ನವದೆಹಲಿ: ಡೋಪಿಂಗ್ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಯತ್ನಸಿದ್ದಕ್ಕಾಗಿ ರಾಷ್ಟ್ರೀಯ ಡಿಸ್ಕರ್ ಥ್ರೋ ಆಟಗಾರ್ತಿ ಸಂದೀಪ್ ಕುಮಾರಿ ಅವರನ್ನು ಆಥ್ಲಟಿಕ್ಸ್ ಇಂಟಿಗ್ರಿಟಿ ಯೂನಿಟ್ 4 ವರ್ಷ ನಿಷೇಧಿಸಿದೆ.
ಗುವಾಹಟಿಯಲ್ಲಿ ಜೂನ್ 2018ರಲ್ಲಿ ನಡೆದಿದ್ದ ನ್ಯಾಷನಲ್ ಇಂಟರ್ ಸ್ಟೇಟ್ ಚಾಂಪಿಯನ್‌ಶಿಪ್ ವೇಳೆ ನಾಡಾ ಅಧಿಕಾರಿಗಳು ಸಂದೀಪ್ ಕುಮಾರಿಯವರದ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದರು. ಆದರೆ ಆ ಮಾದರಿಯಲ್ಲಿದ್ದ ನಿಷೇಧಿತ ಔಷಧವಾದ ಸ್ಟೆರಾಯ್ಡ್ನ ಅಂಶವನ್ನು ಪತ್ತೆಹಚ್ಚುವಲ್ಲಿ ನ್ಯಾಷನಲ್ ಡೋಪ್ ಟೆಸ್ಟಿಂಗ್ ಲ್ಯಾಬೊರೇಟರಿ(ಎನ್ಡಿಟಿಎಲ್) ವಿಫಲವಾಗಿತ್ತು.
ಆ ಟೂರ್ನಿಯಲ್ಲಿ ಸಂದೀಪ್ ಕುಮಾರಿ ಮಹಿಳೆಯರ ವಿಭಾಗದ ಡಿಸ್ಕಸ್ ಥ್ರೋನಲ್ಲಿ 58.41 ಮೀ. ದೂರ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದರು
ಎನ್ಡಿಟಿಎಲ್ ನಿಷೇಧಿತ ವಸ್ತುವನ್ನು ಪತ್ತೆಹಚ್ಚದ ಹಿನ್ನೆಲೆಯಲ್ಲಿ ವಡಾ(ವರ್ಲ್ಡ್ ಆ್ಯಂಟಿ ಡೋಪಿಂಗ್ ಏಜೆನ್ಸಿ) ಕೆನಡಾದಲ್ಲಿರುವ ಮಾಂಟ್ರಿಯಲ್ ಲ್ಯಾಬೊರೇಟರಿಯಲ್ಲಿ ಕುಮಾರಿಯ ಸ್ಯಾಂಪಲ್ ಅನ್ನು ಪರೀಕ್ಷೆಗೊಳಪಡಿಸಲು ನಿರ್ಧರಿಸಿತು. ಇಲ್ಲಿ ಕುಮಾರಿ ಅವರ ಫಲಿತಾಂಶ ಪಾಸಿಟಿವ್ ಎಂದು ಬಂದಿದೆ.
ಹೀಗಾಗಿ ಸಂದೀಪ್ ಕುಮಾರಿಗೆ 4 ವರ್ಷಗಳ ನಿಷೇಧ ಹೇರಲಾಗಿದೆ. ನಿಷೇಧದ ಶಿಕ್ಷೆ ಅವರ ರಕ್ತದ ಮಾದರಿ ಸಂಗ್ರಹಿಸಿದ ಜೂನ್ 26,2018ರಿಂದ ಆರಂಭವಾಗಲಿದೆ.
ಸಂದೀಪ್ ಕುಮಾರಿ ಮಾತ್ರವಲ್ಲದೆ 2017ರ ಏಷ್ಯನ್ ಚಾಂಪಿಯನ್ ನಿರ್ಮಲಾ ಶಿಯೋರನ್ ವರದಿ ಕೂಡ ಎನ್ಡಿಟಿಎಲ್ನಲ್ಲಿ ನೆಗಿಟಿವ್ ಬಂದರೆ, ಮಾಂಟ್ರಿಯನ್ನಲ್ಲಿ ಪಾಸಿಟಿವ್ ಬಂದಿತ್ತು. ಜುಮಾ ಖಾನ್ ವರದಿ ಕೂಡ ಹೀಗೆ ಬಂದಿತ್ತು. ಇವರೂ ಕೂಡ ಕಳೆದ ತಿಂಗಳು 4 ವರ್ಷ ನಿಷೇಧಕ್ಕೊಳಗಾಗಿದ್ದಾರೆ.