ಅಮಾನ್ (ಜೋರ್ಡಾನ್): ಜೋರ್ಡಾನ್‌ನ ಅಮಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಂದು ನಡೆದ ಫೈನಲ್‌ನಲ್ಲಿ ಪರ್ವೀನ್ ಹೂಡಾ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರೆ, ಮೀನಾಕ್ಷಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಮಹಿಳೆಯರ 63 ಕೆಜಿ ವಿಭಾಗದ ಫೈನಲ್‌ನಲ್ಲಿ ಪರ್ವೀನ್ ಹೂಡಾ ಜಪಾನ್‌ನ ಕಿಟೊ ಮಾಯ್ ಅವರನ್ನು 5-0 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. 2019ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲೂ ಚಿನ್ನ ಗೆದ್ದಿದ್ದ ಪರ್ವೀನ್, ಈ ವರ್ಷದ ಆರಂಭದಲ್ಲಿ ಇಸ್ತಾನ್‌ಬುಲ್‌ನಲ್ಲಿ ನಡೆದ 2022ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
-
IT'S A 🥈! 🔥👏
— Boxing Federation (@BFI_official) November 11, 2022 " class="align-text-top noRightClick twitterSection" data="
Well done champ! 🙌#AsianChampionships#PunchMeinHaiDum#Boxing pic.twitter.com/PwIYzHLtQS
">IT'S A 🥈! 🔥👏
— Boxing Federation (@BFI_official) November 11, 2022
Well done champ! 🙌#AsianChampionships#PunchMeinHaiDum#Boxing pic.twitter.com/PwIYzHLtQSIT'S A 🥈! 🔥👏
— Boxing Federation (@BFI_official) November 11, 2022
Well done champ! 🙌#AsianChampionships#PunchMeinHaiDum#Boxing pic.twitter.com/PwIYzHLtQS
ಇದನ್ನೂ ಓದಿ: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಮಿನಾಕ್ಷಿ, ಪ್ರೀತಿ ಸೇಮಿಸ್ಗೆ ಲಗ್ಗೆ, ಎರಡು ಬೆಳ್ಳಿ ಪದಕ ಖಚಿತ
ಈಗ ಏಷ್ಯನ್ ಎಲೈಟ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ ಐದು ಭಾರತೀಯ ಮಹಿಳಾ ಬಾಕ್ಸರ್‌ಗಳಲ್ಲಿ ಪರ್ವೀನ್ ಕೂಡ ಒಬ್ಬರಾಗಿದ್ದರು. ಇತ್ತ, ಮಹಿಳೆಯರ 52 ಕೆಜಿ ವಿಭಾಗದಲ್ಲಿ ಮೀನಾಕ್ಷಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಫೈನಲ್ ಪಂದ್ಯದಲ್ಲಿ ಜಪಾನ್‌ನ ಕಿನೋಶಿತಾ ರಿಂಕಾ ವಿರುದ್ಧ 1-4 ರಿಂದ ಸೋತು ಮೀನಾಕ್ಷಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.
-
SHE DID IT! 🤩🥇
— Boxing Federation (@BFI_official) November 11, 2022 " class="align-text-top noRightClick twitterSection" data="
🔝 stuff champ, congratulations 🥳🥳#AsianChampionships#PunchMeinHaiDum#Boxing pic.twitter.com/BP4UxsruvX
">SHE DID IT! 🤩🥇
— Boxing Federation (@BFI_official) November 11, 2022
🔝 stuff champ, congratulations 🥳🥳#AsianChampionships#PunchMeinHaiDum#Boxing pic.twitter.com/BP4UxsruvXSHE DID IT! 🤩🥇
— Boxing Federation (@BFI_official) November 11, 2022
🔝 stuff champ, congratulations 🥳🥳#AsianChampionships#PunchMeinHaiDum#Boxing pic.twitter.com/BP4UxsruvX
ಇನ್ನು, ಇತರ ಮಹಿಳಾ ಬ್ಯಾಕ್ಸರ್ಗಳಾದ ಲೊವ್ಲಿನಾ ಬೊರ್ಗೊಹೈನ್ (75 ಕೆಜಿ), ಸ್ವೀಟಿ (81 ಕೆಜಿ) ಮತ್ತು ಅಲಿಫಿಯಾ ಪಠಾಣ್ (81+ ಕೆಜಿ) ಕೂಡ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪುರುಷ ವಿಭಾಗದಲ್ಲಿ ಶಿವ ಥಾಪಾ ಸಹ ಫೈನಲ್ ಪ್ರವೇಶಿಸಿದ್ದಾರೆ. ಒಟ್ಟಾರೆ, ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ 12 ಪದಕಗಳು ಖಚಿತವಾಗಿವೆ. 27 ದೇಶಗಳ ಒಟ್ಟು 267 ಬಾಕ್ಸರ್‌ಗಳು ಈ ಕೂಟದಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಫೈನಲ್ ಪ್ರವೇಶಿಸಿದ ಶಿವ ಥಾಪಾ