ಹೈದರಾಬಾದ್: ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದು, ಒಲಿಂಪಿಕ್ಸ್‌ನಲ್ಲಿ ಬಂಗಾರ ಪದಕ ಗೆಲ್ಲುವುದೇ ನನ್ನ ಮುಖ್ಯ ಗುರಿ ಎಂದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿರುವ ಬಾಕ್ಸರ್ ವಿಕಾಸ್ ಕ್ರಿಶನ್ ತಿಳಿಸಿದ್ದಾರೆ.
ಈ ಟಿವಿ ಭಾರತ್ ಜೊತೆ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದ ವಿಕಾಸ್, ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತಿದ್ದೇನೆ ಎಂದಿದ್ದಾರೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಇರುವುದರಿಂದ ಸರಿಯಾದ ತರಬೇತಿ ಪಡೆಯಲು ಸಾಧ್ಯವಾಗಿಲ್ಲ. ಮನೆಯಲ್ಲೇ ತರಬೇತಿ ಪಡೆಯಲು ಎಲ್ಲಾ ಉಪಕರಣಗಳು ಇಲ್ಲ ಎಂದಿದ್ದಾರೆ.
2021ಕ್ಕೆ ಮುಂದೂಡಲ್ಪಟ್ಟ ಟೋಕಿಯೋ ಒಲಿಂಪಿಕ್ ಬಗ್ಗೆ ಮಾತನಾಡಿದ ವಿಕಾಸ್, 'ಇತರ ಕ್ರೀಡಾಪಟುಗಳ ಬಗ್ಗೆ ಗೊತ್ತಿಲ್ಲ, ಆದರೆ ಟೋಕಿಯೋ ಒಲಿಂಪಿಕ್ ಮುಂದೂಡಿದ್ದು, ನನಗೆ ಸಂತೋಷವಾಗಿದೆ. ಮೆಗಾ ಇವೆಂಟ್ಗೆ ತಯಾರಿ ನಡೆಸಲು ನನಗೆ ಹೆಚ್ಚಿನ ಸಮಯವ ಸಿಕ್ಕಂತಾಗಿದೆ' ಎಂದಿದ್ದಾರೆ.