ETV Bharat / sports

ಏಷ್ಯನ್ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌: ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಗೆದ್ದ ಅರ್ಜುನ್​ - ETV Bharath Kannada news

ಏಷ್ಯನ್ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಭಾರತದ ಯುವ ಪ್ರತಿಭೆಗಳು ಉತ್ತಮ ಪ್ರದರ್ಶನ ನೀಡಿದ್ದು, ಆರು ಚಿನ್ನ, 11 ಬೆಳ್ಳಿ ಮತ್ತು ಏಳು ಕಂಚು ಸೇರಿದಂತೆ ಒಟ್ಟು 24 ಪದಕ ದೇಶದ ಪಾಲಾಗಿದೆ.

Javelin thrower Arjun wins silver medal
ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಗೆದ್ದ ಅರ್ಜುನ್​
author img

By

Published : May 16, 2023, 8:32 PM IST

ನವದೆಹಲಿ: ಉಜ್ಬೇಕಿಸ್ತಾನ್​ನ ತಾಷ್ಕೆಂಟ್ ನಡೆದ 5ನೇ ಏಷ್ಯನ್ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬಾಲಕರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಅರ್ಜುನ್ ಬೆಳ್ಳಿ ಪದಕ ಗೆದಿದ್ದಾರೆ. ಕೇವಲ 16 ವರ್ಷ ವಯಸ್ಸಿನ ಮತ್ತು ಪ್ರಸ್ತುತ 12 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಜುನ್, ಜಾವೆಲಿನ್ ಅನ್ನು 66.99 ಮೀ. ದೂರಕ್ಕೆ ಎಸೆದು ಈ ಪದಕಕ್ಕೆ ಕೊರಳೊಡ್ಡಿದರು.

2022ರಲ್ಲಿ ಕುವೈತ್‌ನಲ್ಲಿ ನಡೆದ ಕಳೆದ ಏಷ್ಯನ್ ಯೂತ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಅರ್ಜುನ್​ ಬೆಳ್ಳಿ ಪದಕ ಗೆದ್ದಿದ್ದರು. ಏಷ್ಯನ್ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಪದಕಗಳನ್ನು ಗೆದ್ದ ಭಾರತದ ಮೊದಲ ಬಾಲಕ ಎಂಬ ಹೆಗ್ಗಳಿಕೆಗೆ ಅರ್ಜುನ್ ಪಾತ್ರರಾಗಿದ್ದಾರೆ. ಅವರು 18 ವರ್ಷದೊಳಗಿನ ಬಾಲಕರ ಜಾವೆಲಿನ್ ಥ್ರೋ ವಿಭಾಗದಲ್ಲಿ ಏಷ್ಯಾದಲ್ಲಿ ನಂಬರ್ ಒನ್ ಮತ್ತು ವಿಶ್ವದಲ್ಲಿ ನಾಲ್ಕನೇ ಶ್ರೇಯಾಂಕವನ್ನು ಅರ್ಜುನ್​ ಹೊಂದಿದ್ದಾರೆ.

ಅರ್ಜುನ್‌ನ ಅಸಾಧಾರಣ ಸಾಹಸಗಳ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮಾಡರ್ನ್ ಪಬ್ಲಿಕ್ ಸ್ಕೂಲ್ ಶಾಲಿಮಾರ್ ಬಾಗ್‌ನ ಪ್ರಾಂಶುಪಾಲರಾದ ಅಲ್ಕಾ ಕಪೂರ್,"ಅರ್ಜುನ್ ಅವರ ಗಮನಾರ್ಹ ಸಾಧನೆಗಳಿಂದ ನಾನು ಸಂಪೂರ್ಣವಾಗಿ ರೋಮಾಂಚನಗೊಂಡಿದ್ದೇನೆ. ಅಸಾಧಾರಣ ಕ್ರೀಡಾಪಟುವಾಗಿ ಅವರ ಬೆಳವಣಿಗೆಗೆ ಸಾಕ್ಷಿಯಾಗಿರುವುದು ನಿಜವಾದ ಸಂತೋಷವಾಗಿದೆ. ಈ ಕ್ರೀಡೆಯಲ್ಲಿ ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮ ನಿಜಕ್ಕೂ ಶ್ಲಾಘನೀಯ, ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ. ಮಾಡರ್ನ್ ಪಬ್ಲಿಕ್ ಸ್ಕೂಲ್‌ನಲ್ಲಿ, ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಮತ್ತು ಅವರು ಆಯಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಅವಿರತ ಬೆಂಬಲವನ್ನು ನೀಡುತ್ತೇವೆ. ಅರ್ಜುನ್ ಅವರ ಯಶಸ್ಸು ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ" ಎಂದಿದ್ದಾರೆ.

ಇದನ್ನೂ ಓದಿ: ಶುಭ್​ಮನ್​ ಗಿಲ್ ಶತಕದಾಟ, ಹೈದರಾಬಾದ್​ ವಿರುದ್ಧ ಗೆದ್ದ ಟೈಟಾನ್ಸ್​ : ಪ್ಲೇ ಆಫ್​ಗೆ ಪ್ರವೇಶ

ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ನಡೆದ ಐದನೇ ಏಷ್ಯನ್ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲೂ ಭಾರತೀಯ ತಂಡ ಉತ್ತಮ ಪ್ರದರ್ಶನ ನೀಡಿದೆ. ತಂಡವು ಚೀನಾದ ನಂತರ ಒಟ್ಟಾರೆ ಎರಡನೇ ಸ್ಥಾನ ಗಳಿಸಿತು ಮತ್ತು 18 ವರ್ಷದೊಳಗಿನ ಚಾಂಪಿಯನ್‌ಶಿಪ್‌ನಲ್ಲಿ ಆರು ಚಿನ್ನ, 11 ಬೆಳ್ಳಿ ಮತ್ತು ಏಳು ಕಂಚು ಸೇರಿದಂತೆ ಒಟ್ಟು 24 ಪದಕಗಳನ್ನು ಗೆದ್ದುಕೊಂಡಿದೆ.

"ಕ್ರೀಡೆಯಲ್ಲಿ ನನ್ನ ವೃತ್ತಿಜೀವನವನ್ನು ರೂಪಿಸುವಲ್ಲಿ ಶಾಲೆಯು ಪ್ರಮುಖ ಪಾತ್ರ ವಹಿಸಿದೆ. ಶಾಲೆಯು ನನಗೆ ತರಬೇತಿಗಾಗಿ ಉನ್ನತ ದರ್ಜೆಯ ಉಪಕರಣಗಳನ್ನು ಒದಗಿಸಿದೆ ಮತ್ತು ಶಾಲಾ ಅವಧಿಯಲ್ಲಿ ತರಬೇತಿ ನೀಡಲು ಅವಕಾಶ ಮಾಡಿಕೊಟ್ಟಿದೆ. ಶಾಲೆಯು ನನಗೆ ವಿದ್ಯಾರ್ಥಿವೇತನವನ್ನು ಸಹ ನೀಡಿದೆ. ಶಾಲಾ ಶುಲ್ಕದಿಂದ ವಿನಾಯಿತಿ ಮತ್ತು ಅವರ ಬೆಂಬಲದೊಂದಿಗೆ, ನಾನು ಯೂತ್ ಕಾಮನ್‌ವೆಲ್ತ್ 2023 ರಲ್ಲಿ ಭಾಗವಹಿಸಲು ಎದುರು ನೋಡುತ್ತಿದ್ದೇನೆ" ಎಂದು ಅರ್ಜುನ್ ಹೇಳಿದರು.

ಇದನ್ನೂ ಓದಿ: LSG vs MI: ಲಕ್ನೋ ವಿರುದ್ಧ ಟಾಸ್​ ಗೆದ್ದ ಮುಂಬೈ ಬೌಲಿಂಗ್​ ಆಯ್ಕೆ, ಪ್ಲೇ ಆಫ್​ ಪ್ರವೇಶಿಸುತ್ತಾ ರೋಹಿತ್​ ಬಳಗ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.