ದೋಹಾ(ಕತಾರ್): ಯೂಸೆಫ್ ಎನ್ ನೆಸ್ರೆ ಗಳಿಸಿದ ಏಕೈಕ ಗೋಲಿನಿಂದ ಮೊರಾಕ್ಕೊ ತಂಡ ವಿಶ್ವಶ್ರೇಷ್ಠ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ನೇತೃತ್ವದ ಬಲಿಷ್ಠ ಪೋರ್ಚುಗಲ್ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಫಿಫಾ ವಿಶ್ವಕಪ್ ಸೆಮಿಫೈನಲ್ ತಲುಪಿತು. ಈ ಮೂಲಕ ಸೆಮೀಸ್ ತಲುಪಿದ ಮೊದಲ ಆಫ್ರಿಕನ್ ರಾಷ್ಟ್ರ ಎಂಬ ದಾಖಲೆಯನ್ನೂ ಬರೆಯಿತು.
ಈ ಸಲದ ವಿಶ್ವಕಪ್ ಹಲವು ಅಚ್ಚರಿಯ ಫಲಿತಾಂಶಗಳನ್ನು ದಾಖಲಿಸಿದೆ. ಕ್ವಾರ್ಟರ್ಫೈನಲ್ನಲ್ಲಿ 5 ಬಾರಿಯ ವಿಶ್ವಚಾಂಪಿಯನ್ ಬ್ರೆಜಿಲ್ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದೆ. ಈಗ ಫೋರ್ಚುಗಲ್ ಕೂಡ ಟೂರ್ನಿಯಿಂದ ಔಟಾಗಿದೆ. ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ ಮಾತ್ರ ಸೆಮಿಫೈನಲ್ ಘಟ್ಟ ತಲುಪಿದೆ.
ಯೂಸೆಫ್ ಎನ್ ನೆಸ್ರೆ ಆಕರ್ಷಕ ಹೆಡರ್: ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಮೊರಾಕ್ಕೊ ಆಟಗಾರರು ಪೋರ್ಚುಗಲ್ ವಿರುದ್ಧವೂ ಅದೇ ಗುಣಮಟ್ಟ ಕಾಪಾಡಿಕೊಂಡು ಸಾಗಿದರು. ಪೋರ್ಚುಗೀಸ್ ಕೋಚ್ ಸ್ಯಾಂಟೋಸ್ರ ಎಲ್ಲ ತಂತ್ರಗಳನ್ನು ಮೀರಿದ ಮೊರಾಕ್ಕೊ 42 ನೇ ನಿಮಿಷದಲ್ಲಿ ಯೂಸೆಫ್ ಎನ್ ನೆಸ್ರೆ ಹೆಡರ್ ಮೂಲಕ ಗಳಿಸಿದ ಗೋಲಿನಿಂದ ಸೆಮಿಫೈನಲ್ ಟಿಕೆಟ್ ಖಾತ್ರಿಪಡಿಸಿಕೊಂಡಿತು.
-
MOROCCO ARE HEADING TO THE SEMI-FINALS! 🇲🇦@adidasfootball | #FIFAWorldCup
— FIFA World Cup (@FIFAWorldCup) December 10, 2022 " class="align-text-top noRightClick twitterSection" data="
">MOROCCO ARE HEADING TO THE SEMI-FINALS! 🇲🇦@adidasfootball | #FIFAWorldCup
— FIFA World Cup (@FIFAWorldCup) December 10, 2022MOROCCO ARE HEADING TO THE SEMI-FINALS! 🇲🇦@adidasfootball | #FIFAWorldCup
— FIFA World Cup (@FIFAWorldCup) December 10, 2022
ಸ್ವಿಜರ್ಲ್ಯಾಂಡ್ಸ್ ಪಂದ್ಯದಲ್ಲೂ ಹೊರಗಿದ್ದ ಈ ಪೀಳಿಗೆಯ ಶ್ರೇಷ್ಠ ಫುಟ್ಬಾಲಿಗ ರೊನಾಲ್ಡೊರನ್ನು ತಂಡ 51 ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿಸಿತು. ಚುರುಕಿನ ಓಟದ ಮೂಲಕ ಗೋಲು ಗಳಿಸಲು ಪ್ರಯತ್ನಿಸಿದರೂ ಮೊರಾಕ್ಕೊ ಆಟಗಾರರು ಅವಕಾಶ ನೀಡಲಿಲ್ಲ. ವಿಶೇಷವೆಂದರೆ ಮೊರಾಕ್ಕೊ 3 ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ ಒಂದೇ ಒಂದು ಗೋಲು ಗಳಿಸಲು ಬಿಟ್ಟಿಲ್ಲ.
ವಿಶ್ವಕಪ್ ಇಲ್ಲದೇ ರೊನಾಲ್ಡೊ ನಿವೃತ್ತಿ?: 37 ವರ್ಷದ ಕ್ರಿಶ್ಚಿಯಾನೊ ರೊನಾಲ್ಡೊ ಫುಟ್ಬಾಲ್ ಕ್ರೀಡೆಯಲ್ಲಿ ಇತಿಹಾಸವೇ ನಿರ್ಮಿಸಿದ್ದರೂ ಒಂದೇ ಒಂದು ವಿಶ್ವಕಪ್ ಗೆದ್ದಿಲ್ಲ. ಪೋರ್ಚುಗಲ್ ತಂಡವನ್ನು ಪ್ರತಿನಿಧಿಸುವ ರೊನಾಲ್ಡೊ ತಂಡವನ್ನು ಕನಿಷ್ಠ ಫೈನಲ್ವರೆಗೂ ಕೊಂಡೊಯ್ದಿಲ್ಲ. ಮುಂದಿನ ವಿಶ್ವಕಪ್ ವೇಳೆಗೆ ರೊನಾಲ್ಡೊ 41 ವರ್ಷ ಪೂರೈಸಲಿದ್ದು, ವಿಶ್ವಕಪ್ ಗೆಲ್ಲುವ ಕನಸು ಈಡೇರುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಪಂದ್ಯ ಸೋತ ಬಳಿಕ ರೊನಾಲ್ಡೊ ಮೈದಾನದ ಮೇಲೆ ಬಿದ್ದು ಕಣ್ಣೀರಿಟ್ಟರು.
ಸೆಮೀಸ್ ತಲುಪಿದ ಆಫ್ರಿಕಾ ಖಂಡದ ಮೊದಲ ದೇಶ: ಪೋರ್ಚುಗಲ್ ತಂಡವನ್ನು ಬಗ್ಗುಬಡಿದು ಮೊರಾಕ್ಕೊ ಸೆಮಿಫೈನಲ್ ತಲುಪಿದ ಆಫ್ರಿಕಾ ಖಂಡದ ಮೊದಲ ದೇಶ ಎಂಬ ಹೊಸ ದಾಖಲೆ ಬರೆಯಿತು. ಇದಕ್ಕೂ ಮೊದಲು ಕ್ಯಾಮರೂನ್ (1990), ಸೆನೆಗಲ್ (2002) ಮತ್ತು ಘಾನಾ (2010) ಕ್ವಾರ್ಟರ್‌ಫೈನಲ್ ತಲುಪಿದ್ದೇ ಸಾಧನೆಯಾಗಿತ್ತು. ಸೆಮಿಫೈನಲ್ನಲ್ಲಿ ಮೊರಾಕ್ಕೊ, ಫ್ರಾನ್ಸ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ: ಪೀಲೆಗೆ ಎದುರಾದ ಆರೋಗ್ಯ ಸಮಸ್ಯೆ; ಕರುಳಿನ ಕ್ಯಾನ್ಸರ್ನಿಂದ ಪಾರಾಗುವುದು ಹೇಗೆ?