ಲುಸೈಲ್ (ಕತಾರ್): ಅರ್ಜೆಂಟೀನಾ ಮತ್ತು ಮೆಕ್ಸಿಕೋ ನಡುವೆ ನಿನ್ನೆ ನಡೆದ ಪಂದ್ಯ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಯಿತು. ತನ್ನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತು ಆಘಾತ ಅನುಭವಿಸಿದ ಅರ್ಜೆಂಟೀನಾ ನಿನ್ನೆ ಮೆಕ್ಸಿಕೊ ವಿರುದ್ದ 2-0 ಗೋಲುಗಳ ಜಯ ಸಾಧಿಸಿ ಮರಳಿ ಲಯ ಕಂಡುಕೊಂಡಿತು.
ಅಷ್ಟೇ ಅಲ್ಲ, ನಿನ್ನೆ ತಮ್ಮ ನೆಚ್ಚಿನ ತಾರೆ ಲಿಯೋನೆಲ್ ಮೆಸ್ಸಿ ಅವರ ಆಟವನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣದಲ್ಲಿ 88,966 ಪ್ರೇಕ್ಷಕರು ಸೇರಿದ್ದರು. ಈ ಮೂಲಕ 28 ವರ್ಷದ ಹಿಂದಿನ ಇತಿಹಾಸ ಮರುಕಳಿಸಿತು. 1994 ರಲ್ಲಿ ಬ್ರೆಜಿಲ್ ಮತ್ತು ಇಟಲಿ ನಡುವೆ ಕ್ಯಾಲಿಫೋರ್ನಿಯಾದ ಪಸಾಡೆನಾ ರೋಸ್ ಬೌಲ್‌ನಲ್ಲಿ ನಡೆದ ಫೈನಲ್ ಪಂದ್ಯಕ್ಕೆ 91,194 ಫುಟ್ಬಾಲ್ ಅಭಿಮಾನಿಗಳು ಸಾಕ್ಷಿಯಾಗಿದ್ದರು.
ಇದನ್ನೂ ಓದಿ :ಟ್ಯುನೀಷಿಯಾಗೆ 'ತಲೆ'ನೋವಾದ ಮಿಚೆಲ್ ಡ್ಯೂಕ್.. ಆಸ್ಟ್ರೇಲಿಯಾಗೆ ಹೆಡರ್ ವಿನ್