ಬರ್ಮಿಂಗ್ಹ್ಯಾಮ್(ಲಂಡನ್): ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿಂದು ಪಾಕಿಸ್ತಾನದ ಮುಹಮ್ಮದ್ ನೂಹ್ ಭಟ್ ಚೊಚ್ಚಲ ಚಿನ್ನ ಗೆದ್ದರು. ಪುರುಷರ 109 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ 405 ಕೆಜಿ ಭಾರ ಎತ್ತುವ ಮೂಲಕ ಪಾಕ್ ಕ್ರೀಡಾಪಟು ಈ ಸಾಧನೆ ಮಾಡಿದರು. ನಂತರ ಭಾರತದ ಬಗ್ಗೆ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
-
Muhammad Nooh Dastgir Butt wins Pakistan's first gold of the 2022 CWG in the men's 109+kg weightlifting category with a total of 405kg (172kg snatch + 232kg. 🇮🇳Gurdeep Dullet wins his first CWG bronze with a total of 390kg (167kg + 223kg). David Liti of NZ gets silver with 394kg pic.twitter.com/YI3zkLgkPr
— jonathan selvaraj (@jon_selvaraj) August 3, 2022 " class="align-text-top noRightClick twitterSection" data="
">Muhammad Nooh Dastgir Butt wins Pakistan's first gold of the 2022 CWG in the men's 109+kg weightlifting category with a total of 405kg (172kg snatch + 232kg. 🇮🇳Gurdeep Dullet wins his first CWG bronze with a total of 390kg (167kg + 223kg). David Liti of NZ gets silver with 394kg pic.twitter.com/YI3zkLgkPr
— jonathan selvaraj (@jon_selvaraj) August 3, 2022Muhammad Nooh Dastgir Butt wins Pakistan's first gold of the 2022 CWG in the men's 109+kg weightlifting category with a total of 405kg (172kg snatch + 232kg. 🇮🇳Gurdeep Dullet wins his first CWG bronze with a total of 390kg (167kg + 223kg). David Liti of NZ gets silver with 394kg pic.twitter.com/YI3zkLgkPr
— jonathan selvaraj (@jon_selvaraj) August 3, 2022
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ 24 ವರ್ಷದ ಈ ಕ್ರೀಡಾಳುವಿಗೆ ಭಾರತದ ವೇಟ್ ಲಿಫ್ಟರ್ ಮೀರಾಬಾನು ಚಾನು ಪ್ರೇರಣೆಯಂತೆ. "ಕಳೆದ ಟೋಕಿಯೋ ಒಲಿಂಪಿಕ್ಸ್ನಲ್ಲಿ ಮೀರಾ ಬಾಯಿ ಬೆಳ್ಳಿ ಗೆದ್ದಿದ್ದು ನನ್ನಲ್ಲಿ ಹೆಮ್ಮೆ ಉಂಟು ಮಾಡಿತ್ತು. ದಕ್ಷಿಣ ಏಷ್ಯಾ ರಾಷ್ಟ್ರಗಳಿಂದ ಬರುವ ನಾವೂ ಸಹ ಪದಕ ಗೆಲ್ಲಬಲ್ಲೆವು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ" ಎಂದರು.
ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್: 109 ಕೆಜಿ ವಿಭಾಗದಲ್ಲಿ ಗುರುದೀಪ್ ಸಿಂಗ್ಗೆ ಕಂಚು
2015ರಲ್ಲಿ ಪುಣೆಯಲ್ಲಿ ನಡೆದ ಯೂತ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾಗಿಯಾಗಿರುವುದನ್ನು ಮೆಲುಕು ಹಾಕಿದ ಮುಹಮ್ಮದ್, 2016ರಲ್ಲಿ ಗುವಾಹಟಿಯಲ್ಲಿ ಆಯೋಜನೆಗೊಂಡಿದ್ದ ಸೌತ್ ಏಷ್ಯನ್ ಗೇಮ್ಸ್ ಬಗ್ಗೆಯೂ ಮಾತನಾಡಿದರು. ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನಗೆ ಅಪಾರ ಪ್ರೀತಿ ಹಾಗೂ ಬೆಂಬಲ ಸಿಕ್ಕಿದೆ ಎಂದು ಹೇಳಿದರು.
ಭಾರತಕ್ಕೆ ಮತ್ತೊಮ್ಮೆ ಹೋಗಬೇಕೆಂದಿರುವ ಅವರು, ಪಾಕಿಸ್ತಾನದಲ್ಲಿರುವ ಅಭಿಮಾನಿಗಳಿಗಿಂತಲೂ ಹೆಚ್ಚಿನ ಅಭಿಮಾನಿಗಳು ನನಗೆ ಭಾರತದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 109 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಗುರುದೀಪ್ ಸಿಂಗ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. ಈ ಸಂದರ್ಭದಲ್ಲಿ ಪಾಕ್ ಅಥ್ಲೀಟ್ಸ್ ಜೊತೆಗೂ ಕೆಲ ಹೊತ್ತು ಅವರು ಮಾತುಕತೆ ನಡೆಸಿದರು.
"ನಾನು ಹಾಗು ವೇಟ್ ಲಿಫ್ಟರ್ ಗುರ್ದೀಪ್ ಸಿಂಗ್ ಒಳ್ಳೆಯ ಸ್ನೇಹಿತರು. ಕಳೆದ 7-8 ವರ್ಷಗಳಿಂದ ನಮ್ಮ ನಡುವೆ ಉತ್ತಮ ಆತ್ಮೀಯತೆ ಇದೆ. ವಿದೇಶದಲ್ಲಿ ಇಬ್ಬರೂ ಒಟ್ಟಿಗೆ ತರಬೇತಿ ಸಹ ಪಡೆದುಕೊಂಡಿದ್ದೇವೆ. ಕಾಮನ್ವೆಲ್ತ್ನಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳಾಗಿದ್ದೇವೆ. ಇದೊಂದು ವೈಯಕ್ತಿಕ ಸಾಮರ್ಥ್ಯದ ಸ್ಪರ್ಧೆ ಮಾತ್ರ" ಎಂದು ಹೇಳಿದ್ದಾರೆ.