ETV Bharat / sports

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ಆಟಗಾರ ಎಂ.ಕೆ ಕೌಶಿಕ್ ಕೋವಿಡ್‌ಗೆ ಬಲಿ

author img

By

Published : May 9, 2021, 8:25 AM IST

1980 ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಹಾಕಿ ತಂಡದ ಸದಸ್ಯ ಕೌಶಿಕ್ ಅವರು, ಏಪ್ರಿಲ್ 17 ರಂದು ಕೋವಿಡ್​-19 ಪರೀಕ್ಷೆಗೆ ಒಳಗಾಗಿದ್ದು, ಸೋಂಕು ಇರುವುದು ದೃಢಪಟ್ಟಿತ್ತು. ಆ ಬಳಿಕ ಅವರು ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ತರಬೇತುದಾರ ಎಂ ಕೆ ಕೌಶಿಕ್ ನಿಧನ
ತರಬೇತುದಾರ ಎಂ ಕೆ ಕೌಶಿಕ್ ನಿಧನ

ನವದೆಹಲಿ: ಭಾರತದ ಮಾಜಿ ಹಾಕಿ ಆಟಗಾರ ಮತ್ತು ತರಬೇತುದಾರ ಎಂ.ಕೆ ಕೌಶಿಕ್ (66) ಅವರು ಕೋವಿಡ್​​ ಸೋಂಕು ತಗುಲಿ ಸಾವನ್ನಪ್ಪಿದ್ದಾರೆ.

Hockey India griefs the loss of Mr. M. K. Kaushik, Gold Medal winning Olympian and former Coach of the Indian Hockey Team. 🕯#IndiaKaGame pic.twitter.com/CQxcTdry3D

— Hockey India (@TheHockeyIndia) May 8, 2021

ಕೌಶಿಕ್ ಅವರು ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳಿಗೆ ತರಬೇತುದಾರರಾಗಿದ್ದರು. ಅವರ ತರಬೇತಿಯಡಿಯಲ್ಲಿ, 1998ರ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ತಂಡ ಚಿನ್ನದ ಪದಕ ಗೆದ್ದಿತ್ತು. ಅಲ್ಲದೆ, ಭಾರತೀಯ ಮಹಿಳಾ ತಂಡವು 2006 ರಲ್ಲಿ ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಸಾಧನೆ ಮಾಡಿದೆ.

ಕೌಶಿಕ್ ಸಾಧನೆ ಪರಿಗಣಿಸಿದ ಭಾರತ ಸರ್ಕಾರ, 2002 ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ, 1998 ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.

ಇದನ್ನೂ ಓದಿ: ಕೋವಿಡ್-19ಗೆ ಬಲಿಯಾದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ಆಟಗಾರ ರವೀಂದ್ರ ಪಾಲ್ ಸಿಂಗ್

ನವದೆಹಲಿ: ಭಾರತದ ಮಾಜಿ ಹಾಕಿ ಆಟಗಾರ ಮತ್ತು ತರಬೇತುದಾರ ಎಂ.ಕೆ ಕೌಶಿಕ್ (66) ಅವರು ಕೋವಿಡ್​​ ಸೋಂಕು ತಗುಲಿ ಸಾವನ್ನಪ್ಪಿದ್ದಾರೆ.

ಕೌಶಿಕ್ ಅವರು ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳಿಗೆ ತರಬೇತುದಾರರಾಗಿದ್ದರು. ಅವರ ತರಬೇತಿಯಡಿಯಲ್ಲಿ, 1998ರ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ತಂಡ ಚಿನ್ನದ ಪದಕ ಗೆದ್ದಿತ್ತು. ಅಲ್ಲದೆ, ಭಾರತೀಯ ಮಹಿಳಾ ತಂಡವು 2006 ರಲ್ಲಿ ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಸಾಧನೆ ಮಾಡಿದೆ.

ಕೌಶಿಕ್ ಸಾಧನೆ ಪರಿಗಣಿಸಿದ ಭಾರತ ಸರ್ಕಾರ, 2002 ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ, 1998 ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.

ಇದನ್ನೂ ಓದಿ: ಕೋವಿಡ್-19ಗೆ ಬಲಿಯಾದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ಆಟಗಾರ ರವೀಂದ್ರ ಪಾಲ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.