ETV Bharat / sports

ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಜೆರೆಮಿ ಲಾಲ್ರಿನ್ನುಂಗಾಗೆ ಸ್ನ್ಯಾಚ್‌ ವಿಭಾಗದಲ್ಲಿ ಬೆಳ್ಳಿ - ETV Bharath Kannada news

ಕ್ಲೀನ್ ಮತ್ತು ಜರ್ಕ್‌ನಲ್ಲಿ ಒಟ್ಟು ಮೂರು ಪ್ರಯತ್ನಗಳಲ್ಲಿ ಜೆರೆಮಿ ಲಾಲ್ರಿನ್ನುಂಗಾ ವೇಟ್‌ಲಿಫ್ಟ್​ನಲ್ಲಿ ವಿಫಲವಾದರೂ, 67 ಕೆಜಿ ವಿಭಾಗದಲ್ಲಿ ಪುರುಷರ ಸ್ನಾಚ್‌ನಲ್ಲಿ ಬೆಳ್ಳಿ ಪದಕ ಗೆದ್ದರು.

Asian Weightlifting Championship 2023 Jeremy Lalrinnunga winning silver in snatch

author img

By

Published : May 7, 2023, 8:15 PM IST

ಜಿಂಜು (ದಕ್ಷಿಣ ಕೊರಿಯಾ): ಭಾರತದ ವೇಟ್‌ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ ಅವರು ಭಾನುವಾರ ಇಲ್ಲಿ ನಡೆದ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ 67 ಕೆಜಿ ವಿಭಾಗದಲ್ಲಿ ಪುರುಷರ ಸ್ನಾಚ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಆದರೆ ಕ್ಲೀನ್ ಮತ್ತು ಜರ್ಕ್‌ನಲ್ಲಿ ಒಟ್ಟು ಮೂರು ಪ್ರಯತ್ನಗಳಲ್ಲಿ ವಿಫಲರಾದರು. ಕಾಮನ್ವೆಲ್ತ್ ಗೇಮ್ಸ್ 2022 ರ ಚಾಂಪಿಯನ್ ಜೆರೆಮಿ ತನ್ನ ಮೊದಲ 135 ಕೆಜಿ ಸ್ನ್ಯಾಚ್ ಪ್ರಯತ್ನದಲ್ಲಿ ವಿಫಲರಾದರು. ಆದರೆ ತನ್ನ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾದರು. ನಂತರ ಅವರು ತಮ್ಮ ಮೂರನೇ ಪ್ರಯತ್ನದಲ್ಲಿ 141 ಕೆಜಿಗೆ ಸಮನಾಗಿ ವೈಯಕ್ತಿಕ ಶ್ರೇಷ್ಠ ವೇಟ್‌ಲಿಫ್ಟ್​ ಮಾಡಿದರು.

ಭಾರತದ ವೇಟ್‌ಲಿಫ್ಟರ್‌ಗಿಂತ ಚೀನಾದ ಹಿ ಯುಯೆಜಿ 147 ಕೆಜಿ ವೇಟ್‌ಲಿಫ್ಟ್ ಮಾಡಿ ಚಿನ್ನ ಗೆದ್ದರು. ಕ್ಲೀನ್ ಮತ್ತು ಜರ್ಕ್‌ನಲ್ಲಿ 2018 ರ ಯೂತ್ ಒಲಿಂಪಿಕ್ಸ್ ಚಾಂಪಿಯನ್ ಜೆರೆಮಿ 165 ಕೆಜಿಯಲ್ಲಿ ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲರಾದರು. ಅಂತಿಮ ಪ್ರಯತ್ನದಲ್ಲಿ 168 ಕೆಜಿ ಲಿಫ್ಟ್​​ಗೆ ಪ್ರಯತ್ನಿಸಿದರು. ಆದರೆ ಎಡವಿದರು ಹೀಗಾಗಿ ಈ ವಿಭಾಗದಲ್ಲಿ ಅವರಿಗೆ ಪ್ರಶಸ್ತಿ ಸಿಗಲಿಲ್ಲ. ಅವರ ಮೂರನೇ ಪ್ರಯತ್ನ ಈ ಮೊದಲ ಗೆಲುವಿನ ತೂಕಕ್ಕಿಂತ 1 ಕೆಜಿ ಹೆಚ್ಚಾಗಿತ್ತು. ಆದರೆ ಪ್ರಯತ್ನದಲ್ಲಿ ಸೋಲು ಕಂಡರು.

ಕ್ಲೀನ್ ಮತ್ತು ಜರ್ಕ್‌ನಲ್ಲಿ ಜೆರೆಮಿ ಲಾಲ್ರಿನ್ನುಂಗಾ ಅವರು ಮೂರು ಪ್ರಯತ್ನದಲ್ಲಿ ವಿಫಲವಾದ ಕಾರಣ ಒಟ್ಟು ಅಂಕವಿಲ್ಲದ ಕಾರಣ ಏಷ್ಯನ್ ಕೂಟದಿಂದ ಅವರು ಹೊರಬಂದಿದ್ದಾರೆ. ಇದರಿಂದಾಗಿ ಒಟ್ಟು ವಿಭಾಗದಲ್ಲಿ ಶ್ರೇಯಾಂಕ ಪಡೆಯಲು ವಿಫಲರಾದರು ಎಂದು ವರದಿಯಾಗಿದೆ. ಕಳೆದ ಆಗಸ್ಟ್‌ನಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಚಿನ್ನದ ಪದಕ ವಿಜೇತ ಪ್ರದರ್ಶನದ ಸಂದರ್ಭದಲ್ಲಿ ಬೆನ್ನು ಮತ್ತು ತೊಡೆಯ ಗಾಯಗಳಿಂದ ಚೇತರಿಸಿಕೊಂಡ ನಂತರ ಲಾಲ್ರಿನ್ನುಂಗ ಅವರ ಮೊದಲ ಸ್ಪರ್ಧೆ ಇದಾಗಿದೆ.

  • Asian Weightlifting Championship, Jinju South Korea 67kg Silver Medal🥈in Snatch.
    Thank you everyone for your love and support.
    I will continue to focus, train hard and strive forward. #willcomebackstronger pic.twitter.com/oQr1HWOdAQ

    — Jeremy Lalrinnunga (@raltejeremy) May 7, 2023 " class="align-text-top noRightClick twitterSection" data=" ">

2022ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 61 ಕೆಜಿ ವಿಭಾಗದಲ್ಲಿ ಕಂಚಿನ ವಿಜೇತರಾದ ಹೆ ಯುಯೆಜಿ ಒಟ್ಟು 320 ಕೆಜಿ ಭಾರದೊಂದಿಗೆ ಚಿನ್ನದ ಪದಕವನ್ನು ಗೆದ್ದರು. ಸ್ಥಳೀಯ ಫೇವರಿಟ್ ಲೀ ಸಾಂಗ್ಯೆನ್ 314 ಕೆಜಿಯೊಂದಿಗೆ ಬೆಳ್ಳಿ ಗೆದ್ದರೆ, ಉಜ್ಬೇಕಿಸ್ತಾನ್‌ನ ಎರಡು ಬಾರಿ ಏಷ್ಯನ್ ಚಾಂಪಿಯನ್ ಅಡ್ಕಾಮ್‌ಜೊನ್ ಎರ್ಗಾಶೆವ್ 312 ಕೆಜಿಯೊಂದಿಗೆ ಕಂಚಿಗೆ ತೃಪ್ತಿಪಟ್ಟರು.

ಇದನ್ನೂ ಓದಿ: ಆಚಾಂಪಿಯನ್ಸ್‌ ಟ್ರೋಫಿಗೆ ಬರುವುದಾಗಿ ಬರೆದುಕೊಟ್ಟರೆ ವಿಶ್ವಕಪ್​ಗೆ ಪಾಕ್​ ಭಾರತಕ್ಕೆ: ಪಿಸಿಬಿ ಚೌಕಾಸಿ

ಶನಿವಾರ ನಡೆದ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ 2023ರ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಬಿಂದ್ಯಾರಾಣಿ ದೇವಿ ಅವರು ಬೆಳ್ಳಿ ಪದಕವನ್ನು ಗೆದ್ದಿದ್ದರು. ಅವರು ಸ್ನ್ಯಾಚ್‌ ವಿಭಾಗದಲ್ಲಿ 83 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ ವಿಭಾಗದಲ್ಲಿ 111 ಕೆಜಿ ಒಟ್ಟು 194 ಕೆಜಿ ವೇಟ್‌ಲಿಫ್ಟಿಂಗ್ ಮಾಡಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು.

ಇದನ್ನೂ ಓದಿ: ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತದ ಬಿಂದ್ಯಾರಾಣಿ ದೇವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.