ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತೀಯ ಕ್ರೀಡಾಳುಗಳ ಅಮೋಘ ಪ್ರದರ್ಶನ ಮುಂದುವರೆದಿದೆ. 3 ಚಿನ್ನ 3 ಬೆಳ್ಳಿ 3 ಕಂಚು ಸೇರಿ 9 ಪದಕಗಳ ಸಾಧನೆ ಮಾಡಿರುವ ಭಾರತ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಗೇಮ್ಸ್ನ ನಾಲ್ಕನೇ ದಿನದಾಟದಲ್ಲಿ ಭಾರತಕ್ಕೆ 3 ಪದಕಗಳು ದೊರೆತವು.
ವೇಟ್ಲಿಫ್ಟಿಂಗ್ನಲ್ಲಿ ಭಾರತ ಬಲಿಷ್ಠ ಎಂಬುದನ್ನು ಮತ್ತೆ ಸಾಬೀತು ಮಾಡಿದೆ. ಭಾರತಕ್ಕೆ ಧಕ್ಕಿರುವ 9 ಪದಕಗಳಲ್ಲಿ 7 ಭಾರ ಎತ್ತುವ ಸ್ಪರ್ಧೆಗಳಲ್ಲಿಯೇ ಬಂದಿವೆ. ಇನ್ನೆರಡು ಕುಸ್ತಿಯಲ್ಲಿ ಒಲಿದಿವೆ.
-
Here is the medal tally after day 4 of the Commonwealth Games.#sports #Commonwealth #CWG #CommonwealthGames #SkyExchSports #Cricket #medal #medaltally #Sports #Skyexch pic.twitter.com/EodakgWJsF
— SkyExch (@officialskyexch) August 2, 2022 " class="align-text-top noRightClick twitterSection" data="
">Here is the medal tally after day 4 of the Commonwealth Games.#sports #Commonwealth #CWG #CommonwealthGames #SkyExchSports #Cricket #medal #medaltally #Sports #Skyexch pic.twitter.com/EodakgWJsF
— SkyExch (@officialskyexch) August 2, 2022Here is the medal tally after day 4 of the Commonwealth Games.#sports #Commonwealth #CWG #CommonwealthGames #SkyExchSports #Cricket #medal #medaltally #Sports #Skyexch pic.twitter.com/EodakgWJsF
— SkyExch (@officialskyexch) August 2, 2022
ಇಂದು ನಡೆಯುವ ಲಾನ್ ಬಾಲ್, ಬ್ಯಾಡ್ಮಿಂಟನ್ ಮಿಶ್ರ ತಂಡ ಮತ್ತು ಟೇಬಲ್ ಟೆನಿಸ್ ಪುರುಷರ ತಂಡಗಳ ಫೈನಲ್‌ನಲ್ಲಿ ಭಾರತ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ವೇಟ್‌ಲಿಫ್ಟಿಂಗ್ ಸೇರಿದಂತೆ ಇತರ ಸ್ಪರ್ಧೆಗಳಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲುವ ಸಾಧ್ಯತೆಯಿದೆ. 24 ಚಿನ್ನ, 18 ಬೆಳ್ಳಿ, 19 ಕಂಚು ಸೇರಿ 61 ಪದಕ ಕೊಳ್ಳೆ ಹೊಡೆದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.
ಓದಿ: ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ, ಟಿಟಿಯಲ್ಲಿ ಫೈನಲ್ಗೆ ತಲುಪಿದ ಹಾಲಿ ಚಾಂಪಿಯನ್!