ಮೆಲ್ಬೋರ್ನ್ : ರಷ್ಯಾದ ಟೆನಿಸ್ ಸ್ಟಾರ್ ಡ್ಯಾನಿಯಲ್ ಮೆಡ್ವೆಡೆವ್ ಆಸ್ಟ್ರೇಲಿಯನ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ವಿಶ್ವದ 2ನೇ ಶ್ರೇಯಾಂಕದ ಮೆಡ್ವೆಡೆವ್ ಸೋಮವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕಾದ ಮ್ಯಾಕ್ಸಿಮ್ ಕ್ರೆಸಿ ವಿರುದ್ಧ 6-2,7-6,6-7 ಮತ್ತು 7-5ರಲ್ಲಿ ಗೆಲುವು ಸಾಧಿಸಿ 8ರ ಘಟ್ಟಕ್ಕೆ ಪ್ರವೇಶಿಸಿದರು.
ಮೆಡ್ವೆಡೆವ್ ಕ್ವಾರ್ಟರ್ ಫೈನಲ್ನಲ್ಲಿ ಕೆನಡಾದ 21 ವರ್ಷದ ಫೆಲಿಕ್ಸ್ ಆಗರ್ ಅಲಿಯಾಸಿಮ್ ವಿರುದ್ಧ ಸೆಣಸಾಡಲಿದ್ದಾರೆ. 9ನೇ ಶ್ರೇಯಾಂಕದ ಫೆಲಿಕ್ಸ್ ಇಂದು ನಡೆದ 4ನೇ ಸುತ್ತಿನ ಪಂದ್ಯದಲ್ಲಿ 27ನೇ ಶ್ರೇಯಾಂಕದ ಕ್ರೊವೇಷಿಯಾದ ಮೆರಿನ್ ಸಿಲಿಕ್ ವಿರುದ್ಧ 7-5,7-6,3-6,6-3ರಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈಗಾಗಲೇ 20 ಗ್ರ್ಯಾಂಡ್ ಸ್ಲಾಮ್ ವಿಜೇತ ಸ್ಪೇನ್ನ ರಾಫೆಲ್ ನಡಾಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ನಾಳೆ 14ನೇ ಶ್ರೇಯಾಂಕದ ಕೆನಡಿಯನ್ ಸ್ಟಾರ್ ಡೆಮಿಟ್ರಿ ಶಪೊವಲೊವ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಭಾರತದ ಸಾನಿಯಾ ಮಿರ್ಜಾ ಮಿಕ್ಸಡ್ ಡಬಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ನಾಳೆ ಕ್ವಾರ್ಟರ್ ಫೈನಲ್ಸ್ನಲ್ಲಿ ಅಮೆರಿಕಾದ ಜೊತೆಗಾರನೊಂದಿಗೆ ಆಸ್ಟ್ರೇಲಿಯಾ ಜೋಡಿ ಜೇಸನ್ ಕುಬ್ಲರ್ ಮತ್ತು ಜೈಮೀ ಫ್ಲೌರಿಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ:ಲಾಸ್ಟ್ ಓವರ್ ಮ್ಯಾಜಿಕ್.. ಇಂಗ್ಲೆಂಡ್ ವಿರುದ್ಧ ಕೇವಲ 1 ರನ್ನಿಂದ ಸೋತ ವೆಸ್ಟ್ ಇಂಡೀಸ್..