ETV Bharat / sports

Wimbledon 2022: ಚೊಚ್ಚಲ ಗ್ರ್ಯಾಂಡ್​ ಸ್ಲಾಮ್​ ಪ್ರಶಸ್ತಿಗೆ ಮುತ್ತಿಕ್ಕಿದ ಎಲೆನಾ ರೈಬಾಕಿನಾ - ವಿಂಬಲ್ಡನ್ ಫೈನಲ್ 2022

2022ರ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ಗೆಲುವು ದಾಖಲು ಮಾಡಿರುವ 23 ವರ್ಷೆ ರೈಬಾಕಿನಾ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

Elena Rybakina
Elena Rybakina
author img

By

Published : Jul 9, 2022, 9:36 PM IST

ವಿಂಬಲ್ಡನ್​​ ಫೈನಲ್​ ಪಂದ್ಯದಲ್ಲಿ ಟ್ಯುನಿಷಿಯಾದ ಓನ್ಸ್ ಜಬೇರ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಎಲೆನಾ ಚೊಚ್ಚಲ ಗ್ರ್ಯಾಂಡ್​ ಸ್ಲ್ಯಾಮ್​ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ರೋಚಕ ಪಂದ್ಯದಲ್ಲಿ ಜಬೇರ್​ ವಿರುದ್ಧ ಗೆಲುವಿನ ನಗೆ ಬೀರಿದ ರೈಬಾಕಿನಾ ಹೊಸ ದಾಖಲೆ ನಿರ್ಮಿಸಿದರು.

ಕಜಕಿಸ್ತಾನದ ಎಲೆನಾ ರೈಬಾಕಿನಾ ಫೈನಲ್ ಪಂದ್ಯದಲ್ಲಿ 3-6, 6-2, 6-2 ಸೆಟ್‌ಗಳಿಂದ ಟ್ಯುನೀಷಿಯಾದ ಓನ್ಸ್ ಜಬೇರ್ ವಿರುದ್ಧ ಗೆಲುವು ದಾಖಲು ಮಾಡಿದರು. ಈ ಮೂಲಕ ಕೇವಲ 23 ವರ್ಷದ ಆಟಗಾರ್ತಿ ವಿಂಬಲ್ಡನ್​​ ಚಾಂಪಿಯನ್​ ಆಗಿ ಹೊರ ಹೊಮ್ಮಿದ್ದಾರೆ. ಇದು ಅವರ ಮೊದಲ ಗ್ರ್ಯಾಂಡ್​​ ಸ್ಲಾಮ್ ಪ್ರಶಸ್ತಿಯಾಗಿದೆ.

Elena Rybakina
ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುದ್ದ ಎಲೆನಾ- ಜಬೇರ್​

ಕಳೆದ ವರ್ಷ ಅಂಡರ್​​-19 ಕ್ವಾರ್ಟರ್ ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದ ಜಬೇರ್​​ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು. ಆದರೆ, ಇಂದಿನ ಪಂದ್ಯದಲ್ಲಿ ಅತ್ಯುತ್ತಮ ಹೋರಾಟ ನಡೆಸಿ, ಸೋಲು ಒಪ್ಪಿಕೊಂಡಿದ್ದಾರೆ. ಆದರೆ, ಗ್ರ್ಯಾಂಡ್ ಸ್ಲಾಮ್ ಫೈನಲ್​ನಲ್ಲಿ ಆಡಿರುವ ಮೊದಲ ಅರಬ್ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.