ನವದೆಹಲಿ : ಭಾರತದ ಶೂಟರ್ಗಳು ತಮ್ಮ ಮನೆಯ ವ್ಯಾಪ್ತಿಯಿಂದ ದೂರದ ಪ್ರಯಾಣಿಸದೇ ತಮ್ಮ ಮನೆಯ ವ್ಯಾಪ್ತಿಯಲ್ಲಿ ದೊರೆಯುವ ರೇಂಜ್ಗಳಲ್ಲಿ ತರಬೇತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಬುಧವಾರ ಹೇಳಿದ್ದಾರೆ.
ದೆಹಲಿಯ ಸುತ್ತಮುತ್ತ ವಾಸಿಸುತ್ತಿರುವ ಒಲಿಂಪಿಕ್ಸ್ ಕೋರ್ ಗ್ರೂಪ್ ಶೂಟರ್ಗಳು ಜುಲೈ ಮತ್ತು ಆಗಸ್ಟ್ನಲ್ಲಿ ತಮ್ಮದೇ ಆದ ತರಬೇತಿ ಪುನರಾರಂಭಿಸಿದ ನಂತರ ಭಾರತದ ಕ್ರೀಡಾ ಪ್ರಾಧಿಕಾರ ಡಾ. ಕರ್ಣಿಸಿಂಗ್ ರೇಂಜ್‌ನ ತೆರೆಯಲು ನಿರ್ಧರಿಸಿದೆ. ಆದರೆ, ಬೇರೆಡೆ ಇರುವ ಶೂಟರ್ಗಳು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದೆಹಲಿಗೆ ಪ್ರಯಾಣಸುವುದು ಅಪಾಯವಾಗಿರುವುದರಿಂದ ಅವರ ಸ್ವಂತ ಸ್ಥಳದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಬುಧವಾರ ರೇಂಜ್ಗೆ ಭೇಟಿ ನೀಡಿದ ರಿಜಿಜು, ಶೂಟರ್‌ಗಳೊಂದಿಗೆ ಸ್ವತಃ ಮಾತನಾಡಿದ್ದರಿಂದ ಆ ತರಬೇತಿ ಕುರಿತು ಅವರಲ್ಲಿದ್ದ ಕಳವಳವನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಾ.ಕರ್ಣಿ ಸಿಂಗ್ ಶೂಟಿಂಗ್ ಶ್ರೇಣಿ(ರೇಂಜ್)ಯಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಲಾಗಿದೆ. ತರಬೇತಿ ಪುನಾರಾರಂಭಗೊಂಡಿದೆ. ಮತ್ತು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆ.
ಈಗಾಗಲೇ ಅಭ್ಯಾಸ ಶುರು ಮಾಡಿರುವ ನಮ್ಮ ಉನ್ನತ ಶೂಟರ್ಗಳಿಗೆ ಅಗತ್ಯ ಮದ್ದುಗುಂಡುಗಳನ್ನು ಅವರುಗಳ ಮನೆಬಾಗಿಲಿಗೆ ತಲುಪಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಿಜಿಜು ಟ್ವೀಟ್ ಮೂಲಕ ತಿಳಿಸಿದ್ದಾರೆ. ಜೊತೆಗೆ ಎಲ್ಲಾ ಉಪಕರಣಗಳನ್ನು ಒಲಿಂಪಿಕ್ ಕೋರ್ ಗ್ರೂಪ್, ಟಾಪ್ಸ್ ಡೆವಲಪ್ಮೆಂಟಲ್ ಗ್ರೂಪ್, ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ನೀಡಲಾಗುವುದು ಎಂದು ಘೋಷಿಸಿದರು. ಇದರಿಂದಾಗಿ ಶೂಟರ್ಗಳು ಪ್ರಯಾಣಿಸದೆ ಕೋವಿಡ್-19ರ ಸಮಯದಲ್ಲಿ ತಮ್ಮ ಮನೆಯ ವ್ಯಾಪ್ತಿಯಲ್ಲಿ ತರಬೇತಿ ಪಡೆಯಬಹುದು ಎಂದು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಆರಂಭದಲ್ಲಿ ತನ್ನ ಒಲಿಂಪಿಕ್ ಕೋರ್ ಗುಂಪಿಗೆ ಆಗಸ್ಟ್ 1ರಿಂದ ತರಬೇತಿ ಶಿಬಿರವನ್ನು ಆಯೋಜಿಸಲು ನಿರ್ಧರಿಸಿತ್ತು. ಆದರೆ, ದೇಶಾದ್ಯಂತ ಕೋವಿಡ್ ಪ್ರಕರಣ ಹೆಚ್ಚಾದ ಕಾರಣ ಅದನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು.