ETV Bharat / sports

Asian Games 2023: 5000 ಮೀಟರ್​ ಓಟದಲ್ಲಿ ಪಾರುಲ್ ಚೌಧರಿ ಚಿನ್ನ.. 800 ಮೀ.ನಲ್ಲಿ ಮೊಹಮ್ಮದ್ ಅಫ್ಸಲ್​ಗೆ ಬೆಳ್ಳಿ - ETV Bharath Karnataka

19ನೇ ಏಷ್ಯನ್​ ಗೇಮ್ಸ್​ನಲ್ಲಿ 14ಚಿನ್ನ ಚಿನ್ನದ ಪದಕ ಭಾರತಕ್ಕೆ 5000 ಮೀಟರ್​ ಸ್ಪರ್ಧೆಯಲ್ಲಿ ಒಲಿದಿದೆ. ಒಟ್ಟಾರೆ ಈವರೆಗೆ ಭಾರತ 14 ಚಿನ್ನ, 24 ಬೆಳ್ಳಿ ಮತ್ತು 26 ಕಂಚಿನಿಂದ 64 ಪದಕ ಗೆದ್ದುಕೊಂಡಿದೆ.

Asian Games 2023
Asian Games 2023
author img

By ETV Bharat Karnataka Team

Published : Oct 3, 2023, 6:20 PM IST

Updated : Oct 3, 2023, 6:44 PM IST

ಹ್ಯಾಂಗ್‌ಝೌ (ಚೀನಾ): ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಪಾರುಲ್ ಚೌಧರಿ 5000 ಮೀಟರ್​ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. ಭಾರತದ ಅಥ್ಲೀಟ್ ಪಾರುಲ್ ಚೌಧರಿ ಮಹಿಳೆಯರ 5000 ಮೀ ಫೈನಲ್‌ನಲ್ಲಿ 15: 14.75 ಸೆಕೆಂಡ್‌ ಸಮಯದಲ್ಲಿ ಮುಗಿಸಿ ಏಷ್ಯನ್ ಗೇಮ್ಸ್ 2023ರಲ್ಲಿ ಚಿನ್ನದ ಪದಕ ಗೆದ್ದರು. ಈ ವರ್ಷದ ಆರಂಭದಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 5000 ಮೀಟರ್ ಬೆಳ್ಳಿ ಗೆದ್ದ 28 ವರ್ಷದ ಪಾರುಲ್, ಜಪಾನ್‌ನ ರಿರಿಕಾವನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದರು. ಸೋಮವಾರ ನಡೆದ ಮಹಿಳೆಯರ 3000ಮೀ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಗೆದ್ದ ನಂತರ ಪಾರುಲ್ ಚೌಧರಿ ಅವರಿಗೆ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಇದು ಎರಡನೇ ಪದಕವಾಗಿದೆ.

  • Powerhouse Parul grabs a #GloriousGold🥇in Women's 5000m 🥳

    Second time around, she proves that charm and determination pay off, securing her remarkable second medal at #AsianGames2022.

    Clocking 15:14.75, Parul's performance is absolutely 🔥!

    Heartiest congratulations champ!… pic.twitter.com/NRfxSBJXwH

    — SAI Media (@Media_SAI) October 3, 2023 " class="align-text-top noRightClick twitterSection" data=" ">

800 ಮೀ ಓಟದಲ್ಲಿ ಬೆಳ್ಳಿ: ಮೊಹಮ್ಮದ್ ಅಫ್ಸಲ್ ಪುಲಿಕ್ಕಲಕತ್ ಪುರುಷರ 800 ಮೀ ಓಟವನ್ನು 1:48.43 ಸಮಯದಲ್ಲಿ ಮುಗಿಸಿ ಬೆಳ್ಳಿ ಪದಕವನ್ನು ಗೆದ್ದರು. 27 ವರ್ಷದ ಭಾರತೀಯ ಅಫ್ಸಲ್​ ಈ ವರ್ಷದ ಆರಂಭದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 1:48.77 ಸಮಯದಿಂದ ಏಳನೇ ಸ್ಥಾನ ಗಳಿಸಿದ್ದರು.

ಪುರುಷರ ಟ್ರಿಪಲ್ ಜಂಪ್​ನಲ್ಲಿ ಕಂಚು: ಪ್ರವೀಣ್ ಚಿತ್ರವೆಲ್ ಪುರುಷರ ಟ್ರಿಪಲ್ ಜಂಪ್‌ನಲ್ಲಿ 16.68 ಮೀಟರ್​ ದೂರದ ಜಿಗಿತದೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ. ಅಬ್ದುಲ್ಲಾ ಅಬೂಬಕರ್ 16.62 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ನಾಲ್ಕನೇ ಸ್ಥಾನ ಪಡೆದರು.

ವಿತ್ಯಾ ರಾಮರಾಜ್ ಕಂಚು: 400 ಮೀಟರ್ ಹರ್ಲ್ಡ್ಸ್ ಹೀಟ್​ನಲ್ಲಿ ಭಾರತದ ವಿತ್ಯಾ ರಾಮರಾಜ್ ಕಂಚು ಗೆದಿದ್ದಾರೆ. ಮಹಿಳೆಯರ 400 ಮೀಟರ್ ಹರ್ಡಲ್ಸ್ ಫೈನಲ್‌ನಲ್ಲಿ ವಿತ್ಯಾ ರಾಮರಾಜ್ 55.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು. 25 ವರ್ಷದ ಭಾರತೀಯ ಹರ್ಡಲರ್ ಸೋಮವಾರ ನಡೆದ ಹೀಟ್ಸ್‌ನಲ್ಲಿ ಪಿಟಿ ಉಷಾ ಅವರ 400 ಮೀಟರ್ ಹರ್ಡಲ್ಸ್ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದರು. ಬಹ್ರೇನ್‌ನ ಹರ್ಡಲರ್ ಅಡೆಕೋಯಾ ಒಲುವಾಕೆಮಿ ಮುಜಿದತ್ 54.45 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಚೀನಾದ ಮೊ ಜಿಯಾಡಿ ಅವರು 55.01 ಸೆಕೆಂಡುಗಳಲ್ಲಿ ಬೆಳ್ಳಿ ಗೆದ್ದರು.

  • Vithya Ramraj opens the #Athletics medal haul of the day with a beautiful🥉

    Keeping up with a great pace on track, Vithya clocked a time of 55.68 to mark this feat in Women's 400m Hurdles Final💪🏻

    Well done champ👏👏 Heartiest congratulations on the🥉🥳#AsianGames2022pic.twitter.com/UlIhM9arJF

ಮತ್ತೊಂದೆಡೆ, ಪುರುಷರ 400 ಮೀಟರ್ ಹರ್ಡಲ್ಸ್ ಫೈನಲ್‌ನಲ್ಲಿ ಭಾರತದ ಯಶಸ್ ಪಾಲಾಕ್ಷ ಮತ್ತು ಟಿ ಸಂತೋಷ್ ಕುಮಾರ್ ಕ್ರಮವಾಗಿ ಐದು ಮತ್ತು ಆರನೇ ಸ್ಥಾನ ಪಡೆದರು. ಕತಾರ್‌ನ ಅಬ್ದೆರಹ್ಮಾನ್ ಅಲ್ಸಾಲೆಕ್ ಮತ್ತು ಬಾಸ್ಸೆಮ್ ಹೆಮೇಡಾ ಚಿನ್ನ-ಬೆಳ್ಳಿಯ ಪದಕವನ್ನು ಪಡೆದುಕೊಂಡರೆ, ಚೀನಾದ ಕ್ಸಿ ಝಿಯು ಕಂಚು ಪಡೆದರು.

ಬಾಕ್ಸಿಂಗ್​​: ಬಾಕ್ಸಿಂಗ್​ನಲ್ಲಿ ಪ್ರೀತಿ ಪವಾರ್ ಮಹಿಳೆಯರ 54 ಕೆಜಿ ಸೆಮಿಫೈನಲ್‌ನಲ್ಲಿ 2018ರ ಏಷ್ಯನ್ ಗೇಮ್ಸ್ ಚಾಂಪಿಯನ್ ಚೀನಾದ ಚಾಂಗ್ ಯುವಾನ್ ವಿರುದ್ಧ 5: 0 ಪಾಯಿಂಟ್‌ಗಳಿಂದ ಸೋತರು. 2023ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ ಹ್ಯಾಂಗ್‌ಝೌನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಪ್ರೀತಿ ಪವಾರ್ ಅವರ ಕಂಚಿನ ಪದಕವು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಬಾಕ್ಸಿಂಗ್‌ನಲ್ಲಿ ಭಾರತದ ಎರಡನೇ ಪದಕವಾಗಿದೆ. ಇದಕ್ಕೂ ಮೊದಲು ನಿಖತ್ ಜರೀನ್ ಮಹಿಳೆಯರ 50 ಕೆಜಿ ಕಂಚು ಪಡೆದಿದ್ದರು.

ಇದನ್ನೂ ಓದಿ: Asian Games Schedule 2023: ಬೆಳ್ಳಂಬೆಳಗ್ಗೆ ಭಾರತಕ್ಕೆ ಒಲಿದ ಕಂಚು.. ಇಂದಿನ ಆಟದ ವಿವರ ಹೀಗಿದೆ..

Last Updated : Oct 3, 2023, 6:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.