ದುಬೈ: ಕಾಮನ್ವೆಲ್ತ್ ಕಂಚು ಪದಕ ವಿಜೇತ ಮೊಹಮ್ಮದ್ ಹುಸಾಮುದ್ದೀನ್(56ಕೆಜಿ) ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳವಾರ ಸೋಲು ಕಂಡು ನಿರಾಸೆ ಅನುಭವಿಸಿದ್ದಾರೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ವಿಶ್ವಚಾಂಪಿಯನ್ ಆಗಿರುವ ಉಜ್ಬೆಕಿಸ್ತಾನದ ಮಿರಾಜಿಜ್‌ಬೆಕ್ ಮಿರ್ಜಹಲಿಲೊವ್ ವಿರುದ್ಧ 1-4 ಅಂತರದಲ್ಲಿ ಸೋಲು ಕಂಡರು.
ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಮಿರ್ಜಾಹಲಿಲೋವ್ ತಮ್ಮ ಫುಟ್ವರ್ಕ್ ಮತ್ತು ನಿಖರವಾದ ಸ್ಟ್ರೈಟ್ಗಳಿಂದ ಭಾರತೀಯ ಬಾಕ್ಸರ್ ಎದುರು ಪ್ರಾಬಲ್ಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸುವಂತೆ ಮಾಡಿದವು.
ಹುಸಾಮುದ್ದೀನ್ ಜೊತೆಗೆ 81 ಕೆಜಿ ವಿಭಾಗದ ಲೈಟ್ ಹೆವಿವೇಯ್ಟ್ ವಿಭಾಗದಲ್ಲಿ ಸುಮಿತ್ ಸಂಗ್ವಾನ್ ಕೂಡ ಸೋಲು ಕಂಡರು. ಅವರು ಇರಾನ್‌ನ ಮೈಸಮ್ ಘೆಸ್ಲಘಿ ವಿರುದ್ಧ ಸೋಲು ಕಂಡು ಹೊರಬಿದ್ದರು. ಬುಧವಾರ ಭಾರತದ ಒಲಿಂಪಿಕ್ಸ್ ಬೌಂಡ್ ಬಾಕ್ಸರ್ಗಳಾದ ಅಮಿತ್ ಪಂಘಲ್(52ಕೆಜಿ), ವಿಕಾಶ್ ಕೃಷ್ಣನ್(69ಕೆಜಿ) ಮತ್ತು ಆಶಿಷ್ ಕುಮಾರ್(75ಕೆಜಿ) ವಿಭಾಗದಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಮತ್ತು ಹಾಲಿ ಚಾಂಪಿಯನ್ ಪಂಗಲ್ ಮಂಗೋಲಿಯಾದ ಖಾರ್ಖು ಎಂಖ್‌ಮಂಡಖ್ ಅವರನ್ನು ಎದುರಿಸಲಿದ್ದಾರೆ. ಏಷ್ಯನ್ ಗೇಮ್ಸ್ ಚಾಂಪಿಯನ್ ವಿಕಾಸ್ ಕೃಷ್ಣನ್ ಇರಾನ್‌ನ ಮೊಸ್ಲೆಮ್ ಮಲಾಮಿರ್ ವಿರುದ್ಧ, ಕಳೆದ ಆವೃತ್ತಿಯ ಬೆಳ್ಳಿ ಪದಕ ವಿಜೇತ ಆಶಿಷ್ ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಕಜಕಿಸ್ತಾನ್‌ನ ಅಬಿಲ್ಖಾನ್ ಅಮಾಂಕುಲ್ ಅವರನ್ನು ಎದುರಿಸಲಿದ್ದಾರೆ.
ಇದನ್ನು ಓದಿ:ಇಂಗ್ಲೆಂಡ್ ಸರಣಿಯಲ್ಲಿ ಬದಲಾವಣೆಯಿಲ್ಲ: ಸೆಪ್ಟೆಂಬರ್ನ 3ನೇ ವಾರದಲ್ಲಿ ಐಪಿಎಲ್ ಪುನಾರಂಭ