ನವದೆಹಲಿ: ತಮಿಳುನಾಡಿನ ವಿಶ್ವ ದೀನದಯಾಲನ್ ಎಂಬ 18 ವರ್ಷದ ಟೇಬಲ್ ಟೆನಿಸ್ ಆಟಗಾರ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗುವಾಹಟಿಯಿಂದ ಶಿಲ್ಲಾಂಗ್ಗೆ ಟ್ಯಾಕ್ಸಿ ಮೂಲಕ ತೆರಳುವ ವೇಲೆ ಅಪಘಾತ ಸಂಭವಿಸಿದೆ.
ಸೋಮವಾರದಿಂದ ಆರಂಭವಾಗಬೇಕಿದ್ದ 83ನೇ ಸೀನಿಯರ್ ನ್ಯಾಷನಲ್ ಅಂಡ್ ಇಂಟರ್ ಸ್ಟೇಟ್ ಟೇಬಲ್ ಟೆನ್ನಿಸ್ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲು ತಂಡದ ಇತರೆ 3 ಸಹ ಆಟಗಾರರೊಂದಿಗೆ ಗುವಾಹಟಿಯಿಂದ ಶಿಲ್ಲಾಂಗ್ಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ರಮೇಶ್ ಸಂತೋಷ್ ಕುಮಾರ್, ಅಭಿನಾಶ್ ಪ್ರಸನ್ನಾಜಿ ಶ್ರೀನಿವಾಸನ್ ಮತ್ತು ಕಿಶೋರ್ ಕುಮಾರ್ ಎಂಬುವವರು ವಿಶ್ವ ದೀನದಯಾಲನ್ ಜೊತೆಗೆ ಪ್ರಯಾಣಿಸುತ್ತಿದ್ದ ಆಟಗಾರರಾಗಿದ್ದಾರೆ.
ಎದುರಿನಿಂದ ಬರುತ್ತಿದ್ದ 12 ಚಕ್ರಗಳ ಟ್ರೈಲರ್ ಶಾಂಗ್ಬಾಂಗ್ಲಾ ಚೆಕ್ ಪೋಸ್ಟ್ ಬಳಿ ರಸ್ತೆ ವಿಭಜಕಕ್ಕೆ ತಗುಲಿ ನಿಯಂತ್ರಣ ತಪ್ಪಿ ಟ್ಯಾಕ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಟಿಟಿಎಫ್ಐ ಹೇಳಿಕೆಯಲ್ಲಿ ತಿಳಿಸಿದೆ.
-
Very sad to learn that young Table Tennis player from Tamil Nadu, Deenadayalan Vishwa died in an accident at Ri-Bhoi in Meghalaya while on his way to Shillong to participate in the 83rd Senior National Table Tennis Championship. My deepest condolences to his family. RIP pic.twitter.com/eaUweRzdiC
— Kiren Rijiju (@KirenRijiju) April 17, 2022 " class="align-text-top noRightClick twitterSection" data="
">Very sad to learn that young Table Tennis player from Tamil Nadu, Deenadayalan Vishwa died in an accident at Ri-Bhoi in Meghalaya while on his way to Shillong to participate in the 83rd Senior National Table Tennis Championship. My deepest condolences to his family. RIP pic.twitter.com/eaUweRzdiC
— Kiren Rijiju (@KirenRijiju) April 17, 2022Very sad to learn that young Table Tennis player from Tamil Nadu, Deenadayalan Vishwa died in an accident at Ri-Bhoi in Meghalaya while on his way to Shillong to participate in the 83rd Senior National Table Tennis Championship. My deepest condolences to his family. RIP pic.twitter.com/eaUweRzdiC
— Kiren Rijiju (@KirenRijiju) April 17, 2022
ಅಪಘಾತದಲ್ಲಿ ಟ್ಯಾಕ್ಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಶ್ವರನ್ನು ನಾರ್ತ್ ಈಸ್ಟರ್ನ್ ಇಂದಿರಾ ಗಾಂಧಿ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಮೆಡಿಕಲ್ ಸೈನ್ಸ್ಗೆ ಕರೆತರಲಾಗಿತ್ತಾದರೂ ವೈದ್ಯರು ವಿಶ್ವ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ವಿಶ್ವ ಮತ್ತು ಜೊತೆಗಿದ್ದ ಇತರೆ ಮೂವರನ್ನು ಮೇಘಾಲಯ ಸರ್ಕಾರದ ನೆರವಿನಿಂದ ಆಯೋಜಕರು ಆಸ್ಪತ್ರೆಗೆ ದಾಖಲಿಸಿದ್ದರು. ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಹಾಗೂ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಸಂತಾಪ ಸೂಚಿಸಿದ್ದಾರೆ. ಹರಿಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಸಂತಾಪ ಸೂಚಿಸಿ, ವಿಶ್ವ ಕುಟಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ:ಕೌಂಟಿಯಲ್ಲಿ ಪೂಜಾರ ದರ್ಬಾರ್... ಶತಕ ಸಿಡಿಸಿ ಫಾರ್ಮ್ಗೆ ಮರಳಿದ ಟೆಸ್ಟ್ ಸ್ಪೆಷಲಿಸ್ಟ್