ನವದೆಹಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಬುಧವಾರ ವಿಶ್ವಾಸ ಉಲ್ಲಂಘನೆಯ ಕಾರಣ ಅದರ ಕಾರ್ಯದರ್ಶಿ ಶಾಜಿ ಪ್ರಭಾಕರನ್ ಅವರನ್ನು ವಜಾಗೊಳಿಸಿದೆ. ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರು ಮಂಗಳವಾರ ಪ್ರಭಾಕರನ್ ಅವರಿಗೆ ವಜಾ ಆದೇಶವನ್ನು ನೀಡಿದ್ದಾರೆ.
-
🚨 AIFF PRESS RELEASE 🚨
— Indian Football Team (@IndianFootball) November 8, 2023 " class="align-text-top noRightClick twitterSection" data="
The All India Football Federation hereby announces that the services of Dr. Shaji Prabhakaran have been terminated due to breach of trust with immediate effect as of November 7, 2023.
The AIFF Deputy Secretary, Mr M Satyanarayan, will take charge as…
">🚨 AIFF PRESS RELEASE 🚨
— Indian Football Team (@IndianFootball) November 8, 2023
The All India Football Federation hereby announces that the services of Dr. Shaji Prabhakaran have been terminated due to breach of trust with immediate effect as of November 7, 2023.
The AIFF Deputy Secretary, Mr M Satyanarayan, will take charge as…🚨 AIFF PRESS RELEASE 🚨
— Indian Football Team (@IndianFootball) November 8, 2023
The All India Football Federation hereby announces that the services of Dr. Shaji Prabhakaran have been terminated due to breach of trust with immediate effect as of November 7, 2023.
The AIFF Deputy Secretary, Mr M Satyanarayan, will take charge as…
"ಎಐಎಫ್‌ಎಫ್ ಅಧ್ಯಕ್ಷರು ಪ್ರಭಾಕರನ್ ಅವರನ್ನು ವಜಾ ಮಾಡಲಾಗಿದೆ. ಅವರು ಇನ್ನು ಮುಂದೆ ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿಯಾಗಿಲ್ಲ. ಉಪ ಕಾರ್ಯದರ್ಶಿ ಸತ್ಯನಾರಾಯಣ ಅವರು ಹಂಗಾಮಿ ಕಾರ್ಯದರ್ಶಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ" ಎಂದು ಎಐಎಫ್‌ಎಫ್ ಉಪಾಧ್ಯಕ್ಷ ಎನ್‌ಎ ಹ್ಯಾರಿಸ್ ಹೇಳಿದ್ದಾರೆ.
ಎಐಎಫ್‌ಎಫ್ ಈ ಬೆಳವಣಿಗೆಯ ಬಗ್ಗೆ ಪತ್ರಿಕಾ ಹೇಳಿಕೆಯನ್ನು ತನ್ನ ಸಾಮಾಜಿಕ ಜಾತಲಾಣದ ಖಾತೆ ಆದ ಎಕ್ಸ್ಆ್ಯಪ್ನಲ್ಲಿ (ಹಿಂದಿನ ಟ್ವಿಟರ್) ಪೋಸ್ಟ್ ಮಾಡಿ ಹಂಚಿಕೊಂಡಿದೆ. "ನವೆಂಬರ್ 7, 2023 ರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ನಂಬಿಕೆಯ ಉಲ್ಲಂಘನೆ ಕಾರಣದಿಂದ ಡಾ. ಶಾಜಿ ಪ್ರಭಾಕರನ್ ಅವರ ಸೇವೆಗಳನ್ನು ಕೊನೆಗೊಳಿಸಲಾಗಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಈ ಮೂಲಕ ಪ್ರಕಟಿಸುತ್ತದೆ. ಎಐಎಫ್‌ಎಫ್ ಉಪ ಕಾರ್ಯದರ್ಶಿ ಎಂ ಸತ್ಯನಾರಾಯಣ್ ಅವರು ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎಐಎಫ್‌ಎಫ್‌ನ ತಕ್ಷಣದಿಂದಲೇ ಜಾರಿಗೆ ಬರಲಿದೆ" ಎಂದು ಬಹಿರಂಗಪಡಿಸಿದೆ.
ಸೆಪ್ಟೆಂಬರ್ 2 ರಂದು ಹೊಸ ವಿತರಣಾ ಅಧಿಕಾರ ವಹಿಸಿಕೊಂಡ ನಂತರ ಮೊದಲ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಭಾಕರನ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಹುದ್ದೆಯನ್ನು ಅಲಂಕರಿಸಿದರು. ಎಐಎಫ್‌ಎಫ್ ನಲ್ಲಿ ಕೆಲಸ ಮಾಡುವ ಮೊದಲು, ಪ್ರಭಾಕರನ್ ಫುಟ್ಬಾಲ್ ದೆಹಲಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಕ್ರೀಡಾ ಒಕ್ಕೂಟದ ಆಡಳಿತವನ್ನು ವಹಿಸಿಕೊಳ್ಳಲು ಅವರು ಹುದ್ದೆಗೆ ರಾಜೀನಾಮೆ ನೀಡಿದರು.
-
AIFF's decision to terminate me comes as a shock. We were working as a team.
— Shaji Prabhakaran (@Shaji4Football) November 8, 2023 " class="align-text-top noRightClick twitterSection" data="
Charging me for 'breach of trust' is a massive allegation.
More on this later. I remain a servant of the beautiful game and thank you all who have supported me in my honest effort for Indian football
">AIFF's decision to terminate me comes as a shock. We were working as a team.
— Shaji Prabhakaran (@Shaji4Football) November 8, 2023
Charging me for 'breach of trust' is a massive allegation.
More on this later. I remain a servant of the beautiful game and thank you all who have supported me in my honest effort for Indian footballAIFF's decision to terminate me comes as a shock. We were working as a team.
— Shaji Prabhakaran (@Shaji4Football) November 8, 2023
Charging me for 'breach of trust' is a massive allegation.
More on this later. I remain a servant of the beautiful game and thank you all who have supported me in my honest effort for Indian football
ವಜಾ ಪ್ರಕ್ರಿಯೆಯ ಬಗ್ಗೆ ಶಾಜಿ ಪ್ರಭಾಕರನ್ ಸಾಮಾಜಿಕ ಜಾಲತಾಣವಾದ ಎಕ್ಸ್ ಆ್ಯಪ್ನಲ್ಲೇ ಪ್ರತಿಕ್ರಿಯೆ ನೀಡಿದ್ದು, ಈ ನಿರ್ಧಾರದಿಂದ ನನಗೆ ಆಘಾತವಾಗಿದೆ ಎಂದು ಹೇಳಿದರು. "ನನ್ನನ್ನು ವಜಾಗೊಳಿಸುವ ಎಐಎಫ್‌ಎಫ್ ನಿರ್ಧಾರವು ಆಘಾತಕಾರಿಯಾಗಿದೆ. ನಾವು ತಂಡವಾಗಿ ಕೆಲಸ ಮಾಡುತ್ತಿದ್ದೆವು. 'ನಂಬಿಕೆಯ ಉಲ್ಲಂಘನೆ'ಗಾಗಿ ನನ್ನ ಮೇಲೆ ಆರೋಪ ಹೊರಿಸುತ್ತಿರುವುದು ದೊಡ್ಡ ಆರೋಪವಾಗಿದೆ. ಈ ಬಗ್ಗೆ ನಂತರ ಚರ್ಚಿಸುತ್ತೇನೆ. ನಾನು ಸುಂದರ ಕ್ರೀಡೆಯ ಸೇವಕನಾಗಿ ಉಳಿದಿದ್ದೇನೆ ಮತ್ತು ಭಾರತೀಯ ಫುಟ್‌ಬಾಲ್‌ಗಾಗಿ ನನ್ನ ಪ್ರಾಮಾಣಿಕ ಪ್ರಯತ್ನದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು" ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ವೀಸಾ ಸಮಸ್ಯೆ ಬಗೆಹರಿಸುವಂತೆ ಪ್ರಧಾನಿಗೆ ಮನವಿ ಮಾಡಿದ ಷಟ್ಲರ್ ಲಕ್ಷ್ಯ ಸೇನ್