ಭೂಪಾಲ್: ಭಾರತದ 17 ವರ್ಷದ ಶೂಟರ್ ಮನು ಭಾಕರ್ ಮುಂಬರುವ ವಿಶ್ವ ಚಾಂಪಿಯಶಿಪ್ಗಾಗಿ ಕಠಿಣ ಪರಿಶ್ರಮವಹಿಸುತ್ತಿದ್ದು, ದೇಶಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಡುವ ಉತ್ಸಾಹದಲ್ಲಿದ್ದಾರೆ.
ಕೇವಲ 17ರ ವಯಸ್ಸಿನಲ್ಲೇ 6 ವಿಶ್ವಕಪ್ನಲ್ಲಿ ಚಿನ್ನದ ಪದಕ ಹಾಗೂ 1 ಕಾಮನ್ವೆಲ್ತ್ ಚಿನ್ನ ಗೆದ್ದಿರುವ ಮನು ಭಾಕರ್ ತಮ್ಮ ಹಿಂದಿನ ಯಶಸ್ಸನ್ನು ತಲೆಯಲ್ಲಿಟ್ಟುಕೊಳ್ಳದೇ ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಾ ಹಾಗೂ ಸದಾ ತಾಳ್ಮೆಯಿಂದ ಇರುವುದರಿಂದಲೇ ತಮ್ಮ ಶೂಟಿಂಗ್ ಕ್ಷೇತ್ರದ ಯಶಸ್ಸಿಗೆ ಕಾರಣ ಎಂದು ಈಟಿವಿ ಭಾರತ್ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಶೂಟಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಮಾತನಾಡಿದ ಅವರೂ, ಮೊದಲು ಮಾರ್ಷಲ್ ಆರ್ಟ್ಸ್, ಬಾಕ್ಸಿಂಗ್, ಟೆನ್ನಿಸ್ ಹಾಗೂ ಸ್ಕೇಟಿಂಗ್ ಕ್ರೀಡೆಗಳಲ್ಲೂ ಉತ್ತಮ ನೈಪುಣ್ಯತೆ ಪಡೆದಿದ್ದರಂತೆ. ಶೂಟಿಂಗ್ನಲ್ಲಿ ಕೂಡ ಆಸಕ್ತಿಯಿದ್ದಿದ್ದರಿಂದ ತಮ್ಮ ಪೋಷಕರ ಅಭಿಲಾಷೆಯಂತೆ ಶೂಟಿಂಗ್ ಕ್ಷೇತ್ರವನ್ನು ತಮ್ಮ ವೃತ್ತಿಪರ ಕ್ರೀಡೆಯಾಗಿ ಆಯ್ಕೆ ಮಾಡಿಕೊಂಡೆ ಎಂದು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಮ್ಯೂನಿಚ್‌ನಲ್ಲಿ ನಡೆದ ಟೂರ್ನಿಯಲ್ಲಿ ವಿಶ್ವ ದಾಖಲೆ ಮಾಡಿದರೂ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವಲ್ಲಿ ವಿಫಲವಾದ ಬಗ್ಗೆ ಮಾತನಾಡಿದ ಮನು, ತಾವೂ ಮುಗಿದು ಹೋದ ಸೋಲುಗಳ ಬಗ್ಗೆ ಎಂದಿಗೂ ಯೋಚನೆ ಮಾಡುವುದಿಲ್ಲ, ಬದಲಾಗಿ ಭವಿಷ್ಯದ ಸವಾಲುಗಳ ಬಗ್ಗೆ ಹೆಚ್ಚಿನ ಗಮನ ನೀಡುವುದಾಗಿ ಹೇಳಿಕೊಂಡಿದ್ದಾರೆ.
2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಶೂಟರ್ಗಳಿಗೆ ವಿಶೇಷವಾಗಿದೆ. ಎಲ್ಲರೂ ಅದಕ್ಕಾಗಿ ತುಂಬಾ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಬರುವ ಇತರೆ ವಿಶ್ವಮಟ್ಟದ ಸ್ಪರ್ಧೆಗಳಲ್ಲೂ ಉತ್ತಮ ಪ್ರದರ್ಶನ ತೋರುವ ಬಗ್ಗೆ ವಿಶ್ವಾಸವಿದೆ ಎಂದು ಮನು ತಿಳಿಸಿದ್ದಾರೆ. ಮನು ಭಾಕರ್ ಅವರ ಮತ್ತಷ್ಟು ವಿಚಾರಗಳನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.