ನವದೆಹಲಿ: ವನ್ಶಾಜ್ ಮತ್ತು ಪ್ರೀತಿ ಸೇರಿದಂತೆ ಭಾರತದ 6 ಬಾಕ್ಸರ್‌ಗಳು ಗುರುವಾರ ದುಬೈನಲ್ಲಿ ನಡೆಯುತ್ತಿರುವ ಎಸಿಬಿಸಿ ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಐಎಎನ್ಎಸ್ ವರದಿಯಂತೆ ಪುರುಷರ ವಿಭಾಗದಲ್ಲಿ ವನ್ಶಾಜ್ ಜೊತೆಗೆ 80 ಕೆಜಿ ವಿಭಾಗದಲ್ಲಿ ವಿಶಾಲ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ, ದಕ್ಷ್ ಸಿಂಗ್ (67ಕೆಜಿ)_ , ಅಭಿಮನ್ಯು ಲೌರಾ(92 ಕೆಜಿ) ಮತ್ತು ಅಮಾನ್ ಸಿಂಗ್ ಬಿಶ್ತ್(92+ಕೆಜಿ) ಸೆಮಿಫೈನಲ್ನಲ್ಲಿ ಸೋಲು ಕಂಡು ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು. ಮಹಿಳೆಯರ ವಿಭಾಗದಲ್ಲಿ ಪ್ರೀತಿ(57ಕೆಜಿ) ಪ್ರೀತಿ ದಹಿಯಾ(60 ಕೆಜಿ) ,ಸಿಮ್ರಾನ್ ವರ್ಮಾ(52 ಕೆಜಿ) ಮತ್ತು ಸ್ನೇಹಾ ಕುಮಾರಿ(66ಕೆಜಿ) ಫೈನಲ್ ತಲುಪಿದ್ದಾರೆ.
ಟೂರ್ನಿಯ 7ನೇ ದಿನ ಐದು ಕಿರಿಯ ಭಾರತೀಯ ಬಾಕ್ಸರ್‌ಗಳು ತಮ್ಮ ಸೆಮಿಫೈನಲ್ ಆಡಲಿದ್ದಾರೆ. ಬಾಲಕರಲ್ಲಿ ಆಶಿಶ್ (54 ಕೆಜಿ) ಮತ್ತು ಅಂಶುಲ್ (57 ಕೆಜಿ) ಮತ್ತು ಬಾಲಕಿಯರ ವಿಭಾಗದಲ್ಲಿ ವಿಶು ರಥೀ (48 ಕೆಜಿ), ತನು (52 ಕೆಜಿ) ಮತ್ತು ನಿಕಿತಾ ಚಾಂದ್ (60 ಕೆಜಿ) ಹೋರಾಟ ನಡೆಸಲಿದ್ದಾರೆ.
ಏಳನೇ ದಿನದಂದು, ಐದು ಜೂನಿಯರ್ ಬಾಕ್ಸರ್‌ಗಳು ತಮ್ಮ ಸೆಮಿಫೈನಲ್ ಆಡಲಿದ್ದಾರೆ. ಬಾಲಕರ ವಿಭಾಗದಲ್ಲಿ ಆಶಿಶ್ (54 ಕೆಜಿ) ಮತ್ತು ಅನ್ಶುಲ್ (57 ಕೆಜಿ) ಮತ್ತು ಬಾಲಕಿಯರ ವಿಭಾಗದಲ್ಲಿ ವಿಶು ರಥೀ (48 ಕೆಜಿ), ತನು (52 ಕೆಜಿ) ಮತ್ತು ನಿಕಿತಾ ಚಾಂದ್ (60 ಕೆಜಿ) ಹೋರಾಟ ನಡೆಸಲಿದ್ದಾರೆ.
ಕೋವಿಡ್ 19 ಕಾರಣ ಕೆಲವು ರಾಷ್ಟ್ರಗಳು ಈ ಟೂರ್ನಮೆಂಟ್ನಲ್ಲಿ ಭಾಗವಹಿಸಿಲ್ಲ, ಇನ್ನೂ ಕೆಲವು ರಾಷ್ಟ್ರಗಳು ಕಡಿಮೆ ಸ್ಪರ್ಧಿಗಳನ್ನು ಕಳುಹಿಸಿವೆ. ಭಾರತಕ್ಕೆ 25ಕ್ಕೆ ಹೆಚ್ಚು ಪದಕಗಳನ್ನು ಖಚಿತಪಡಿಸಿಕೊಂಡಿದೆ. ಈ ಸ್ಪರ್ಧೆಯಲ್ಲಿ ವಯಸ್ಸಿನ ಆಧಾರಿತ ಗುಂಪಿನಲ್ಲಿ ಚಿನ್ನ ಗೆಲ್ಲುವ ಸ್ಪರ್ಧಿ 6000 ಅಮೆರಿಕನ್ ಡಾಲರ್, ಬೆಳ್ಳಿ ಪದಕ ಗೆದ್ದವರಿಗೆ 3000 ಮತ್ತು ಕಂಚು ಗೆದ್ದವರಿಗೆ 1,500 ಡಾಲರ್ ಬಹುಮಾನ್ ನೀಡಲಾಗುತ್ತದೆ.
ಜೂನಿಯರ್ ಚಾಂಪಿಯನ್ ವಿಭಾಗದಲ್ಲಿ ಚಿನ್ನಕ್ಕೆ 4000 , ಬೆಳ್ಳಿಗೆ 2000 ಮತ್ತು ಕಂಚಿಗೆ 1000 ಡಾಲರ್ ಬಹುಮಾನ ನೀಡಲಾಗುತ್ತದೆ
ಇದನ್ನು ಓದಿ: ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಚಿನ್ನ ತಪ್ಪಿಸಲು ಯತ್ನಿಸಿದ್ರಾ ಪಾಕ್ ಪ್ಲೇಯರ್? ಚೋಪ್ರಾ ಹೇಳಿದ್ದೇನು?