ETV Bharat / sports

ಡೂಪಿಂಗ್​ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆಸೀಸ್‌ ಈಜುಪಟುವಿಗೆ 2 ವರ್ಷ ನಿಷೇಧ - ಡೂಪಿಂಗ್​ ಪರೀಕ್ಷೆ

2017ರ ವಿಶ್ವಚಾಂಪಿಯನ್​ಶಿಪ್​ನಲ್ಲಿ ರಿಯೇಯಲ್ಲಿ 4 ಪದಕ ಪಡೆದಿರುವ 22 ವರ್ಷದ ಈಜುಪಟು ಜುಲೈ 11,2021ರವರೆಗಿನ ಯಾವುದೇ ಸ್ಪರ್ಧೆಯಲ್ಲೂ ಭಾಗವಹಿಸುವಂತಿಲ್ಲ. ಆದರೆ, ಟೋಕಿಯೊ ಒಲಿಂಪಿಕ್ಸ್​ಗೆ ಎರಡು ವಾರವಿರುವಾಗ ಅವರ ನಿಷೇಧ ಕೊನೆಗೊಳ್ಳಲಿದೆ..

ಶೈನಾ ಜೇಕ್​ ನಿಷೇಧ
ಶೈನಾ ಜೇಕ್​ ನಿಷೇಧ
author img

By

Published : Nov 16, 2020, 5:32 PM IST

ಲೌಸನ್ನೆ(ಸ್ವಿಟ್ಜರ್ಲೆಂಡ್​): ಆಸ್ಟ್ರೇಲಿಯಾದ ಸ್ವಿಮ್ಮರ್​ ಶೈನಾ ಜೇಕ್ ಸೋಮವಾರ ಆಕಸ್ಮಿಕವಾಗಿ ಡೂಪಿಂಗ್​ ಟೆಸ್ಟ್​ನಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಅವರಿಗೆ ಎರಡು ವರ್ಷಗಳ ಕಾಲ ನಿಷೇಧ ಮಾಡಲಾಗಿದೆ. ಅವರ ನಿಷೇಧದ ಅವಧಿ ಟೋಕಿಯೊ ಒಲಿಂಪಿಕ್ಸ್​ ಆರಂಭವಾಗಲಿರುವ ಕೆಲವೇ ದಿನಗಳಲ್ಲಿ ಅಂತ್ಯಗೊಳ್ಳಲಿದೆ.

ಜೂನ್ 2019ರಲ್ಲಿ ನಡೆದ ಸ್ಪರ್ಧೆಯ ವೇಳೆ ಡೂಪಿಂಗ್ ಪರೀಕ್ಷೆಯಲ್ಲಿ ಜೇಕ್ ಸಕಾರಾತ್ಮಕವಾಗಿ ಪರೀಕ್ಷಿಸಲ್ಪಟ್ಟಿದ್ದರು. ಈ ಕಾರಣಕ್ಕಾಗಿ ಫ್ರೀಸ್ಟೈಲ್ ಈಜುಪಟುವನ್ನು ಆಸ್ಟ್ರೇಲಿಯಾ ತಂಡದಿಂದ ಅಮಾನತುಗೊಳಿಸಲಾಗಿತ್ತು ಮತ್ತು ಜಪಾನ್‌ನ ತರಬೇತಿ ಶಿಬಿರದಿಂದ ಮನೆಗೆ ಕಳುಹಿಸಲಾಯಿತು.

ಕ್ರೀಡಾ ಮಧ್ಯಸ್ಥಿಕೆ ಕೋರ್ಟ್​ನ ನ್ಯಾಯಾಧೀಶರು "ಜೇಕ್​ ಉದ್ದೇಶ ಪೂರ್ವಕವಾಗಿ ಲಿಗಾಂಡ್ರೊಲ್ ಅನ್ನು ಸೇವಿಸಿಲ್ಲ ಮತ್ತು ಡೂಪಿಂಗ್ ವಿರೋಧಿ ನಿಯಮ ಉಲ್ಲಂಘನೆ ಉದ್ದೇಶಪೂರ್ವಕವಲ್ಲ ಎಂದು ಸಾಬೀತುಪಡಿಸಿದ್ದಾರೆ " ಎಂದು ಹೇಳಿದ್ದು, ಅವರ ಮೇಲೆ ಕೇವಲ 2 ವರ್ಷಗಳ ಶಿಕ್ಷೆಯನ್ನು ನೀಡಿದೆ.

ಆದರೆ, ಜೇಕ್​ ತಮ್ಮ ವಿರುದ್ಧದ ನಿಷೇಧದ ತೀರ್ಪಿನ ವಿರುದ್ಧ ಸಿಎಎಸ್​ನಲ್ಲಿ ಪ್ರಶ್ನಿಸಬಹುದು. ಅದೇ ರೀತಿ ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ ಕೂಡ ಜೇಕ್​ ಮೇಲೆ 2 ವರ್ಷದ ನಿಷೇಧದ ಬದಲು ದೀರ್ಘಕಾಲದ ನಿಷೇಧವನ್ನ ಹೇರಲು ಮನವಿ ಮಾಡಬಹುದು ಎಂದು ತಿಳಿದು ಬಂದಿದೆ.

2017ರ ವಿಶ್ವಚಾಂಪಿಯನ್​ಶಿಪ್​ನಲ್ಲಿ ರಿಯೇಯಲ್ಲಿ 4 ಪದಕ ಪಡೆದಿರುವ 22 ವರ್ಷದ ಈಜುಪಟು ಜುಲೈ 11,2021ರವರೆಗಿನ ಯಾವುದೇ ಸ್ಪರ್ಧೆಯಲ್ಲೂ ಭಾಗವಹಿಸುವಂತಿಲ್ಲ. ಆದರೆ, ಟೋಕಿಯೊ ಒಲಿಂಪಿಕ್ಸ್​ಗೆ ಎರಡು ವಾರವಿರುವಾಗ ಅವರ ನಿಷೇಧ ಕೊನೆಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.