ETV Bharat / sports

ಏಷ್ಯನ್ ಗೇಮ್ಸ್​ನಲ್ಲಿ ಪಿ.ಟಿ.ಉಷಾ ದಾಖಲೆ ಸರಿಗಟ್ಟಿದ ವಿದ್ಯಾ ರಾಮರಾಜ್ ಮುಂದಿನ ಗುರಿ ಒಲಿಂಪಿಕ್ಸ್‌ - ಏಷ್ಯನ್ ಗೇಮ್ಸ್​ನಲ್ಲಿ ಭಾರತೀಯ ಅವಳಿ ಸಹೋದರಿಯರು

ಏಷ್ಯನ್ ಗೇಮ್ಸ್​ನಲ್ಲಿ 39 ವರ್ಷಗಳ ಹಿಂದಿನ ಪಿ.ಟಿ.ಉಷಾ ಅವರ ದಾಖಲೆಯನ್ನು ಸರಿಗಟ್ಟಿರುವ ತಮಿಳನಾಡಿನ ಓಟಗಾರ್ತಿ ವಿದ್ಯಾ ರಾಮರಾಜ್ ಅವರು ತಮ್ಮ ಮುಂದಿನ ಒಲಿಂಪಿಕ್ಸ್​ ಕ್ರೀಡಾಕೂಟ ಎಂದು ತಿಳಿಸಿದ್ದಾರೆ.

asian-games-medalist-vidhya-ramraj-gives-exclusive-interview-with-etv-bharat
ಏಷ್ಯನ್ ಗೇಮ್ಸ್​ನಲ್ಲಿ 39 ವರ್ಷದ ಹಿಂದಿನ ಪಿ.ಟಿ.ಉಷಾ ದಾಖಲೆ ಸರಿಗಟ್ಟಿದ ವಿದ್ಯಾ ರಾಮರಾಜ್
author img

By ETV Bharat Karnataka Team

Published : Oct 11, 2023, 8:02 PM IST

ಚೆನ್ನೈ (ತಮಿಳುನಾಡು): ಇತ್ತೀಚಿಗೆ ಚೀನಾದಲ್ಲಿ ಮುಕ್ತಾಯವಾದ 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಅಭೂತಪೂರ್ವ ಪ್ರದರ್ಶನ ನೀಡಿದೆ. ದೇಶದ ಕ್ರೀಡಾಪಟುಗಳು ಇದೇ ಮೊದಲ ಬಾರಿಗೆ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚು ಸೇರಿದಂತೆ ಒಟ್ಟು 107 ಪದಕಗಳನ್ನು ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ದೇಶಕ್ಕಾಗಿ ಪದಕ ಗೆದ್ದ ಸಾಧಕರಲ್ಲಿ ತಮಿಳುನಾಡಿನ ಓಟಗಾರ್ತಿ ವಿದ್ಯಾ ರಾಮರಾಜ್ ಕೂಡ ಒಬ್ಬರು. ಎರಡು ಬೆಳ್ಳಿ ಹಾಗೂ ಒಂದು ಕಂಚು ಪದಕ ಸೇರಿ ಮೂರು ಪದಕಗಳಿಗೆ ಕೊರಳೊಡ್ಡಿರುವ ವಿದ್ಯಾ, 39 ವರ್ಷಗಳ ಹಿಂದಿನ ಪಿ.ಟಿ.ಉಷಾ ದಾಖಲೆಯನ್ನು ಸರಿಗಟ್ಟುವ ಮೂಲಕ ಮಿಂಚು ಹರಿಸಿದ್ದರು. ತಮ್ಮ ಅನುಭವಗಳನ್ನು ಅವರು 'ಈಟಿವಿ ಭಾರತ್​'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಏಷ್ಯನ್ ಗೇಮ್ಸ್​ನಲ್ಲಿ ವಿದ್ಯಾ ರಾಮರಾಜ್ ಹಾಗೂ ಅವರ ಸಹೋದರಿ ನಿತ್ಯಾ ರಾಮರಾಜ್ ಒಟ್ಟಿಗೆ ಪಾಲ್ಗೊಂಡಿದ್ದರು. ಈ ಮೂಲಕ ಕೂಟದಲ್ಲಿ ಭಾಗವಹಿಸಿದ ಮೊದಲ ಭಾರತೀಯ ಅವಳಿ ಸಹೋದರಿಯರು ಎಂಬ ಅಪರೂಪದ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ವಿದ್ಯಾ ಅವರಂತೆ ನಿತ್ಯಾ ಕೂಡ ಅಥ್ಲೆಟಿಕ್ಸ್​ನಲ್ಲಿ ಮಿಂಚಿದ್ದಾರೆ. ಈ ಬಾರಿ ಏಷ್ಯನ್ ಗೇಮ್ಸ್​ನಲ್ಲಿ ನಿತ್ಯಾ ಪದಕ ವಂಚಿತರಾದರೂ ವಿದ್ಯಾ ಮೂರು ಪದಕಗಳಿಗೆ ಮುತ್ತಿಕ್ಕಿ ಸಂಭ್ರಮಿಸಿದ್ದಾರೆ. 400 ಮೀಟರ್​​ ಹರ್ಡಲ್ಸ್​ ಓಟದಲ್ಲಿ ಕಂಚಿನ ಪದಕ, 4X400 ಮೀಟರ್​ ಮಹಿಳೆಯರ ರಿಲೇಯಲ್ಲಿ ಬೆಳ್ಳಿ ಹಾಗೂ 4X400 ಮೀಟರ್​​ ಮಿಶ್ರ ರಿಲೇ ಓಟದಲ್ಲಿ ಬೆಳ್ಳಿ ಗೆದ್ದಿದ್ದಾರೆ. ವಿದ್ಯಾ ನೀಡಿದ ಪ್ರದರ್ಶನದಲ್ಲಿ ನಿತ್ಯಾ ಕೂಡ ಸಂತಸವನ್ನು ಸಮನಾಗಿ ಸ್ವೀಕರಿಸಿದ್ದಾರೆ. ಕೊಯಮತ್ತೂರು ಜಿಲ್ಲೆಯ ಮಧುಕರೈ ಪಕ್ಕದ ಮೀನಾಕ್ಷಿಪುರಂ ಗ್ರಾಮದ ನಿವಾಸಿಗಳಾದ ​ಇಬ್ಬರು ಆಟಗಾರ್ತಿಯರು ಕೂಡ 'ಈಟಿವಿ ಭಾರತ್​'ನೊಂದಿಗೆ ಮಾತನಾಡಿದರು.

ಅಥ್ಲೆಟಿಕ್ಸ್ ವಿಭಾಗದಲ್ಲಿ ವಿದ್ಯಾ ರಾಮರಾಜ್ 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್​ ಹರ್ಡಲ್ಸ್‌ನಲ್ಲಿ 55.68 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ 39 ವರ್ಷಗಳ ಹಿಂದೆ ಪಿ.ಟಿ.ಉಷಾರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಮೂಲಕ 3ನೇ ಸ್ಥಾನ ಪಡೆದು ಕಂಚು ಗೆದ್ದಿದ್ದಾರೆ. ಇದರೊಂದಿಗೆ ಇಡೀ ಅಥ್ಲೆಟಿಕ್ಸ್ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇದೇ 400 ಮೀಟರ್ ಹರ್ಡಲ್ಸ್‌ ಸ್ಪರ್ಧೆಯಲ್ಲಿ ನಿತ್ಯಾ ರಾಮರಾಜ್ 4ನೇ ಸ್ಥಾನ ಪಡೆದು ಪದಕ ವಂಚಿತರಾಗಿದ್ದಾರೆ.

  • Vithya Ramraj opens the #Athletics medal haul of the day with a beautiful🥉

    Keeping up with a great pace on track, Vithya clocked a time of 55.68 to mark this feat in Women's 400m Hurdles Final💪🏻

    Well done champ👏👏 Heartiest congratulations on the🥉🥳#AsianGames2022pic.twitter.com/UlIhM9arJF

    — SAI Media (@Media_SAI) October 3, 2023 " class="align-text-top noRightClick twitterSection" data=" ">

ಒಲಿಂಪಿಕ್ಸ್‌ ಮುಂದಿನ ಗುರಿ: ಏಷ್ಯನ್ ಗೇಮ್ಸ್​ ಅಭಿಯಾನ ಹಾಗೂ ಪಿ.ಟಿ.ಉಷಾ ದಾಖಲೆ ಸರಿಗಟ್ಟಿದ ಬಗ್ಗೆ ಮಾತನಾಡಿದ ವಿದ್ಯಾ, ''ಕಳೆದ ಸೆಪ್ಟೆಂಬರ್‌ನಲ್ಲಿ ಚಂಡೀಗಢದಲ್ಲಿ ನಡೆದ 5ನೇ ಇಂಡಿಯನ್ ಗ್ರ್ಯಾಂಡ್​ ಪ್ರಿಕ್ಸ್​ ಅಥ್ಲೆಟಿಕ್ಸ್‌ನಲ್ಲಿ ನಾನು ಪಿ.ಟಿ.ಉಷಾ ಅವರ ದಾಖಲೆ ಮುಟ್ಟುವುದನ್ನು ಕೇವಲ ಒಂದು ಸೆಕೆಂಡ್‌ನಿಂದ ತಪ್ಪಿಸಿಕೊಂಡಿದ್ದೆ. ಏಷ್ಯನ್ ಗೇಮ್ಸ್​ನಲ್ಲಿ ಆ ದಾಖಲೆ ಸರಿಗಟ್ಟುವ ನಿರೀಕ್ಷೆ ಇರಲಿಲ್ಲ. ಏಷ್ಯನ್ ಗೇಮ್ಸ್‌ನಲ್ಲಿ ಪಿ.ಟಿ. ಉಷಾರ ದಾಖಲೆಯನ್ನು ಸರಿಗಟ್ಟಿರುವುದು ಸಂತೋಷ ತಂದಿದೆ. ಅವರೊಂದಿಗೆ ನನ್ನ ಹೆಸರು ಕೂಡ ದಾಖಲೆಯ ಪುಟದಲ್ಲಿ ಸೇರಿದ್ದು, ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ನನ್ನ ಮುಂದಿನ ಗುರಿ'' ಎಂದು ತಿಳಿಸಿದರು.

''ನಾನು ಪಿ.ಟಿ. ಉಷಾ ಅವರ ದಾಖಲೆಯನ್ನು ಸರಿಗಟ್ಟಿದ್ದರಿಂದಲೇ ನನ್ನ ಹೆಸರು ಇಷ್ಟೊಂದು ಪ್ರಸಿದ್ಧವಾಗಿದೆ. ನನ್ನ ಈ ಸಾಧನೆ ನಂತರ ಅನೇಕರು ಕರೆ ಮಾತನಾಡುತ್ತಿದ್ದಾರೆ. ಈ 39 ವರ್ಷಗಳ ಸುದೀರ್ಘ ಒಲಿಂಪಿಕ್ಸ್‌ ಪ್ರಯಣದಲ್ಲಿ ಅನೇಕರು ಆ ದಾಖಲೆ ಮುರಿಯಲು ಪ್ರಯತ್ನಿಸುತ್ತಿರಬಹುದು. ಆದರೆ, ಇದುವರೆಗೂ ಯಾರೂ ಅದನ್ನು ಮಾಡದಿರುವುದು ಅಚ್ಚರಿ ಮೂಡಿಸಿದೆ. ಒಲಿಂಪಿಕ್ಸ್​ನಲ್ಲಿ ನಾನು ಖಂಡಿತವಾಗಿಯೂ ಈ ದಾಖಲೆಯನ್ನು ಮುರಿಯಲು ಚಿತ್ತ ಹರಿಸುತ್ತೇನೆ. ಅಲ್ಲದೇ, ಕಂಚು ಗೆದ್ದಿದ್ದರಿಂದ ಭಾರತದ ರಾಷ್ಟ್ರಗೀತೆಯನ್ನು ನುಡಿಸಲಿಲ್ಲ. ಪದಕದೊಂದಿಗೆ ವೇದಿಕೆಯ ಮೇಲೆ ನಿಂತಿದ್ದಾಗ ರಾಷ್ಟ್ರಗೀತೆ ನುಡಿಸದೇ ಇರುವುದು ಹೃದಯ ಭಾರವಾಗಿದೆ. ಈ ಮಾನಸಿಕ ನೋವನ್ನು ಮುಂದಿನ ಬಾರಿ ಹೋಗಲಾಡಿಸುತ್ತೇನೆ ಎಂಬ ಭರವಸೆ ಇದೆ'' ಎಂದೂ ಏಷ್ಯನ್ ಗೇಮ್ಸ್​ ಪದಕ ವಿಜೇತ ವಿದ್ಯಾ ಹೇಳಿದರು.

ನಿತ್ಯಾ ರಾಮರಾಜ್​ ಮಾತನಾಡಿ, ''ಏಷ್ಯನ್ ಗೇಮ್ಸ್​ನಲ್ಲಿ ತಮಿಳುನಾಡನ್ನು ಪ್ರತಿನಿಧಿಸಿದ್ದು ಸಂತಸ ತಂದಿದೆ. ಇಂತಹ ದೊಡ್ಡ ಕ್ರೀಡಾಕೂಟದಲ್ಲಿ ನನ್ನ ಸಹೋದರಿಯೊಂದಿಗೆ ಭಾಗವಹಿಸಿದ್ದು ಸಂತೋಷವಾಗಿದೆ. ನನ್ನ ಉತ್ತಮ ಪ್ರಯತ್ನವು ಖಂಡಿತವಾಗಿಯೂ ಫಲ ನೀಡುತ್ತದೆ. ಪದಕ ಗೆಲ್ಲದಿದ್ದರೂ ನಾವಿಬ್ಬರೂ ತೃಪ್ತರಾಗಿದ್ದೇವೆ'' ಎಂದರು.

ಇದನ್ನೂ ಓದಿ: 'ಡ್ರಗ್ ಮುಕ್ತ ಭಾರತಕ್ಕೆ ಕೈ ಜೋಡಿಸಿ': ಏಷ್ಯನ್‌ ಗೇಮ್ಸ್‌ ಸಾಧಕರೊಂದಿಗೆ ಪ್ರಧಾನಿ ಮೋದಿ ಸಂವಾದ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.