ನವದೆಹಲಿ: ಭಾರತದ ಯುವ ಬಾಕ್ಸರ್ಗಳಾದ ವಿಶ್ವನಾಥನ್ ಸುರೇಶ್ ಮತ್ತು ರಮಣ್ ಜೋರ್ಡನ್ನಲ್ಲಿ ನಡೆಯುತ್ತಿರುವ 2022ರ ಎಎಸ್ಬಿಸಿ ಏಷ್ಯನ್ ಯೂತ್ ಅಂಡ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು.
ವಿಶ್ವನಾಥ್ ತಜಕಿಸ್ತಾನದ ಮೆರೋಜ್ ಜಾಯ್ಡೋವ್ ವಿರುದ್ಧ 4-1ರ ಅಂತರದಲ್ಲಿ ಗೆದ್ದು 48 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ನಾಲ್ಕರ ಘಟ್ಟಕ್ಕೆ ತಲುಪುವ ಮೂಲಕ ಸತತ ಎರಡನೇ ಬಾರಿ ಈ ಟೂರ್ನಿಯಲ್ಲಿ ಪದಕ ಖಾತ್ರಿಪಡಿಸಿಕೊಂಡರು.
51 ಕೆಜಿ ವಿಭಾಗದಲ್ಲಿ ರಮಣ್ ಜೋರ್ಡನ್ ಯಾಜಾನ್ ಆಲ್ಬಿಟಾರ್ ವಿರುದ್ಧ 5-0ಯ ಅಂತರದಲ್ಲಿ ಪ್ರಾಬಲ್ಯಯುತ ಗೆಲುವು ಪಡೆದರು.
ಕಳೆದ ಆವೃತ್ತಿಯಲ್ಲಿ ಬೆಳ್ಳಿ ಪದಕ ಪಡೆದಿದ್ದ ವಿಶ್ವನಾಥ್ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು. ಆದರೆ ಎರಡನೇ ಸುತ್ತಿನಲ್ಲಿ ತಜಕಿಸ್ತಾನದ ಆಕ್ರಮಣಕಾರಿ ಬಾಕ್ಸರ್ ವಿರುದ್ಧ ತಂತ್ರಗಾರಿಕೆ ಚುರುಕುತನ ತೋರಿದರು. ತೀವ್ರವಾದ ಹೋರಾಟದಲ್ಲಿ ಭಾರತೀಯ ಬಾಕ್ಸರ್ ತನ್ನ ಉತ್ತಮ ರಕ್ಷಣಾತ್ಮಕ ಕೌಶಲ್ಯ ಮತ್ತು ಪ್ರತಿದಾಳಿ ಪ್ರದರ್ಶನದೊಂದಿಗೆ ಮೂರು ಸುತ್ತಿನಲ್ಲಿಯೂ ಮುನ್ನಡೆ ಸಾಧಿಸುವಲ್ಲಿ ಸಫಲರಾದರು.
ವಿಶ್ವನಾಥ್ ಮತ್ತು ರಮಣ್ ಮುಂದಿನ ಸುತ್ತಿನಲ್ಲಿ ಉಜ್ಬೇಕ್ ಬಾಕ್ಸರ್ಗಳಾದ ಮಿರಾಲಿಜಾನ್ ಮಾವ್ಲೋನೋವ್ ಮತ್ತು ಖುಜನಾಜರ್ ನಾರ್ಟೊಜೀವ್ ವಿರುದ್ಧ ಶುಕ್ರವಾರ ಕಾದಾಡಲಿದ್ದಾರೆ.
ಇದನ್ನೂ ಓದಿ: ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್: 3 ಚಿನ್ನದ ಪದಕ ಗೆದ್ದ ಭಗತ್, ಕದಂಗೆ ಬಂಗಾರ, ಬೆಳ್ಳಿ