ದೋಹಾ (ಕತಾರ್) : ಕತಾರ್ ಆತಿಥ್ಯ ವಹಿಸುತ್ತಿರುವ ಫಿಫಾ ವಿಶ್ವಕಪ್ 2022 ಸೀಸನ್ನಲ್ಲಿ ಭಾನುವಾರ ರಾತ್ರಿ ಪ್ರಿ-ಕ್ವಾರ್ಟರ್ ಫೈನಲ್‌ನ ಮೂರನೇ ಮತ್ತು ನಾಲ್ಕನೇ ಪಂದ್ಯವನ್ನು ಆಡಲಾಯಿತು. ಈ ಪಂದ್ಯಗಳಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ತಂಡಗಳು ಎದುರಾಳಿ ತಂಡಗಳನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾವೆ.
ಪೋಲೆಂಡ್ ವಿರುದ್ಧ ಫ್ರಾನ್ಸ್ಗೆ ಭರ್ಜರಿ ಜಯ: ಕಳೆದ ರಾತ್ರಿ ನಡೆದ ಮೂರನೇ ಪ್ರಿ-ಕ್ವಾರ್ಟರ್ ಪಂದ್ಯದಲ್ಲಿ ಪೋಲೆಂಡ್ ವಿರುದ್ಧ ಹಾಲಿ ಚಾಂಪಿಯನ್ ಫ್ರಾನ್ಸ್ ಅಮೋಘ ಪ್ರದರ್ಶನ ನೀಡಿತು. ರಾಬರ್ಟ್ ಲೆವಾಂಡೋಸ್ಕಿ ಬಳಗ ಪೋಲೆಂಡ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿತು. ಇದರೊಂದಿಗೆ ಫ್ರಾನ್ಸ್ ಕೂಡ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.
ಈ ಪಂದ್ಯದ ಹೀರೋಗಳೆಂದ್ರೆ 23 ವರ್ಷದ ಎಂಬಪ್ಪೆ ಮತ್ತು ಒಲಿವಿಯರ್ ಗಿರಾಡ್. ಎಂಬಪ್ಪೆ 2 ಅದ್ಭುತ ಗೋಲುಗಳನ್ನು ಬಾರಿಸಿದರೆ, ಗಿರಾಡ್ ಒಂದು ಗೋಲು ಗಳಿಸಿ ತಮ್ಮ ತಂಡ ಫ್ರಾನ್ಸ್ ಅನ್ನು ಸೂಪರ್-8 ಗೆ ಕೊಂಡೊಯ್ದರು. ಫ್ರಾನ್ಸ್ ಕಳೆದ ಬಾರಿ ಚಾಂಪಿಯನ್ ಆಗಿತ್ತು. ವಿಶ್ವಕಪ್ ಇತಿಹಾಸದಲ್ಲಿ ಫ್ರಾನ್ಸ್ ತಂಡ 9ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಸೆನೆಗಲ್ ಮಣಿಸಿ ಕ್ವಾರ್ಟರ್ಗೆ ಲಗ್ಗೆಯಿಟ್ಟ ಇಂಗ್ಲೆಂಡ್: ಪ್ರಿ-ಕ್ವಾರ್ಟರ್ ಫೈನಲ್‌ನ ನಾಲ್ಕನೇ ಪಂದ್ಯವನ್ನು ಭಾನುವಾರ ತಡರಾತ್ರಿ ಆಡಲಾಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅಮೋಘ ಆಟ ಪ್ರದರ್ಶಿಸಿ ಸೆನೆಗಲ್ ತಂಡವನ್ನು 3-0 ಅಂತರದಿಂದ ಸೋಲಿಸಿತು. ಇದರೊಂದಿಗೆ ಇಂಗ್ಲೆಂಡ್ ಕೂಡ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಕ್ವಾರ್ಟರ್ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಡಿಸೆಂಬರ್ 11, ಅಂದ್ರೆ ಮುಂಬರುವ ಭಾನುವಾರದಂದು ಎದುರಿಸಲಿದೆ.
ಈ ಪಂದ್ಯದ ಹೀರೋಗಳಾದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್, ಜೋರ್ಡಾನ್ ಹೆಂಡರ್ಸನ್, ಬುಕಾಯೊ ಸಾಕಾ ಅವರು ತಲಾ ಒಂದೊಂದು ಅದ್ಭುತ ಗೋಲುಗಳನ್ನು ಗಳಿಸಿ ತಮ್ಮ ತಂಡವನ್ನು ಸೂಪರ್-8 ಗೆ ಕೊಂಡೊಯ್ದರು. ವಿಶ್ವಕಪ್ ಇತಿಹಾಸದಲ್ಲಿ ಇಂಗ್ಲೆಂಡ್ ತಂಡ 10ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಕಳೆದ ಬಾರಿಯೂ ಇಂಗ್ಲೆಂಡ್ ಸೂಪರ್-8 ತಲುಪಿತ್ತು. ಸೆನೆಗಲ್ 2002 ರಲ್ಲಿ ಒಮ್ಮೆ ಮಾತ್ರ ಕ್ವಾರ್ಟರ್ ಫೈನಲ್ ತಲುಪಿದ್ದು, ಈ ಬಾರಿ ಮತ್ತೆ ಹೊರ ಬಿದ್ದಿದೆ.
ಓದಿ: ಫಿಫಾ ಕದನದಲ್ಲಿ ನೆದರ್ಲೆಂಡ್ಸ್ಗೆ ಗೆಲುವು: ಟೂರ್ನಿಯಿಂದ ಹೊರಬಿದ್ದ ಯುಎಸ್