ETV Bharat / sports

ಭಾರತ ಫುಟ್ಬಾಲ್​ ಸಂಸ್ಥೆ ಮೇಲಿನ ನಿಷೇಧ ತೆರವು.. ನಿಗದಿಯಂತೆ ಭಾರತದಲ್ಲೇ ಮಹಿಳಾ ವಿಶ್ವಕಪ್​ - 17 ವರ್ಷದೊಳಗಿನ ಮಹಿಳಾ ವಿಶ್ವಕಪ್

ಭಾರತ ಫುಟ್ಬಾಲ್​ ಸಂಸ್ಥೆಯನ್ನು ನಿಷೇಧಿಸಿದ್ದ ಫಿಫಾ ತನ್ನ ಆದೇಶವನ್ನು ವಾಪಸ್​ ಪಡೆದಿದೆ. ಎಐಎಫ್​ಎಫ್ ಆಡಳಿತಗಾರ ಸಮಿತಿಯನ್ನು ಸುಪ್ರೀಂಕೋರ್ಟ್​ ರದ್ದು ಮಾಡಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

Etv Bharat
ಭಾರತ ಫುಟ್ಬಾಲ್​ ಸಂಸ್ಥೆ ಮೇಲಿನ ನಿಷೇಧ ತೆರವು
author img

By

Published : Aug 27, 2022, 8:49 AM IST

Updated : Oct 29, 2022, 3:21 PM IST

ನವದೆಹಲಿ: ಮೂರನೇ ವ್ಯಕ್ತಿಗಳ ಹಸ್ತಕ್ಷೇಪದ ಕಾರಣ ನೀಡಿ ಅಖಿಲ ಭಾರತ ಫುಟ್​ಬಾಲ್​ ಫೆಡರೇಷನ್​ ಅನ್ನು ನಿಷೇಧಿಸಿದ್ದ ವಿಶ್ವ ಫುಟ್​ಬಾಲ್​ ಆಡಳಿತ ಮಂಡಳಿ ಅಮಾನತನ್ನು ಶುಕ್ರವಾರ ಹಿಂಪಡೆದಿದೆ. ಇದರಿಂದ ಇಲ್ಲಿಯೇ ನಡೆಯಲಿರುವ 17 ವರ್ಷದೊಳಗಿನ ಮಹಿಳಾ ವಿಶ್ವಕಪ್​ಗೆ ಜೀವ ಬಂದಿದೆ.

ಎಐಎಫ್​ಎಫ್​ ಆಡಳಿಗಾರರ ಸಮಿತಿಯನ್ನು(ಸಿಒಎ) ರದ್ದು ಮಾಡುವ ಸುಪ್ರೀಂಕೋರ್ಟ್​ ತೀರ್ಮಾನದ ಬೆನ್ನಲ್ಲೇ ಫಿಫಾ ನಿಷೇಧ ವಾಪಸ್​ ಪಡೆದಿದೆ. ಇದು ಭಾರತೀಯ ಫುಟ್ಬಾಲ್ ಲೋಕಕ್ಕೆ ಸಂತಸ ತಂದಿದೆ.

ಭಾರತೀಯ ಫುಟ್ಬಾಲ್​ ಕ್ಷೇತ್ರದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ನಡೆಯುತ್ತಿದೆ ಎಂದು ಹೇಳಿ ಆ.15 ರಂದು ಭಾರತೀಯ ಫುಟ್ಬಾಲ್​ ಸಂಸ್ಥೆಯನ್ನು ಫಿಫಾ ನಿಷೇಧಿಸಿತ್ತು. ಇದರಿಂದ ಅಕ್ಟೋಬರ್​ನಲ್ಲಿ ಭಾರತದಲ್ಲೇ ನಡೆಯುವ 17 ವರ್ಷದೊಳಗಿನ ಮಹಿಳಾ ವಿಶ್ವಕಪ್​ ರದ್ದಾಗುವ ಸಾಧ್ಯತೆ ಇತ್ತು. ಆದರೀಗ ನಿರ್ಧಾರ ವಾಪಸ್​ ಕಾರಣ ನಿಗದಿಯಂತೆ ಅಕ್ಟೋಬರ್​ 11 ರಿಂದ 30 ರವರೆಗೆ ವಿಶ್ವಕಪ್​ ನಡೆಯಲಿದೆ ಎಂದು ಫಿಫಾ ತಿಳಿಸಿದೆ.

ಎಐಎಫ್​ಎಫ್​ನ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುವುದು. ಚುನಾವಣೆ ನಿಗದಿಯಂತೆ ನಡೆಯಲು ಸಹಕರಿಸಲಾಗುವುದು. ಈ ಬಗ್ಗೆ ಫಿಫಾಗೆ ವರದಿ ನೀಡಬೇಕು ಎಂದು ಅದು ಸೂಚಿಸಿದೆ.

ಇನ್ನು ಫಿಫಾದ ನಿರ್ಧಾರವನ್ನು ಭಾರತದ ಫುಟ್ಬಾಲ್​ ಸಂಸ್ಥೆ ಸ್ವಾಗತಿಸಿದೆ. ಎಐಎಫ್‌ಎಫ್ ಮೇಲಿನ ನಿರ್ಬಂಧ ವಾಪಸ್​ ಪಡೆದಿದ್ದಕ್ಕೆ ಸಂಸ್ಥೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ಸುನಂದೋ ಧರ್ ಸಂತಸ ವ್ಯಕ್ತಪಡಿಸಿದರು.

ಓದಿ: ಡೈಮಂಡ್ ಲೀಗ್ ಗೆದ್ದು ಇತಿಹಾಸ ನಿರ್ಮಿಸಿದ ಭರ್ಜಿ ದೊರೆ ನೀರಜ್​ ಚೋಪ್ರಾ

Last Updated : Oct 29, 2022, 3:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.