ಚೆನ್ನೈ: ಚೆಸ್ ವಿಶ್ವಕಪ್ ಪಂದ್ಯವು ಆರ್. ಪ್ರಜ್ಞಾನಂದ ಹಾಗೂ ಕಾರ್ಲ್ಸನ್ ನಡುವಿನ ತೀವ್ರ ಪೈಪೋಟಿಯಿಂದಾಗಿ ಮಂಗಳವಾರ ಹಾಗೂ ಬುಧವಾರ ಸತತ ಎರಡು ದಿನಗಳು ಡ್ರಾನಲ್ಲಿ ಅಂತ್ಯಕಂಡಿತ್ತು. ಹೀಗಾಗಿ ಗುರುವಾರ ಅಲ್ಪಾವಧಿಯ ಟೈ-ಬ್ರೇಕ್ ಪಂದ್ಯವನ್ನು ನಡೆಸಲಾಗಿತ್ತು. ಇದರಲ್ಲಿ 1.5-0.5 ಅಂತರದಿಂದ ಕಾರ್ಲ್ಸನ್ ಗೆಲುವು ಸಾಧಿಸಿದ್ದರು. ವೀರೋಚಿತ ಪ್ರರ್ದಶನದ ನಡುವೆಯೂ ರನ್ನರ್ಅಪ್ ಆಗಿದ್ದಾರೆ. ಫೈನಲ್ನಲ್ಲಿ ಸೋತರೂ ಕೂಡ 18 ವರ್ಷದ ಅತಿ ಕಿರಿಯ ವಯಸ್ಸಿಗೆ ಪ್ರಜ್ಞಾನಂದ ಮಾಡಿದ ಈ ಸಾಧನೆಯು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
-
'சாதனைத் தம்பி’ @rpragchess - பெரிதுவக்கும் அவரது தாய் நாகலட்சுமி ஆகியோரை வாழ்த்தியபோது…@M_Sridharan pic.twitter.com/TEy4n2CbzW
— M.K.Stalin (@mkstalin) August 24, 2023 " class="align-text-top noRightClick twitterSection" data="
">'சாதனைத் தம்பி’ @rpragchess - பெரிதுவக்கும் அவரது தாய் நாகலட்சுமி ஆகியோரை வாழ்த்தியபோது…@M_Sridharan pic.twitter.com/TEy4n2CbzW
— M.K.Stalin (@mkstalin) August 24, 2023'சாதனைத் தம்பி’ @rpragchess - பெரிதுவக்கும் அவரது தாய் நாகலட்சுமி ஆகியோரை வாழ்த்தியபோது…@M_Sridharan pic.twitter.com/TEy4n2CbzW
— M.K.Stalin (@mkstalin) August 24, 2023
ಕೊನೆಯವರೆಗೂ ಹೋರಾಡಿದ ಪ್ರಜ್ಞಾನಂದ ಅವರನ್ನು ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಮಾಜಿ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅಭಿನಂದಿಸಿದರು. ಅಲ್ಲದೇ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ, “ಚೆಸ್ ವಿಶ್ವದ 2 ಮತ್ತು 3 ನೇ ಶ್ರೇಯಾಂಕಿತ ಆಟಗಾರರನ್ನು ಸೋಲಿಸಿ 2023 ರ ವಿಶ್ವಕಪ್ ಫೈನಲ್‌ಗೆ ಮುನ್ನಡೆದಿದೆ. ನಿಮ್ಮ ಸಾಧನೆಯು ಭಾರತದ 1.4 ಶತಕೋಟಿ ಜನರ ರಾಷ್ಟ್ರೀಯ ಕನಸುಗಳೊಂದಿಗೆ ಅನುರಣಿಸುತ್ತದೆ. ಇಡೀ ದೇಶವೇ ನಿನ್ನ ಬಗ್ಗೆ ಹೆಮ್ಮೆಪಡುತ್ತದೆ ಪ್ರಜ್ಞಾನಂದ. ನಿಮ್ಮ ಈ ಆಟವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಮೈಲಿಗಲ್ಲುಗಳಾಗಿ ಕಾರ್ಯನಿರ್ವಹಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಇದಾದ ನಂತರ ಅವರು ವಿಡಿಯೋ ಕಾಲ್ ಮೂಲಕ ಪ್ರಜ್ಞಾನಂದ ಅವರನ್ನು ಸಂಪರ್ಕಿಸಿ ಅಭಿನಂದನೆ ಹಾಗೂ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ವಿಡಿಯೋದಲ್ಲಿ ಪ್ರಜ್ಞಾನಂದ ಅವರು ಈ ವಿಶ್ವಚಾಂಪಿಯನ್ ಚೆಸ್ ಸರಣಿಯನ್ನು ಗೆಲ್ಲುವುದಕ್ಕೆ ತಂಬಾ ಪ್ರಯತ್ನಪಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಮುಂದಿನ ಬಾರಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆಲ್ಲುವಂತೆ ಸಿಎಂ ಸ್ಟಾಲಿನ್ ಅವರು ಶುಭ ಹಾರೈಸಿದರು. ಅವರು ಭಾರತಕ್ಕೆ ಬಂದಾಗ ಅವರನ್ನು ಸ್ವಾಗತಿಸಲು ಕ್ರೀಡಾ ಸಚಿವ ಉದಯನಿಧಿ ಬರುತ್ತಾರೆ ಎಂದು ಸಿಎಂ ಸ್ಟಾಲಿನ್ ಅವರು ಹೇಳಿದರು. ಪ್ರಜ್ಞಾನಂದ ಅವರ ತಾಯಿ ನಾಗಲಕ್ಷ್ಮಿ ಅವರಿಗೂ ಮುಖ್ಯಮಂತ್ರಿಗಳು ಶುಭ ಹಾರೈಸಿದರು.
ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದ ಫಿಡೆ ಚೆಸ್ ವಿಶ್ವಕಪ್‌ನಲ್ಲಿ ರನ್ನರ್ಅಪ್ ಆಗಿ ಹೊರಹೊಮ್ಮಿರುವ ಭಾರತದ ಭರವಸೆಯ ಆಟಗಾರ ಆರ್.ಪ್ರಜ್ಞಾನಂದ ಅವರಿಗೆ 80 ಸಾವಿರ ಅಮೆರಿಕ ಡಾಲರ್ ಎಂದರೆ, ಅಂದಾಜು 66.13 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ವಿಶ್ವಕಪ್ ಗೆದ್ದ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಅವರಿಗೆ 110 ಸಾವಿರ ಡಾಲರ್ (ಅಂದಾಜು 90.90 ಲಕ್ಷ ರೂಪಾಯಿ) ಲಭಿಸಿದೆ.
ಓದಿ: ನಾನಿನ್ನೂ ನನ್ನ ಆಟದಲ್ಲಿ ಸುಧಾರಣೆ ಕಾಣಬೇಕಿದೆ: ಫಿಡೆ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಪ್ರಜ್ಞಾನಂದ ಮನದಾಳ