ಮಾಂಟ್ರಿಯಲ್: ಪ್ರಸ್ತುತ ಡೋಪಿಂಗ್ ನಿಷೇಧವನ್ನು ಅನುಭವಿಸುತ್ತಿರುವ ಕ್ರೀಡಾಪಟುಗಳು ತಮ್ಮ ನಿಷೇಧದ ಅವಧಿ ಮುಗಿದಲ್ಲಿ ಮುಂಬರುವ ಒಲಿಂಪಿಕ್ನಲ್ಲಿ ಭಾಗವಹಿಸಬಹುದೆಂದು ಆ್ಯಂಟಿ ಡೋಪಿಂಗ್ ಏಜೆನ್ಸಿ (ವಾಡಾ) ಅಧ್ಯಕ್ಷ ವಿಟೋಲ್ಡ್ ಬಂಕಾ ಹೇಳಿದರು.
ಚೀನಾದಿಂದ ಬಂದ ಕೊರೊನಾ ಮಾಹಾಮಾರಿ ಇಡೀ ವಿಶ್ವವನ್ನೇ ಆವರಿಸುತ್ತಿದ್ದು, ಎಲ್ಲ ರೀತಿಯ ಕ್ರೀಡಾಕೂಟಗಳನ್ನು ರದ್ದು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜುಲೈನಲ್ಲಿ ಪ್ರಾರಂಭವಾಗಬೇಕಿದ್ದ ಒಲಿಂಪಿಕ್ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.
ಇದರಿಂದ ಡೋಪಿಂಗ್ ನಿಷೇಧದಿಂದ ಈ ವರ್ಷ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಸಾಧ್ಯವಾಗದ ಭಾರತೀಯ ಕುಸ್ತಿಪಟು ನರಸಿಂಗ್ ಯಾದವ್ ಅವರಂತಹ ಹಲವು ಕ್ರೀಡಾಪಟುಗಳು ಮುಂದಿನ ಒಲಿಂಪಿಕ್ನಲ್ಲಿ ಭಾಗವಹಿಸಬಹುದಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ನಿಷೇಧದ ಸಮಯವು ಧೀರ್ಘವಾಗಿದ್ದು, ನಿಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ್ದಲ್ಲಿ ಮುಂಬರುವ ಒಲಿಂಪಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಕಾನೂನಿನ ದೃಷ್ಟಿಯಿಂದ ಶಿಕ್ಷೆ ವಿಸ್ತರಿಸಲು ಸಾಧ್ಯವಿಲ್ಲ.
ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಾರದು. ಒಂದೊಮ್ಮೆ ಹಾಗೇ ನಡೆದುಕೊಂಡಲ್ಲಿ ಏಜೆನ್ಸಿ ನಿದ್ರೆ ಮಾಡುತ್ತಿರುವುದಿಲ್ಲ. ಅಂತಹವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ನಮ್ಮಲ್ಲಿ ಕ್ರೀಡಾಪಟುಗಳ ಪಾಸ್ಪೋರ್ಟ್, ಅವರ ಬಗೆಗೆ ಗುಪ್ತಚರ ಇಲಾಖೆ ಸೇರಿದಂತೆ ಇತರ ಮೂಲಗಳಿಂದ ಸಂಗ್ರಹಸಿದ ಮಾಹಿತಿಗಳಿದ್ದು, ಇವೆಲ್ಲವೂ ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ ಮ್ರಮುಖ ಸಾಧನಗಳಿವೆ. ಮೋಸ ಮಾಡಲು ಇದು ಸೂಕ್ತವಾದ ಸ್ಥಳವಲ್ಲ ಎಂದೂ ವಾರ್ನ್ ಮಾಡಿದರು.