ಲಂಡನ್: ಮ್ಯಾಂಚೆಸ್ಟರ್ ಯುನೈಟೆಡ್ ತಂಡ ತೊರೆದ ಬಳಿಕ ವಿಶ್ವಶ್ರೇಷ್ಠ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಮತ್ತೊಂದು ಶಾಕ್ ತಗುಲಿದೆ. ಅಭಿಮಾನಿಯೊಬ್ಬರ ಮೊಬೈಲ್ ಕಿತ್ತೆಸೆದು ಹೊಡೆದು ಹಾಕಿ ಅನುಚಿತ ವರ್ತನೆ ತೋರಿದ ಕಾರಣ ಫುಟ್ಬಾಲ್ ಅಸೋಸಿಯೇಷನ್ 50 ಲಕ್ಷ ದಂಡ ಮತ್ತು 2 ಪಂದ್ಯಗಳ ನಿಷೇಧ ಹೇರಿದೆ.
ರೊನಾಲ್ಡೊ ಅನುಚಿತ ವರ್ತನೆಯ ವಿರುದ್ಧ ಎಫ್‌ಎ ಆರೋಪ ಮಾಡಿತ್ತು. ವಿಚಾರಣೆ ನಡೆಸಿದ ಸ್ವತಂತ್ರ ಸಮಿತಿ ರೊನಾಲ್ಡೊಗೆ ಅಮಾನತು ಮತ್ತು ದಂಡ ವಿಧಿಸಿ ಆದೇಶಿಸಿದೆ. ಇದನ್ನು ರೊನಾಲ್ಡೊ ಕೂಡ ಒಪ್ಪಿಕೊಂಡಿದ್ದು, ವೈಯಕ್ತಿಕ ವಿಚಾರಣೆಗೆ ಹಾಜರಾಗಲೂ ಸಜ್ಜು ಎಂದಿದ್ದಾರೆ.
ನಿಷೇಧ ಹೇರಿದ ಬಳಿಕ Instagram ನಲ್ಲಿ ಕ್ಷಮೆಯಾಚಿಸಿದ ರೊನಾಲ್ಡೊ, "ಪಂದ್ಯ ಸೋತಾಗ ಇರುವ ಭಾವನೆಗಳನ್ನು ಎದುರಿಸುವುದು ಕಷ್ಟಕರ. ಆದಾಗ್ಯೂ ಅದನ್ನು ನಿಭಾಯಿಸಬೇಕಿತ್ತು. ಗೌರವಯುತವಾಗಿ, ತಾಳ್ಮೆಯಿಂದಿರಬೇಕಿತ್ತು. ಆಟವನ್ನು ಪ್ರೀತಿಸುವ ಎಲ್ಲಾ ಯುವಕರಿಗೆ ಮಾದರಿಯಾಗಬೇಕು ಎಂದು ಬರೆದುಕೊಂಡಿದ್ದರು.