ಅಲ್ವಾಕ್ರಾ(ಕತಾರ್): ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಸೋತು ನಾಕೌಟ್ ಹಂತದಿಂದ ಹೊರಬೀಳುವ ಭೀತಿಯಲ್ಲಿದ್ದ ಆಸ್ಟ್ರೇಲಿಯಾ ಇಂದು ನಡೆದ ಟ್ಯುನೀಷಿಯಾ ವಿರುದ್ಧದ ಪಂದ್ಯದಲ್ಲಿ ಏಕೈಕ ಗೋಲಿನಿಂದ ಗೆಲುವು ಸಾಧಿಸಿ ಗ್ರೂಪ್ ಡಿ ಯಲ್ಲಿ ಸ್ಥಾನ ಭದ್ರಪಡಿಸಿಕೊಂಡಿತು.
ಅಲ್ವಾಕ್ರಾ ಮೈದಾನದಲ್ಲಿ ಟ್ಯುನೀಷಿಯಾ ವಿರುದ್ದ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 1 -0 ಗೋಲುಗಳಿಂದ ಗೆಲುವು ಸಾಧಿಸಿತು. ಆಸೀಸ್ನ ಮಿಚೆಲ್ ಡ್ಯೂಕ್ ಮೊದಲಾರ್ಧದಲ್ಲಿ ಹೆಡರ್ ಶಾಟ್ ಮೂಲಕ ಗೋಲು ಬಾರಿಸಿದರು. ಇದು ಆಸೀಸ್ಗೆ ಜೀವದಾನ ನೀಡಿತು. ಟ್ಯುನೀಷಿಯಾಗೆ ಯಾವುದೇ ಹಂತದಲ್ಲಿ ಗೋಲು ಗಳಿಸಲು ಅವಕಾಶ ಮಾಡಿಕೊಡದೇ ಗೋಲು ಉಳಿಸಿಕೊಂಡು ಜಯದ ನಗೆ ಬೀರಿತು.
-
Australia secure the three points! 🦘@adidasfootball | #FIFAWorldCup
— FIFA World Cup (@FIFAWorldCup) November 26, 2022 " class="align-text-top noRightClick twitterSection" data="
">Australia secure the three points! 🦘@adidasfootball | #FIFAWorldCup
— FIFA World Cup (@FIFAWorldCup) November 26, 2022Australia secure the three points! 🦘@adidasfootball | #FIFAWorldCup
— FIFA World Cup (@FIFAWorldCup) November 26, 2022
ಆಸ್ಟ್ರೇಲಿಯಾ 2010 ರ ವಿಶ್ವಕಪ್ನಲ್ಲಿ ಸರ್ಬಿಯಾ ವಿರುದ್ಧ ಗೆಲುವು ಸಾಧಿಸಿದ ಬಳಿಕ ಇದೇ ಮೊದಲ ಬಾರಿಗೆ ದೊಡ್ಡ ಟೂರ್ನಿಯಲ್ಲಿ ಸ್ಪಷ್ಟ ಗೆಲುವು ದಾಖಲಿಸಿತು. ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ವಿರುದ್ಧ 4-1 ಗೋಲುಗಳಿಂದ ಸೋಲು ಕಂಡಿತ್ತು. ಇಂದಿನ ಗೆಲುವಿನ ಮೂಲಕ ಮುಂದಿನ ಹಂತಕ್ಕೆ ಸಾಗಲು ಅವಕಾಶ ಉಳಿಸಿಕೊಂಡಿತು. ಗ್ರೂಪ್ ಡಿ ಯಲ್ಲಿ ಫ್ರಾನ್ಸ್ ಮತ್ತು ಆಸ್ಟ್ರೇಲಿಯಾ ತಲಾ 3 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಡೆನ್ಮಾರ್ಕ್ ಮತ್ತು ಟ್ಯುನೀಷಿಯಾ ತಲಾ 1 ಅಂಕ ಹೊಂದಿವೆ.