ETV Bharat / sports

ಛತ್ರಸಾಲ್ ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್​ರ ನಾಲ್ವರು ಸಹಚರರ ಬಂಧನ

author img

By

Published : May 26, 2021, 3:53 PM IST

ಛತ್ರಸಾಲ್‌ ಕ್ರೀಡಾಂಗಣದಲ್ಲಿ ಮೇ 4ರ ಮಧ್ಯರಾತ್ರಿ ಕುಸ್ತಿಪಟು ಸಾಗರ್‌ ರಾಣಾ ಅವರನ್ನು ಹತ್ಯೆ ಮಾಡಲಾಗಿತ್ತು. ಇವರ ಇಬ್ಬರು ಸ್ನೇಹಿತರಿಗೆ ಮಾರಣಾಂತಿಕ ಗಾಯವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್ ಮತ್ತು ಅವರ ಸ್ನೇಹಿತ ಅಜಯ್‌ ಅವರನ್ನು ಸೋಮವಾರ ದೆಹಲಿ ಪೊಲೀಸ್‌ ಬಂಧಿಸಿದ್ದರು.

ಛತ್ರಸಾಲ್ ಕೊಲೆ ಪ್ರಕರಣ
ಛತ್ರಸಾಲ್ ಕೊಲೆ ಪ್ರಕರಣ

ನವದೆಹಲಿ: ಕುಸ್ತಿಪಟು ಸಾಗರ್‌ ರಾಣಾ ಧಂಕರ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಸುಶೀಲ್‌ ಕುಮಾರ್‌ ಅವರ ನಾಲ್ವರು ಸಹಚರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ ಬಂಧಿತರಾದ ಭೂಪೇಂದರ್‌(38), ಮೋಹಿತ್‌(22), ಗುಲಾಬ್‌(24) ಮತ್ತು ರೋಹ್ಟಕ್‌ ನಿವಾಸಿ ಮಂಜೀತ್‌(29) ಸುಶೀಲ್ ಕುಮಾರ್​ ಅವರ ಸಹವರ್ತಿಗಳಾಗಿ ಗುರುತಿಸಿಕೊಂಡಿದ್ದರು. ಅಲ್ಲದೇ ಕಲಾ ಅಸೌದ ಮತ್ತು ನೀರಜ್ ಬವಾನಾ ಗ್ಯಾಂಗ್‌ನ ಸಕ್ರಿಯ ಸದಸ್ಯರಾಗಿದ್ದರು. ಇದೀಗ ಇವರೆಲ್ಲರ ವಿರುದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ಕುಸ್ತಿಪಟು ಸುಶೀಲ್ ಕುಮಾರ್​ಗೆ ಮರಣದಂಡನೆ ವಿಧಿಸಿ: ಮೃತ ಸಾಗರ್​ ತಾಯಿ ಆಗ್ರಹ

ನಿರ್ದಿಷ್ಟ ಮಾಹಿತಿಯ ಮೇರೆಗೆ ರೋಹಿಣಿ ಜಿಲ್ಲಾ ದೆಹಲಿ ಪೊಲೀಸರ ವಿಶೇಷ ಸಿಬ್ಬಂದಿ ಗೆವೆರಾ ರೈಲ್ವೆ ಕ್ರಾಸಿಂಗ್ ಬಳಿ ಈ ನಾಲ್ವರನ್ನು ಬಂಧಿಸಿದ್ದಾರೆ. " ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ ನಂತರ, ಘಟನೆ ನಡೆದ ಸ್ಥಳಕ್ಕೆ ತಾವೂ ಮೇ 4 ರಂದು ತೆರೆಳಿದ್ದೆವು, ಆದರೆ, ಬೇರೆಯವರು ಈ ಹತ್ಯೆ ನಡೆಸಿದ್ದಾಗಿ ಮತ್ತು ಆ ಸ್ಥಳದಲ್ಲಿ ತಮ್ಮ ವಾಹನಗಳನ್ನು ಮತ್ತು ಆಯುಧಗಳನ್ನು ಬಿಟ್ಟು ಪರಾರಿಯಾಗಿದ್ದಾಗಿ ತಿಳಿಸಿದ್ದಾರೆ. ಜೊತೆಗೆ ಹತ್ಯೆಯಲ್ಲಿ ಭಾಗಿಯಾಗಿದ್ದವರ ವಿವರಗಳನ್ನು ನೀಡಿದ್ದಾರೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.