ETV Bharat / sports

ಭಾರತಕ್ಕೆ ಮತ್ತೆರಡು ಪದಕ: ಬ್ಯಾಡ್ಮಿಂಟನ್‌ ಡಬಲ್ಸ್‌ನಲ್ಲಿ ಚಿನ್ನ, ಟೇಬಲ್‌ ಟೆನಿಸ್‌ನಲ್ಲೂ ಬಂಗಾರ! - Gold mens double in Badminton

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದೆ. ಕ್ರೀಡಾಕೂಟದ ಕೊನೆಯ ದಿನವಾದ ಇಂದು ಬ್ಯಾಡ್ಮಿಂಟನ್​ ಪುರುಷರ ಡಬಲ್ಸ್ ತಂಡ ಹಾಗೂ ಟೇಬಲ್ ಟೆನ್ನಿಸ್​ ಸಿಂಗಲ್ಸ್​ ತಂಡವೂ ಬಂಗಾರ ಗೆದ್ದಿದೆ.

men's double in Badminton
men's double in Badminton
author img

By

Published : Aug 8, 2022, 6:12 PM IST

Updated : Aug 8, 2022, 7:00 PM IST

ಬರ್ಮಿಂಗ್​ಹ್ಯಾಮ್​​(ಇಂಗ್ಲೆಂಡ್​): ಕಾಮನ್​​ವೆಲ್ತ್ ಗೇಮ್ಸ್​ನ ಅಂತಿಮ ದಿನವಾದ ಇಂದು ಭಾರತದ ಬ್ಯಾಡ್ಮಿಂಟನ್​ ಪುರುಷರ ಡಬಲ್ಸ್ ತಂಡದ​​ ಆಟಗಾರರಾದ ಸಾತ್ವಿಕ್​ ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್​ ಶೆಟ್ಟಿ ಕಮಾಲ್ ಮಾಡಿದರು. ಫೈನಲ್​​ನಲ್ಲಿ ಎದುರಾಳಿ ಆಟಗಾರರ ವಿರುದ್ಧ ಅಧಿಕಾರಯುತ ಪ್ರದರ್ಶನ ನೀಡಿ ಚಿನ್ನಕ್ಕೆ ಮುತ್ತಿಕ್ಕಿದರು.

​ಮತ್ತೊಂದೆಡೆ, ಟೇಬಲ್​ ಟೆನ್ನಿಸ್ ಪುರುಷರ ಸಿಂಗಲ್ಸ್​​ನಲ್ಲಿ ಅಚಂತಾ ಶರತ್ ಫೈನಲ್​ನಲ್ಲಿ ​ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ವಿರುದ್ಧ ಗೆಲುವು ಸಾಧಿಸಿ ಸ್ವರ್ಣ ಪದಕ ತನ್ನದಾಗಿಸಿಕೊಂಡು ಸಂಭ್ರಮಿಸಿದರು. ಈ ಮೂಲಕ ಟಿಟಿಯಲ್ಲಿ 16 ವರ್ಷಗಳ ಬಳಿಕ ಭಾರತದ ಕ್ರೀಡಾಳುವೊಬ್ಬರು ಸ್ವರ್ಣ ಸಾಧನೆ ಮಾಡಿದಂತಾಗಿದೆ. ಇನ್ನೊಂದೆಡೆ, ಟೇಬಲ್ ಟೆನ್ನಿಸ್​​ನಲ್ಲಿ ಭಾರತದ ಸತ್ಯನ್ ಜ್ಞಾನಶೇಖರನ್ ಅವರು ಇಂಗ್ಲೆಂಡ್​​ನ ಡ್ರಿಂಕ್​ಹಾಲ್​ ವಿರುದ್ಧ 11-9 11-3 11-5 8-11 9-11 10-12 11-9 ಅಂತರದಿಂದ ಗೆಲುವು ಸಾಧಿಸಿ ಕಂಚಿಗೆ ಕೊರಳೊಡ್ಡಿದರು.

40ನೇ ವಯಸ್ಸಿನಲ್ಲಿ ಕಮಾನ್ ಮಾಡಿದ ಅಚಂತಾ ಶರತ್ ಕಮಲ್​: ಕಾಮನ್​​ವೆಲ್ತ್ ಕ್ರೀಡಾಕೂಟದ ಕೊನೆಯ ದಿನವಾದ ಇಂದು ಭಾರತದ 40ರ ಹರೆಯದ ಟೆನಿಸ್ ಪಟು ಅಚಂತಾ ಶರತ್ ಕಮಲ್ ಕಮಾಲ್ ಮಾಡಿದ್ದು, ಚಿನ್ನದ ಪದಕ ಗೆದ್ದಿದ್ದಾರೆ. ಎದುರಾಳಿ ವಿರುದ್ಧ 11-13, 11-7, 11-2, 11-6, 11-8 ರಿಂದ ಗೆಲುವು ದಾಖಲಿಸಿದರು. ಇದು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶರತ್ ಗೆದ್ದಿರುವ 13ನೇ ಪದಕವಾಗಿದೆ.

ಕಾಮನ್​​ವೆಲ್ತ್​ನಲ್ಲಿ ಹೊಸ ದಾಖಲೆ ಬರೆದ ಭಾರತ: ಬ್ಯಾಡ್ಮಿಂಟನ್‌ ಸಿಂಗಲ್ಸ್ ಹಾಗೂ ಡಬಲ್ಸ್​​ನಲ್ಲಿ ಭಾರತದ ಅಥ್ಲೀಟ್ಸ್​​ ಮೂರು ಚಿನ್ನದ ಪದಕ ಗೆದ್ದಿದ್ದು, ಈ ಮೂಲಕ ಹೊಸ ದಾಖಲೆ ನಿರ್ಮಾಣಗೊಂಡಿದೆ. ಈಗಾಗಲೇ ಸಿಂಗಲ್ಸ್​​ನಲ್ಲಿ ಪಿ.ವಿ.ಸಿಂಧು, ಲಕ್ಷ್ಯಸೇನ್​ ಚಿನ್ನ ಗೆದ್ದಿದ್ದು, ಇದರ ಬೆನ್ನಲ್ಲೇ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸ್ವರ್ಣ ಸಾಧನೆ ತೋರಿದರು. ಈವರೆಗಿನ ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಭಾರತದ ಬ್ಯಾಡ್ಮಿಂಟನ್​​ ಆಟಗಾರರು ಮೂರು ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು ಎಂಬುದು ಗಮನಾರ್ಹ.

ಪುರುಷರ ಬ್ಯಾಡ್ಮಿಂಟನ್​ ಡಬಲ್ಸ್‌ ತಂಡ ಇಂಗ್ಲೆಂಡ್​ ಜೋಡಿಯ ವಿರುದ್ಧ 21-15, 21-13 ರಿಂದ ಗೆಲುವು ಸಾಧಿಸಿತು. ಇದು ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ದೊರೆತ ಮೊದಲ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ. ಪ್ರತಿಷ್ಟಿತ ಕ್ರೀಡಾಕೂಟದಲ್ಲಿ ಭಾರತ ಇಲ್ಲಿಯವರೆಗೆ 22 ಚಿನ್ನ, 16 ಬೆಳ್ಳಿ, 23 ಕಂಚಿನೊಂದಿಗೆ ಒಟ್ಟು 61 ಪದಕ ಗೆದ್ದಿದೆ.

ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಸ್ವರ್ಣ ಪದಕ; ಬ್ಯಾಡ್ಮಿಂಟನ್​​ನಲ್ಲಿ ಚಿನ್ನ ಗೆದ್ದ ಲಕ್ಷ್ಯಸೇನ್​

Last Updated : Aug 8, 2022, 7:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.