ನವದೆಹಲಿ: ಅಸ್ಸೋಮ್ನ ಸ್ಪ್ರಿಂಟರ್ ಅಮ್ಲಾನ್ ಬೋರ್ಗಹೈನ್ 200 ಮೀಟರ್ ಓಟವನ್ನು 20.52 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸುವ ಮೂಲಕ ರಾಷ್ಟ್ರೀಯ ದಾಖಲೆಗೆ ಪಾತ್ರರಾಗಿದ್ದಾರೆ. ಬುಧವಾರ ನಡೆದ ಫೆಡರೇಷನ್ ಕಪ್ನ ಫೈನಲ್ಸ್ನಲ್ಲಿ ಅಮ್ಲಾನ್ ಈ ದಾಖಲೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಇದಕ್ಕೂ ಮೊದಲು 2018 ಆಗಸ್ಟ್ 15ರ ಜಬ್ಲೋನ್ಸ್ ಮತ್ತು ನಿಸೌ ಕೂಟದಲ್ಲಿ ಮೊಹಮ್ಮದ್ ಅನಾಸ್ 20.63 ಸೆಕೆಂಡ್ಗಳಲ್ಲಿ ಓಡುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.
ಫುಟ್ಬಾಲ್ ಆಟಗಾರನಾಗಬೇಕೆಂಬ ಕನಸು ಕಾಣುತ್ತಿದ್ದ ಬೋರ್ಗಹೈನ್ಗೆ ಗಾಯ ಅವಕಾಶ ಕೊಡಲಿಲ್ಲ, ಆದರೆ ಓಟದಲ್ಲಿ ಕಠಿಣ ಪರಿಶ್ರಮ ಪಟ್ಟು ಇಂದು ದೇಶದ ಪರ ದಾಖಲೆಗೆ ಪಾತ್ರರಾಗಿದ್ದಾರೆ. 24 ವರ್ಷದ ಅಮ್ಲಾನ್ ಅವರ ಈ ಪ್ರದರ್ಶನ ಯುಎಸ್ಎನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ತಂದುಕೊಟ್ಟಿದೆ. ಜೊತೆಗೆ ಚೀನಾದಲ್ಲಿ ನಡೆಯಲಿರುವ 2022ರ ಏಷ್ಯನ್ ಗೇಮ್ಸ್ಗೂ ಅವರು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮುಂಬೈ ತಂಡ ಸೇರಿದ ಹೊಸದರಲ್ಲಿ ಪಾಂಡ್ಯ ಬ್ರದರ್ಸ್ ನೀಡಿದ ನೆರವು ಮರೆಯಲಾಗಲ್ಲ: ಇಶಾನ್ ಕಿಶನ್