳಿಸಲು ಉಭಯ ತಂಡಗಳು ಭಾರಿ ಸಾಹಸ ಮಾಡಿದವು. ಪಂದ್ಯ ಮುಗಿಯಲು 9 ನಿಮಿಷ ಬಾಕಿ ಇರುವಾಗ (81 ನೇ ನಿಮಿಷ) ಕೋಸ್ಟರಿಕಾ ತಂಡದ ಕೀಷರ್ ಫುಲ್ಲರ್ ಗೋಲು ಬಾರಿಸಿ ಕ್ರೀಡಾಂಗಣದ ತುಂಬೆಲ್ಲಾ ಮೆರೆದಾಡಿದರು. ಜಪಾನ್ನ ಗೋಲ್ಕಿಪರ್ ಶುಚಿ ಗೊಂಡಾರ ತಡೆಗೋಡೆಯನ್ನು 18 ಮೀಟರ್ ದೂರದಿಂದಲೇ ಬೇಧಿಸಿದ ಕೀಷರ್ ಚೆಂಡನ್ನು ಗುರಿ ಮುಟ್ಟಿಸಿದರು.
-
Costa Rica break through to beat Japan!@adidasfootball | #FIFAWorldCup
— FIFA World Cup (@FIFAWorldCup) November 27, 2022 " class="align-text-top noRightClick twitterSection" data="
">Costa Rica break through to beat Japan!@adidasfootball | #FIFAWorldCup
— FIFA World Cup (@FIFAWorldCup) November 27, 2022Costa Rica break through to beat Japan!@adidasfootball | #FIFAWorldCup
— FIFA World Cup (@FIFAWorldCup) November 27, 2022
ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೋಲು ಗಳಿಸಿ ಗೆಲುವು ಸಾಧಿಸಿದಾಗ್ಯೂ ಕೋಸ್ಟರಿಕಾ ಮತ್ತು ಜಪಾನ್ ತಂತ್ರಗಾರಿಕೆ ಮೆರೆಯುವಲ್ಲಿ ವಿಫಲವಾದವು. ಚೆಂಡಿನ ಮೇಲೆ ಹಿಡಿತ ಸಾಧಿಸುವಲ್ಲಿ ಉಭಯ ಆಟಗಾರರು ಚಾಕಚಕ್ಯತೆ ಮೆರೆಯಲಿಲ್ಲ. ಮೊದಲಾರ್ಧದಲ್ಲಿ ಚೆಂಡನ್ನು ಗೋಲಿನ ಬಲೆಗೆ ಸೇರಿಸುವವ ಯತ್ನದಲ್ಲಿ ಎರಡೂ ತಂಡಗಳ ಆಟಗಾರರು ವೈಫಲ್ಯ ಕಂಡರು.
ಜಪಾನ್ ತಂಡ ದ್ವಿತೀಯಾರ್ಧದಲ್ಲಿ ಸ್ವಲ್ಪ ಚುರುಕಿನ ಆಟ ಪ್ರದರ್ಶಿಸಿತು. ಹಲವು ಬಾರಿ ಗೋಲು ಗಳಿಸುವ ಯತ್ನ ನಡೆಸಿತು. ಆದರೆ, ಕೋಸ್ಟರಿಕಾ ಕೀಪರ್ ಕೀಲರ್ ನವಾಸ್ ಭದ್ರತಡೆಗೋಡೆ ನಿರ್ಮಿಸಿ ಜಪಾನ್ಗೆ ನಿರಾಸೆ ಮೂಡಿಸಿದರು. ಮುಂದಿನ ಪಂದ್ಯದಲ್ಲಿ ಜಪಾನ್ ಬಲಿಷ್ಠ ಹಾಲಿ ಚಾಂಪಿಯನ್ ಸ್ಪೇನ್‌ನೊಂದಿಗೆ ಸೆಣಸಾಡಿದರೆ, ಗೆಲುವಿನ ಅಲೆಯಲ್ಲಿರುವ ಕೋಸ್ಟರಿಕಾ ಜರ್ಮನಿಯನ್ನು ಎದುರಿಸಲಿದೆ.
ಜಪಾನ್ ತನ್ನ ಮೊದಲ ಪಂದ್ಯದಲ್ಲಿ ಜರ್ಮನಿಯನ್ನು 2-1 ರಿಂದ ಸೋಲಿಸಿತ್ತು. ಸ್ಪೇನ್ ವಿರುದ್ಧ ಕಾದಾಡಿದ್ದ ಕೋಸ್ಟರಿಕಾ 7-0 ಗೋಲುಗಳಿಂದ ಹೀನಾಯವಾಗಿ ಸೋಲು ಕಂಡಿತ್ತು.
ಓದಿ: ಮೆಕ್ಸಿಕೋ ವಿರುದ್ಧ ಅರ್ಜೆಂಟೀನಾ ಗೆಲುವು: ಮೆಸ್ಸಿ ಆಟ ನೋಡಲು ಕ್ರೀಡಾಂಗಣದಲ್ಲಿ ಜನಸಾಗರ!