ನವದೆಹಲಿ: ಕೋವಿಡ್ 19 ವೈರಸ್ನಿಂದ ಮೃಪಟ್ಟಿರುವ ಮಾಜಿ ಹಾಕಿ ಆಟಗಾರರಾದ ಎಂಕೆ ಕೌಶಿಕ್ ಮತ್ತು ರವೀಂದರ್ ಪಾಲ್ ಸಿಂಗ್ ಅವರ ನೊಂದ ಕುಟಂಬಕ್ಕೆ ನೆರವಾಗಲೂ 5 ಲಕ್ಷ ರೂಪಾಯಿಗಳ ನೆರವನ್ನು ಘೋಷಿಸಿರುವುದಾಗಿ ಕ್ರೀಡಾ ಸಚಿವ ಕಿರಣ್ ರಿಜಿಜು ಗುರುವಾರ ತಿಳಿಸಿದ್ದಾರೆ.
ಕೌಶಿಕ್ ಮತ್ತು ರವೀಂದರ್ ಪಾಲ್ ಸಿಂಗ್ 1980ರ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ ತಂಡದ ಭಾಗವಾಗಿದ್ದರು. ಅವರು ಇತ್ತೀಚೆಗೆ ಕೋವಿಡ್ 19 ವೈರಸ್ಗೆ ತುತ್ತಾಗಿ ನಿಧನರಾಗಿದ್ದರು.
ಕೋವಿಡ್ 19 ನಿಂದ ನಾವು ಇತ್ತೀಚೆಗೆ ಇಬ್ಬರು ಶ್ರೇಷ್ಠ ಹಾಕಿ ಆಟಗಾರನ್ನು ಕಳೆದುಕೊಂಡಿದ್ದೇವೆ. ಭಾರತೀಯ ಕ್ರೀಡಾ ಕ್ಷೇತ್ರ ಎಂಕೆ ಕೌಶಿಕ್ ಮತ್ತು ರವೀಂದರ್ ಪಾಲ್ ಸಿಂಗ್ ಜೀ ಅವರ ಕೊಡುಗೆಯನ್ನು ಸದಾ ಸ್ಮರಿಸುತ್ತದೆ ಎಂದು ರಿಜಿಜು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.
ಲೆಜೆಂಡರಿ ಕ್ರೀಡಾಪಟುಗಳಿಗೆ ಬೆಂಬಲದ ಸೂಚಕವಾಗಿ ಅವರ ನೊಂದಿರುವ ಕುಟುಂಬಗಳಿಗೆ ನೆರವಾಗಲು ಭಾರತೀಯ ಕ್ರೀಡಾ ಸಚಿವಾಲಯದ ವತಿಯಿಂದ ತಲಾ 5 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದೇವೆ. ದುಃಖದ ಈ ಸಮಯದಲ್ಲಿ ನಾವು ಅವರ ಜೊತೆ ನಿಲ್ಲುತ್ತೇವೆ ಎಂದು ಬರೆದು ಕೊಂಡಿದ್ದಾರೆ.
ಎರಡು ವಾರಗಳ ಕಾಲ ಲಖನೌದ ಆಸ್ಪತ್ರೆಯಲ್ಲಿದ್ದ 60 ವರ್ಷದ ಸಿಂಗ್ ಮಾರಕ ವೈರಸ್ಗೆ ಬಲಿಯಾದರೆ, 66 ಕೌಶಿಕ್ ಮೂರು ವಾರಗಳ ಬಳಲಿಕೆಯ ನಂತರ ಇಹಲೋಕ ತ್ಯಜಿಸಿದ್ದರು.
ಇದನ್ನು ಓದಿ:ನಿಮಗೆ ಬೇಕಾದ ಬೆಂಬಲ ಕೊಡ್ತೀವಿ, ಬೇರೆ ದೇಶಗಳ ಪ್ರೋಟೋಕೋಲ್ ಮುರಿಯಬೇಡಿ : ಅಥ್ಲೀಟ್ಗಳಿಗೆ ರಿಜಿಜು ಎಚ್ಚರಿಕೆ