ETV Bharat / sports

ಕೃನಾಲ್​ಗೆ ಕೊರೊನಾ ಲಕ್ಷಣಗಳಿದ್ದರೂ BCCI ವೈದ್ಯಕೀಯ ಅಧಿಕಾರಿ ಪರೀಕ್ಷೆಯಲ್ಲಿ ವಿಳಂಬ ಮಾಡಿದ್ಯಾಕೆ?

author img

By

Published : Aug 13, 2021, 4:54 PM IST

ಕೃನಾಲ್​ರಲ್ಲಿ ಗಂಟಲು ನೋವಿನಂತಹ ಲಕ್ಷಣಗಳನ್ನು ಕಂಡುಬಂದ ನಂತರ ನಂತರ, ವೈದ್ಯ ಅಭಿಜಿತ್ ಸಾಲ್ವಿ ಅವರನ್ನು ಪರೀಕ್ಷಿಸಿದರಾದರೂ ಕ್ಷಿಪ್ರ ಪ್ರತಿಜನಕ ಪರೀಕ್ಷೆಯನ್ನು (RAT) ತಕ್ಷಣವೇ ಮಾಡಲಾಗಿಲ್ಲ ಅಥವಾ ಆಟಗಾರನನ್ನು ತಕ್ಷಣವೇ ಪ್ರತ್ಯೇಕಿಸಲಿಲ್ಲ.

ಕೃನಾಲ್
ಕೃನಾಲ್

ನವದೆಹಲಿ: ಶ್ರೀಲಂಕಾ ಪ್ರವಾಸದ ವೇಳೆ ಕೃನಾಲ್ ಪಾಂಡ್ಯ ಅವರಿಗೆ ಕೊರೊನಾ ವಕ್ಕರಿಸಿತ್ತು. ಆದರೆ, ಈ ಪ್ರಕರಣದಲ್ಲಿ ಬಿಸಿಸಿಐನ ವೈದ್ಯಾಧಿಕಾರಿಯು ಆರ್​​ಟಿಪಿಸಿಆರ್ ಪರೀಕ್ಷೆಯನ್ನು ಒಂದು ದಿನ ವಿಳಂಬ ಮಾಡಿರುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಿನ್ನೆಲೆ ಎಂಟು ಆಟಗಾರರು ಎರಡು T-20I ಪಂದ್ಯಗಳನ್ನು ಕಳೆದುಕೊಂಡಿದ್ದಾರೆ.

ಕೃನಾಲ್​ಗೆ ಗಂಟಲು ನೋವಿನಂತಹ ಲಕ್ಷಣಗಳು ಕಂಡುಬಂದ ನಂತರ, ಜುಲೈ 26 ರಂದು ತಂಡದ ಜೊತೆಗಿದ್ದ ವೈದ್ಯ ಅಭಿಜಿತ್ ಸಾಲ್ವಿ ತಕ್ಷಣವೇ ಅವರನ್ನು ಪರೀಕ್ಷಿಸಿದ್ದರು. ಆದರೆ ಕ್ಷಿಪ್ರ ಪ್ರತಿಜನಕ ಪರೀಕ್ಷೆ (RAT) ತಕ್ಷಣವೇ ಮಾಡಲಾಗಿಲ್ಲ ಹಾಗೂ ಆಟಗಾರನನ್ನು ತಕ್ಷಣವೇ ಪ್ರತ್ಯೇಕಿಸರಲಿಲ್ಲ.

ಗಂಟಲು ನೋವಿನ ಹೊರತಾಗಿಯೂ, ತಂಡದ ವೈದ್ಯರು ಆಟಗಾರನಿಗೆ ತಂಡಕ್ಕೆ ಹಾಜರಾಗಲು ಅವಕಾಶ ನೀಡಿದರು ಮತ್ತು ಜುಲೈ 27ರ ಬೆಳಗ್ಗೆ ಅವರ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಲಾಯಿತು. ವರದಿಗಳು ಮಧ್ಯಾಹ್ನದ ನಂತರ ಬಂದವು. ಇದಾದ ನಂತರ ಬಿಸಿಸಿಐ ಮತ್ತು ಎಸ್‌ಎಲ್‌ಸಿ ಜಂಟಿಯಾಗಿ ಒಂದು ದಿನ ಆಟವನ್ನು ಮುಂದೂಡಲು ನಿರ್ಧರಿಸಿದವು. ಕಾರಣ ಅವರ ಜೊತೆ ಇದ್ದ ಎಂಟು ನಿಕಟ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಲಾಯಿತು.

ಇದನ್ನೂ ಓದಿ: ಕೃನಾಲ್​ ಬೆನ್ನಲ್ಲೇ ಚಹಾಲ್​, ಗೌತಮ್​ಗೂ ವಕ್ಕರಿಸಿರುವ ಕೋವಿಡ್​... ಲಂಕಾದಲ್ಲಿಯೇ ಆಟಗಾರರ ಐಸೋಲೇಷನ್​

ಆರಂಭದಲ್ಲಿ ಅವರೆಲ್ಲರಿಗೂ ನೆಗೆಟಿವ್ ಕಂಡುಬಂತು. ನಂತರ ತಂಡವು ಶ್ರೀಲಂಕಾವನ್ನು ತೊರೆಯುವ ಮುನ್ನ, ಕೃಷ್ಣಪ್ಪ ಗೌತಮ್ ಮತ್ತು ಯುಜ್ವೇಂದ್ರ ಚಾಹಲ್​ಗೆ ಪಾಸಿಟಿವ್​ ವರದಿ ಬಂತು.

ವೈದ್ಯರ ಮೇಲೇಕೆ ಅನುಮಾನ?

ಜುಲೈ 26 ರಂದು ಕೃನಾಲ್ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿತ್ತು. ವಿಚಿತ್ರ ಎಂದರೆ ಅವರನ್ನು ತಕ್ಷಣವೇ ರ್ಯಾಪಿಡ್ ಆಂಟಿಜೆನ್ ಟೆಸ್ಟ್ (ಸ್ವಯಂ ಪರೀಕ್ಷಾ ಕಿಟ್) ಮಾಡಬೇಕಾಗಿತ್ತು. ಆದರೆ, ಆ ರೀತಿಯ ಏನೂ ಮಾಡಲಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ಷಿಪ್ರ ಪ್ರತಿಜನಕ ಪರೀಕ್ಷೆಯು ನಿರ್ಣಾಯಕವಲ್ಲದಿದ್ದರೂ ಇದು ಪ್ರೋಟೋಕಾಲ್‌ನ ಮೊದಲ ಭಾಗವಾಗಿದೆ. ಆದರೆ, ಗಂಟಲು ನೋವಿನ ಹೊರತಾಗಿಯೂ ಕೃನಾಲ್ ತಂಡದ ಸಭೆಯಲ್ಲಿ ಭಾಗವಹಿಸಿದ್ದರು ಎಂದಿದ್ದಾರೆ.

ಸೆಕ್ರೆಟರಿ ಜಯ್ ಶಾ ಅವರಿಗೆ ಧನ್ಯವಾದಗಳು, ಅವರು ಮಧ್ಯಪ್ರವೇಶಿಸಿದ್ದರಿಂದ ಮುಂದಾಗುವ ಅನಾಹುತ ತಪ್ಪಿಸಲಾಯಿತು. ಆದರೆ, ವೈದ್ಯಕೀಯ ತಂಡವು ಸಕ್ರಿಯವಾಗಿದ್ದಲ್ಲಿ ಇಂತಹ ಪರಿಸ್ಥಿತಿ ತಪ್ಪಿಸಬಹುದಿತ್ತು ಎಂದು ಬಿಸಿಸಿಐನ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಘಟನೆ ಸಂಬಂಧ ಸಾಲ್ವಿಯವರನ್ನು ಪ್ರಶ್ನಿಸಿದ್ರೆ, ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.