ETV Bharat / sports

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಮಿನಾಕ್ಷಿ, ಪ್ರೀತಿ ಸೇಮಿಸ್​ಗೆ ಲಗ್ಗೆ, ಎರಡು ಬೆಳ್ಳಿ ಪದಕ ಖಚಿತ - etv bharat kannada

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್​​ನಲ್ಲಿ ಭಾರತೀಯ ಬಾಕ್ಸರ್​ಗಳಾದ ಮಿನಾಕ್ಷಿ ಮತ್ತು ಪ್ರೀತಿ ಎರಡು ಬೆಳ್ಳಿ ಪದಕಗಳನ್ನು ಖಚಿತ ಪಡಿಸಿದ್ದಾರೆ.

asian-boxing-cships-minakshi-preeti-advance-to-sfs-assure-india-of-two-medals
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಮಿನಾಕ್ಷಿ, ಪ್ರೀತಿ ಸೇಮಿಸ್​ಗೆ ಲಗ್ಗೆ, ಎರಡು ಬೆಳ್ಳಿ ಪದಕ ಖಚಿತ
author img

By

Published : Nov 5, 2022, 11:04 PM IST

ನವದೆಹಲಿ: ಜೋರ್ಡಾನ್‌ನ ಅಮ್ಮನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್​​ನಲ್ಲಿ ಭಾರತೀಯ ಬಾಕ್ಸರ್​ಗಳಾದ ಮಿನಾಕ್ಷಿ ಮತ್ತು ಪ್ರೀತಿ ಸೆಮಿಫೈನಲ್ ಪ್ರವೇಶಿಸಿದ್ದು, ಎರಡು ಬೆಳ್ಳಿ ಪದಕಗಳನ್ನು ಖಚಿತ ಪಡಿಸಿದ್ದಾರೆ.

ಮಹಿಳೆಯರ 52 ಕೆಜಿ ವಿಭಾಗದ ಬಾಕ್ಸಿಂಗ್​ನಲ್ಲಿ ಮಿನಾಕ್ಷಿ ಕ್ವಾರ್ಟರ್ ಫೈನಲ್‌ನಲ್ಲಿ ನಾಲ್ಕು ಬಾರಿ ಆಗ್ನೇಯ ಏಷ್ಯನ್ ಗೇಮ್ಸ್ ಪದಕ ವಿಜೇತೆ ಫಿಲಿಪ್ಪೀನ್ಸ್‌ನ ಐರಿಶ್ ಮ್ಯಾಗ್ನೊ ಅವರನ್ನು 4-1ರಿಂದ ಸೋಲಿಸಿದರು. ಇತ್ತ, ಪ್ರೀತಿ ಕೂಡ 57 ಕೆಜಿ ವಿಭಾಗದಲ್ಲಿ ಉಜ್ಬೇಕಿಸ್ತಾನ್‌ನ ತುರ್ಡಿಬೆಕೋವಾ ಸಿಟೋರಾ ವಿರುದ್ಧ 5-0ರಿಂದ ಗೆದ್ದು, ಸೆಮಿಫೈನಲ್​ಗೆ ಲಗ್ಗೆ ಇಟ್ಟರು.

ನವೆಂಬರ್ 9ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಮಿನಾಕ್ಷಿ ಅವರು ಮಂಗೋಲಿಯಾದ ಲುಟ್ಸಾಯಿಖಾನ್ ಅಲ್ಟಾನ್ಸೆಟ್ಸೆಗ್ ಅವರನ್ನು ಹಾಗೂ ಪ್ರೀತಿ ಜಪಾನ್‌ನ ಐರಿ ಸೇನಾ ಅವರನ್ನು ಎದುರಿಸಲಿದ್ದಾರೆ ಎಂದು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ) ತಿಳಿಸಿದೆ.

ಇದನ್ನೂ ಓದಿ: ಟಿ 20 ವಿಶ್ವಕಪ್​: ನ್ಯೂಜಿಲ್ಯಾಂಡ್​, ಇಂಗ್ಲೆಂಡ್​ ವಿರುದ್ಧ ಸೆಣಸೋರ್ಯಾರು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.