ETV Bharat / sports

ಏಷ್ಯನ್​ ಗೇಮ್ಸ್​​: ಹರ್ಮಿಲನ್ ಬೇನ್ಸ್, ಅವಿನಾಶ್ ಸೇಬಲ್ ಎರಡನೇ ಪದಕ.. ಮಹಿಳೆಯರ ರಿಲೇ ತಂಡಕ್ಕೆ ಬೆಳ್ಳಿ - ETV Bharath Kannada news

ಏಷ್ಯನ್​ ಗೇಮ್ಸ್​ನ 800 ಮೀಟರ್​ ಓಟದಲ್ಲಿ ಹರ್ಮಿಲನ್ ಬೇನ್ಸ್, ಪುರುಷರ 5000 ಮೀಟರ್​ ಓಟದಲ್ಲಿ ಅವಿನಾಶ್ ಸೇಬಲ್ ಮತ್ತು ಮಹಿಳೆಯರ 4x400 ಮೀ. ರಿಲೇ ತಂಡ ಬೆಳ್ಳಿ ಗೆದ್ದಿದೆ.

Asian Games
Asian Games
author img

By ETV Bharat Karnataka Team

Published : Oct 4, 2023, 6:57 PM IST

ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಅಥ್ಲೀಟ್​ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹರ್ಮಿಲನ್ ಬೇನ್ಸ್ 800 ಮೀಟರ್​ ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಹ್ಯಾಂಗ್‌ಝೌ ಏಷ್ಯಾಡ್​ನಲ್ಲಿ ಅವರಿಗೆ ದೊರೆತ ಎರಡನೇ ಬೆಳ್ಳಿ ಇದಾಗಿದೆ. ಆಂಭದಲ್ಲಿ ಹಿಂದೆ ಇದ್ದ ಬೇನ್ಸ್ 400 ಮೀಟರ್​ ಓಟದ ನಂತರ ವೇಗವನ್ನು ಹೆಚ್ಚಿಸಿದರು. ಕೊನೆಯಲ್ಲಿ ಚೀನಾದ ವಾಂಗ್ ಚುನ್ಯು ಅವರನ್ನು 2:03.75 ಸಮಯದಲ್ಲಿ ಹಿಂದಿಕ್ಕಿ ಎರಡನೇ ಸ್ಥಾನ ಪಡೆದರು. ಶ್ರೀಲಂಕಾದ ತರುಷಿ 2:03.20 ರಲ್ಲಿ ಚಿನ್ನ ಗೆದ್ದರು.

ಬೇನ್ಸ್ 1500 ಮೀಟರ್ ಓಟದಲ್ಲಿ 4:12.74 ಸೆಕೆಂಡ್‌ಗಳಲ್ಲಿ ಬೆಳ್ಳಿ ಗೆದ್ದಿದ್ದರು. ಹರ್ಮಿಲನ್ ಕುಟುಂಬಕ್ಕೆ ಅಥ್ಲೆಟಿಕ್ಸ್ ಹಿನ್ನೆಲೆ ಇದೆ. ಬೇನ್ಸ್​​ ತಂದೆ ಅಮನದೀಪ್ ಬೈನ್ಸ್ 1500 ಮೀ. ಓಟದಲ್ಲಿ ದಕ್ಷಿಣ ಏಷ್ಯನ್ ಗೇಮ್ಸ್ ಪದಕ ವಿಜೇತರಾಗಿದ್ದಾರೆ ಮತ್ತು ತಾಯಿ ಮಾಧುರಿ ಸಕ್ಸೇನಾ 2002 ರ ಏಷ್ಯನ್ ಗೇಮ್ಸ್​ನಲ್ಲಿ 800 ಮೀಟರ್​ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಅವಿನಾಶ್ ಸೇಬಲ್ ಎರಡನೇ ಪದಕ: ಅವಿನಾಶ್ ಸೇಬಲ್ ಪುರುಷರ 5000 ಮೀಟರ್​ ಓಟದಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. 2023ರ ಏಷ್ಯಾಡ್​ನಲ್ಲಿ ಅವಿನಾಶ್​ಗೆ ಇದು ಎರಡನೇ ಪದಕವಾಗಿದೆ. ಅವಿನಾಶ್ ಸೇಬಲ್ ಪುರುಷರ 5000 ಮೀಟರ್ ಬೆಳ್ಳಿ ಪದಕವನ್ನು 13: 21.09 ರಲ್ಲಿ ಗಳಿಸಿದರು. ಭಾರತೀಯ ಗುಲ್ವೀರ್ ಸಿಂಗ್ 13:29.93 ಸಮಯದೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಬಿರ್ಹಾನು ಬಾಲೆವ್ ಯೆಮಾತಾವ್ ಏಷ್ಯನ್ ಗೇಮ್ಸ್​ನ ದಾಖಲೆಯ ಸಮಯದೊಂದಿಗೆ 13:17.40 ನೊಂದಿಗೆ ಚಿನ್ನ ಗೆದ್ದರೆ, ದಾವಿತ್ ಫಿಕಾಡು 13:25.63 ರೊಂದಿಗೆ ಕಂಚಿಗೆ ತೃಪ್ತಿಪಟ್ಟರು.

3,000 ಮೀಟರ್ ಸ್ಟೀಪಲ್ ಚೇಸ್​ನಲ್ಲಿ ಅವಿನಾಶ್​ ಚಿನ್ನದ ಪದಕ ಗೆದ್ದಿದ್ದರು. ಈ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಅವಿನಾಶ್ ಪಾತ್ರರಾಗಿದ್ದರು. ಅವಿನಾಶ್ 8 ನಿಮಿಷ 19 ಸೆಕೆಂಡ್​ 54 ಕ್ಷಣಗಳಲ್ಲಿ 3000 ಮೀಟರ್​ ಓಟವನ್ನು ಪೂರ್ಣಗೊಳಿಸಿ ಮೊದಲ ಸ್ಥಾನ ಪಡೆದರು.

ಮಹಿಳೆಯರ 4x400 ಮೀ. ರಿಲೇ ತಂಡಕ್ಕೆ ಬೆಳ್ಳಿ: ವಿತ್ಯಾ ರಾಮರಾಜ್, ಐಶ್ವರ್ಯ ಮಿಶ್ರಾ, ಪ್ರಾಚಿ ಮತ್ತು ಶುಭಾ ವೆಂಕಟೇಶನ್ ಒಳಗೊಂಡ ಭಾರತೀಯ ಮಹಿಳಾ 4x400 ಮೀ. ರಿಲೇ ತಂಡ ಏಷ್ಯಾಡ್​ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದೆ. 2014ರ ಏಷ್ಯನ್​ ಗೇಮ್ಸ್​ನ ಸಮಯದ ದಾಖಲೆಯನ್ನು ಮುರಿದರು. ಈ ಬಾರಿ ನಾಲ್ವರ ಜೋಡಿ 3:28.68 ಸೆಕೆಂಡಿನ ಸಮಯದಿಂದ ಬೆಳ್ಳಿ ಜಯಿಸಿದೆ. 3:27.65 ಸಮಯದಲ್ಲಿ ಗೆರೆ ತಲುಪಿ ಬಹ್ರೇನ್ ಚಿನ್ನ ಗೆದ್ದರೆ, ಶ್ರೀಲಂಕಾ ಮಹಿಳೆ ಕಂಚಿಗೆ ತೃಪ್ತಿ ಪಟ್ಟರು.

ಕುಸ್ತಿಯಲ್ಲಿ ಸುನೀಲ್ ಕುಮಾರ್​ಗೆ ಕಂಚು: ಗ್ರೀಕೋ-ರೋಮನ್ 87 ಕೆಜಿ ವಿಭಾಗದ ಕುಸ್ತಿಯಲ್ಲಿ ಸುನೀಲ್ ಕುಮಾರ್​ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. 24 ವರ್ಷದ ಸುನೀಲ್ ಕುಮಾರ್​ ಕಿರ್ಗಿಸ್ತಾನ್‌ನ ಅಟಾಬೆಕ್ ಅಜಿಸ್ಬೆಕೊವ್ ವಿರುದ್ಧ 2-1 ಅಂತರದಲ್ಲಿ ಗೆದ್ದು ಕಂಚಿn ಪದಕ ತಮ್ಮದಾಗಿಸಿಕೊಂಡರು. ನೀರಜ್, ಜ್ಞಾನೇಂದರ್ ಮತ್ತು ವಿಕಾಸ್ ಅವರು 19 ನೇ ಏಷ್ಯನ್ ಗೇಮ್ಸ್‌ನ ಗ್ರೀಕೋ-ರೋಮನ್ ಕುಸ್ತಿಯಲ್ಲಿ ಇಂದು ತಮ್ಮ ಮೊದಲ ಸುತ್ತಿನಲ್ಲೇ ಹೊರ ಬಿದ್ದಿದ್ದಾರೆ.

ಇದನ್ನೂ ಓದಿ: ಏಷ್ಯನ್​ ಗೇಮ್ಸ್​​: ಬ್ಯಾಡ್ಮಿಂಟನ್​ನಲ್ಲಿ ನಾಲ್ಕು ಪದಕ ನಿರೀಕ್ಷೆ, ಮಹಿಳಾ ಕಬಡ್ಡಿ ತಂಡಕ್ಕೆ ಪದಕ ಖಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.