ಅಂಟಲ್ಯ(ಟರ್ಕಿ): ತರುಣ್ದೀಪ್ ರಾಯ್ ಮತ್ತು ರಿಧಿ ಜೋಡಿ ಟರ್ಕಿಯ ಅಂಟಲ್ಯದಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ನ ರಿಕರ್ವ್ ಮಿಕ್ಸಡ್ ಫೈನಲ್ನಲ್ಲಿ ಗ್ರೇಟ್ ಬ್ರಿಟನ್ ಜೋಡಿಯನ್ನು ಮಣಿಸಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದೆ.
ತರುಣ್ದೀಪ್ ರೈ ಮತ್ತು ರಿಧಿ ಫೈನಲ್ ಘರ್ಷಣೆಯಲ್ಲಿ ಎರಡು ಬಾರಿ ಹಿನ್ನಡೆ ಅನುಭವಿಸಿದರೂ, ಬ್ರಿಟನ್ ಬ್ರಿಯೋನಿ ಪಿಟ್ಮ್ಯಾನ್ ಮತ್ತು ಅಲೆಕ್ಸ್ ವೈಸ್ ಅವರನ್ನು ಶೂಟ್- ಆಫ್ ಮೂಲಕ ಮಣಿಸಿದರು.
17 ವರ್ಷದ ರಿಧಿ ಮತ್ತು 38 ವರ್ಷದ ಒಲಿಂಪಿಯನ್ ತರುಣ್ದೀಪ್ ಫೈನಲ್ನಲ್ಲಿ ಆರಾಮದಾಯಕ ಆರಂಭ ಪಡೆಯಲಿಲ್ಲ. 0-2ರಲ್ಲಿ ಹಿನ್ನಡೆ ಅನುಭವಿಸಿದ ಭಾರತೀಯ ಜೋಡಿ ನಂತರ ಅದ್ಭುತವಾಗಿ ಕಮ್ಬ್ಯಾಕ್ ಮಾಡಿ ಸಮಬಲ ಸಾಧಿಸಿತು. 4-4ರಲ್ಲಿ ಪಂದ್ಯ ಟೈ ಆಗಿದ್ದ ವೇಳೆ ಫಲಿತಾಂಶಕ್ಕೆ ಶೂಟ್ ಆಫ್ ಮೊರೆ ಹೋಗಲಾಯಿತು. ಶೂಟ್ ಆಫ್ನಲ್ಲಿ ಭಾರತ 18-17ರಲ್ಲಿ ಗೆದ್ದು ಸ್ವರ್ಣ ಪದಕ ಪಡೆದುಕೊಂಡಿತು.
ಶನಿವಾರ ಭಾರತದ ಪುರುಷರ ಕಾಂಪೌಂಡ್ ತಂಡ ಫ್ರಾನ್ಸ್ ವಿರುದ್ಧ ಗೆದ್ದ ದೇಶಕ್ಕೆ ಮೊದಲ ಪದಕವನ್ನು ತಂದುಕೊಂಡಿತ್ತು. ಅಭಿಷೇಕ್ ಶರ್ಮಾ, ಅಮನ್ ಸೈನಿ ಮತ್ತು ರಜತ್ ಚೌಹಾಣ್ ಫ್ರೆಂಚ್ ತಂಡವನ್ನು 232-230ರ ಅಂತದಲ್ಲಿ ಮಣಿಸಿತ್ತು.
ಇದನ್ನೂ ಓದಿ:ಫಾರ್ಮ್ ಸಮಸ್ಯೆ ಸಾಮಾನ್ಯ ನನಗೂ ಎದುರಾಗಿತ್ತು, ಕೊಹ್ಲಿ ಶೀಘ್ರವೇ ರಾರಾಜಿಸ್ತಾರೆ: ಪೀಟರ್ಸನ್