ನವದೆಹಲಿ: ಒಲಿಂಪಿಕ್ಸ್ ಬೌಂಡ್ ಹಾಗೂ ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಲ್ ರಷ್ಯಾದ ಪೀಟರ್ಸ್ಬರ್ಗ್ನಲ್ಲಿ ನಡೆಯುತ್ತಿರುವ ಗವರ್ನರ್ಸ್ ಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಕಂಚಿನ ಪದಕವನ್ನು ಖಚಿತಪಡಿಸಿದ್ದಾರೆ.
ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಹರಿಯಾಣದ ಬಾಕ್ಸರ್ ಸ್ಥಳೀಯ ಬಾಕ್ಸರ್ ತಮೀರ್ ಗಲಾನೋವ್ ಅವರನ್ನು 5-0 ಅಂತರದಿಂದ ಮಣಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
ಆದರೆ, ಸುಮಿತ್ ಸಂಗ್ವಾನ್(81 ಕೆಜಿ ), ಮೊಹಮ್ಮದ್ ಹುಸಮುದ್ದೀನ್(57 ಕೆಜಿ), ಸಮನ್ ತನ್ವರ್(91 ಕೆಜಿ), ಒಲಿಂಪಿಕ್ ಬೌಂಡ್ ಆಶಿಷ್ ಕುಮಾರ್(75 ಕೆಜಿ) ಮತ್ತು ವಿನೋದ್ ತನ್ವರ್(49ಕೆಜಿ) ವಿಭಾಗದಲ್ಲಿ ಮೊದಲ ಬೌಂಟ್ನಲ್ಲೇ ಸೋಲು ಕಂಡು ನಿರಾಸೆಯನುಭವಿಸಿದ್ದಾರೆ.
ವಿನೋದ್ ರಷ್ಯಾದ ಇಗೊರ್ ತ್ಸರೆಗೊರೊಡ್ಸೆವ್ ವಿರುದ್ಧ 2-3ರಿಂದ ಸೋತರೆ, ಸುಮಿತ್ 0-5ರಿಂದ ಉಜ್ಬೇಕಿಸ್ತಾನದ ಡಿಶೋಡ್ ರುಜ್ಮೆಟೋವ್ಗೆ ಸೋತರು. ಕಾಮನ್ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತ ನಮನ್ ಅವರನ್ನು 0-5ರಿಂದ ಕಜಕಿಸ್ತಾನದ ಐಬೆಕ್ ಓರಲ್ಬೇ ಸೋಲಿಸಿದರು.
ಮತ್ತೊಂದೆಡೆ, ಆಶಿಷ್ ರಷ್ಯಾದ ನಿಕಿತಾ ಕುಜ್ಮಿನ್ ಎದುರು ಒಂದು (2-3)ಅಂಕದ ಅಂತರದಿಂದ ಸೋಲು ಕಂಡರೆ, ಹುಸಾಮುದ್ದೀನ್ ಸರ್ವಾನುಮತದ ತೀರ್ಪಿನಲ್ಲಿ ಉಜ್ಬೇಕಿಸ್ತಾನ್‌ನ ಮಿರಾಜಿಜ್ ಮುರ್ಜಾಖಾಲಿಲೋವ್ ವಿರುದ್ಧ ಸೋತರು.
ಯೂತ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಿದ 7 ಮಹಿಳಾ ಬಾಕ್ಸರ್ಸ್: ಚಿನ್ನಕ್ಕಾಗಿ ನಾಳೆ ಪೈಪೋಟಿ