ನ್ಯೂಯಾರ್ಕ್: ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಿಂದ ಹೊರಬೀಳುವ ಮೂಲಕ ರಷ್ಯಾದ ಆಟಗಾರ ಡೇನಿಯಲ್ ಮಡ್ವದೇವ್ ವಿಶ್ವ ನಂ.1 ಪಟ್ಟವನ್ನೂ ಕಳೆದುಕೊಂಡಿದ್ದಾರೆ. ಹೀಗಾಗಿ ಸರ್ಬಿಯಾದ ಟೆನಿಸ್ ದಿಗ್ಗಜ ನೊವಾಕ್ ಜಾಕೋವಿಕ್ ಮತ್ತೆ ಮೊದಲ ಸ್ಥಾನವನ್ನು ಮರಳಿ ಪಡೆದಿದ್ದಾರೆ.
ದುಬೈ ಚಾಂಪಿಯನ್ ಶಿಪ್ ಗೆಲ್ಲುವಲ್ಲಿ ವಿಫಲವಾಗಿದ್ದ ನೊವಾಕ್ ಜೊಕೊವಿಕ್ 2 ಸ್ಥಾನಕ್ಕೆ ಕುಸಿದಿದ್ದರು. ಇದೀಗ ಸೋಮವಾರ ಪ್ರಕಟವಾದ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ ಮೆಡ್ವದೇವ್ ಹಿಂದಿಕ್ಕಿ ಮತ್ತೆ ಅಗ್ರ ಸ್ಥಾನ ಪಡೆದಿದ್ದಾರೆ.
ಇನ್ನು ಜೊಕೊವಿಕ್, ರಾಫೆಲ್ ನಡಾಲ್, ರೋಜರ್ ಫೆಡರರ್ರಂತಹ ದಿಗ್ಗಜರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದಿದ್ದ ರಷ್ಯಾದ ಡೇನಿಯಲ್ ಮಡ್ವದೇವ್ ಇಂಡಿಯನ್ ವೆಲ್ಸ್ ಟೂರ್ನಿಯಿಂದ ಹೊರಬಿದ್ದು, ರ್ಯಾಂಕಿಂಗ್ ಪಟ್ಟಿಯಲ್ಲಿ ಕುಸಿತ ಕಂಡಿದ್ದಾರೆ.
ಭಾರಿ ಜಿಗಿತ ಕಂಡ ಫ್ರಿಟ್ಜ್: ಈ ಪಟ್ಟಿಯಲ್ಲಿ ಅಮೆರಿಕದ ಟೇಲರ್ ಫ್ರಿಟ್ಜ್ ಭಾರಿ ಜಿಗಿತ ಕಂಡಿದ್ದಾರೆ. ಇದೇ ಮೊದಲ ಬಾರಿಗೆ ಇಂಡಿಯನ್ ವೆಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಪಟ್ಟಿಯಲ್ಲಿ 13ನೇ ಸ್ಥಾನ ಪಡೆದಿದ್ದಾರೆ. 24 ವರ್ಷ ವಯಸ್ಸಿನ ಫ್ರಿಟ್ಜ್ ಇಂಡಿಯನ್ ವೆಲ್ಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಪೇನ್ನ ದಿಗ್ಗಜ ಆಟಗಾರ ರಾಫೆಲ್ ನಡಾಲ್ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದರು.
ಇದನ್ನೂ ಓದಿ: ಆರ್ಸಿಬಿ ನೂತನ ನಾಯಕ ಫಾಫ್ ಡು ಪ್ಲೆಸಿಸ್ ಕೌಶಲ್ಯ ಹೊಗಳಿದ ವಿರಾಟ್ ಕೊಹ್ಲಿ